Advertisement
ಕಚೇರಿಯಿಲ್ಲಗ್ರಾ.ಪಂ. ಮಟ್ಟದ ಕಾರ್ಯಕರ್ತರ ಜತೆ ಸಮಾಲೋಚನೆ, ಸಭೆ ನಡೆಸಲು, ಮಾಹಿತಿ ನೀಡಲು, ಕಾರ್ಯಾಗಾರ ಏರ್ಪಡಿಸಲು ಅಗತ್ಯವಿರುವ ಭವನವೇ ವಿಶೇಷಚೇತನ ಭವನ. ಇಲ್ಲಿ ವಿಶೇಷಚೇತನ ಮಕ್ಕಳ ಶೈಕ್ಷಣಿಕ ತರಬೇತಿಗೂ ವ್ಯವಸ್ಥೆ ಮಾಡಬಹುದಾಗಿದೆ. ಉಡುಪಿ ಹಾಗೂ ಕಾರ್ಕಳದಲ್ಲಿ ಇಂತಹ ಭವನಗಳಿದ್ದು ಕುಂದಾಪುರದಲ್ಲಿ ಅರೆ ನಿರ್ಮಾಣ ಸ್ಥಿತಿಯಲ್ಲಿದೆ. ಸದ್ಯ ಕುಂದಾಪುರದಲ್ಲಿ ತಾಲೂಕು ಮಟ್ಟದ ಸಿಬಂದಿಗೆ ತಾ.ಪಂ. ನಲ್ಲಿಯೇ ಕುರ್ಚಿ, ಟೇಬಲ್ ನೀಡಲಾಗಿದ್ದು ಹಿಂದಿನ ಉಪಾಧ್ಯಕ್ಷರು ತಮ್ಮ ಕೊಠಡಿಯಲ್ಲಿಯೇ ಮಾಸಿಕ ಸಭೆ ನಡೆಸಲು ಅನುವು ಮಾಡಿಕೊಟ್ಟಿದ್ದರು. ತಾಲೂಕು ಪಂಚಾಯತ್‌ನ ತಳ ಅಂತಸ್ತಿನಲ್ಲಿ ಇವರಿಗೆ ಸಭೆ ನಡೆಸಲು ಅನುವು ಮಾಡಿ ಕೊಡಬೇಕೆಂಬ ನಿಯಮವೇ ಇದೆ.
ಕಾರ್ಯಕರ್ತರಿಗೆ ಮಾಸಿಕ ಗೌರವಧನ ಸೇರಿದಂತೆ ವಿಶೇಷಚೇತನರಿಗೆ ಸವಲತ್ತು ಇತ್ಯಾದಿ ನೀಡಲು ಎಂದೇ ತಾ.ಪಂ., ಗ್ರಾ.ಪಂ. ಹಾಗೂ ಇತರ ಇಲಾಖೆಗಳು ತಮ್ಮ ಅನುದಾನದಲ್ಲಿ ಶೇ.3ನ್ನು ತೆಗೆದಿರಿಸಬೇಕೆಂಬ ಕಟ್ಟು ಕಟ್ಟಳೆ ಇದೆ. ಹೀಗೆ ಪ್ರತಿ ವರ್ಷ ಲಕ್ಷಾಂತರ ರೂ. ತೆಗೆದಿಡಲಾಗುತ್ತದೆ. ಆದರೆ 8 ಲಕ್ಷ ರೂ. ವೆಚ್ಚದ ಭವನ ವೊಂದನ್ನು ಪೂರ್ಣ ನಿರ್ಮಾಣ ಮಾಡಲು ಇನ್ನೂ ಸಾಧ್ಯವಾಗಿಲ್ಲ. ತಾ.ಪಂ.ಗೆ ಬಂದ 1 ಕೋ.ರೂ. ಅನುದಾನದ ಮೀಸಲು ನಿಧಿ 5 ಲಕ್ಷ ರೂ.ಗಳಲ್ಲಿ ಒಂದು ಹಂತದ ಕಾಮಗಾರಿಯಾಗಿದೆ. ಉಳಿಕೆ 3 ಲಕ್ಷ ರೂ. ತೆಗೆದಿರಿಸಲಾಗಿದೆ. ತಾಂತ್ರಿಕ ಕಾರಣದಿಂದ ಕಾಮಗಾರಿ ನಡೆಯುತ್ತಿಲ್ಲ. ಅನುದಾನ ಇದ್ದರೂ ಕ್ರಿಯಾಯೋಜನೆ, ಟೆಂಡರ್‌ಕಾರ್ಯ ನಡೆಸದೇ ತಿಂಗಳುಗಳಾದ ಕಾರಣ ಕಾಮಗಾರಿ ನಿರುಪಯುಕ್ತವಾಗುತ್ತಿದೆ. ಶೌಚಾಲಯ
ಎಲ್ಲಕ್ಕಿಂತ ಮೊದಲು ವಿಶೇಷಚೇತನರಿಗಾಗಿ ಭವನದ ಸಮೀಪ ಶೌಚಾಲಯ ನಿರ್ಮಿಸಲಾಗಿದೆ. ಇದಕ್ಕಾಗಿ ಸುಮಾರು 1.25 ಲಕ್ಷ ರೂ. ವ್ಯಯಿಸಲಾಗಿದೆ. ವಿಶೇಷ ಚೇತನರಿಗೆ ಬೇಕಾಗುವ ಮಾದರಿಯಲ್ಲಿ ಇದನ್ನು ಪೂರ್ಣ ಗೊಳಿಸಲಾಗಿದೆ.
Related Articles
Advertisement
ಸರಕಾರಿ ಸವಲತ್ತುವಿಶೇಷಚೇತನರಿಗೆ ಸರಕಾರದಿಂದ ದೊರೆಯುವ ಸವಲತ್ತುಗಳ ಕುರಿತು ಮಾಹಿತಿ ನೀಡಲು, ಅವರ ಸಮಸ್ಯೆಗಳಿಗೆ ಸ್ಪಂದಿಸಲು, ಅವರಿಗೆ ಸೂಕ್ತ ವೈದ್ಯಕೀಯ, ಶೈಕ್ಷಣಿಕ, ಸಾಮಾಜಿಕ, ಸರಕಾರಿ ನೆರವು ನೀಡಲು 1995ರ ಕಾಯ್ದೆಯಂತೆ ಪ್ರತಿ ಗ್ರಾಮ ಪಂಚಾಯತ್‌ಗೆ ಓರ್ವ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ (ವಿಆರ್‌ಡಬ್ಲ್ಯು) ಪ್ರತಿನಿಧಿಯನ್ನು ನೇಮಿಸಲಾಗಿದೆ. ಇವರಿಗೆ ಮಾಸಿಕ 3 ಸಾವಿರ ರೂ. ಗೌರವಧನ ನೀಡಲಾಗುತ್ತಿದೆ. ಇವರ ಮೇಲ್ವಿಚಾರಣೆಗೆ ತಾಲೂಕು ಮಟ್ಟದಲ್ಲಿ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತ (ಎಂಆರ್‌ಡಬ್ಲ್ಯು) ಅವರನ್ನು ನೇಮಿಸಲಾಗಿದೆ. ಅವಿಭಜಿತ ಕುಂದಾಪುರ ತಾಲೂಕಿನಲ್ಲಿ 65 ಗ್ರಾ.ಪಂ.ಗಳಿದ್ದರೂ 38 ಪಂ.ಗಳಲ್ಲಿ ಮಾತ್ರ ಪ್ರತಿನಿಧಿಗಳಿದ್ದಾರೆ. ಎಸೆಸೆಲ್ಸಿ ತೇರ್ಗಡೆ ಅಥವಾ ಅನುತ್ತೀರ್ಣರಾದ ವಿಶೇಷಚೇತನರು ಈ ಹುದ್ದೆಗೆ ಅರ್ಹರು. ಹಾಗಿದ್ದರೂ ಬಾಕಿ ಉಳಿದೆಡೆ ನೇಮಕಾತಿ ಪ್ರಕ್ರಿಯೆ ಇನ್ನೂ ನಡೆದಿಲ್ಲ. 6,800 ಮಂದಿ
ಅವಿಭಜಿತ ಕುಂದಾಪುರ ತಾಲೂಕಿನಲ್ಲಿ 6,800 ಮಂದಿ ವಿಶೇಷಚೇತನರಿದ್ದಾರೆ. ಇವರಲ್ಲಿ ವಿವಿಧ ವರ್ಗಗಳ ವೈಕಲ್ಯ ಹೊಂದಿದವರಿದ್ದು ಇವರಿಗೆ ಸ್ಮಾರ್ಟ್ ಕಾರ್ಡ್ ವಿತರಿಸುವ ಕಾರ್ಯ ಚಾಲನೆಯಲ್ಲಿದೆ. ಕೆಲವರ ಹೆಸರು ದ್ವಿಪ್ರತಿಯಲ್ಲಿ ದಾಖಲಾಗಿದ್ದು ಸ್ಮಾರ್ಟ್ ಕಾರ್ಡ್ ವಿತರಣೆ ಬಳಿಕ ಈ ಗೊಂದಲ ನಿವಾರಣೆಯಾಗಲಿದೆ.
– ಮಂಜುನಾಥ ಹೆಬ್ಟಾರ್, ಎಂಆರ್‌ಡಬ್ಲ್ಯು