ದಲ್ಲಿ ಯಾರೂ ಯಾವುದೇ ಕಾರಣಕ್ಕೂ ಮನೆ ಬಿಟ್ಟು ಬರುವಂತಿಲ್ಲ ಎಂಬ ಸಂದೇಹ ಹರಡುತ್ತಿದೆ.ಇದಕ್ಕೆ ಪೂರಕವಾಗಿ ಕುಂದಾಪುರ ಉಪವಿಭಾಗ ಎಎಸ್‌ಪಿ ಹರಿರಾಮ್‌ಶಂಕರ್ ಮಾರ್ಗಸೂಚಿಸಿದ್ಧಪಡಿಸಿದ್ದು, ಸೋಮವಾರದಿಂದಲೇ ಜಾರಿಗೆ ಬರಲಿವೆ. ಸೀಲ್‌ಡೌನ್ ಎಂಬ ಪದಬಳಕೆ ಮಾಡದೇ ಇದ್ದರೂ ಅಂಥದೇ ಕ್ರಮಗಳ ಜಾರಿಗೆ ಪ್ರಯತ್ನಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.
Advertisement
ಸರಕಾರ ನಿಗದಿಪಡಿಸಿದ ವ್ಯಕ್ತಿಗಳೇ ಆವಶ್ಯಕ ವಸ್ತುಗಳನ್ನು ಮನೆ ಮನೆಗೆ ತಲುಪಿಸಲಿದ್ದಾರೆ. ಅನಗತ್ಯವಾಗಿ ರಸ್ತೆಯಲ್ಲಿ ಓಡಾಡುವವರ ವಾಹನಗಳನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆ ತೀವ್ರಗೊಳ್ಳಲಿದೆ. ಎಲ್ಲ ವಾರ್ಡ್‌ಗಳಿಗೆ, ಸುಮಾರು 200 ಮನೆಗಳಿಗೆ 1ರಂತೆವಾಹನ ಹಾಗೂ ಇಬ್ಬರನ್ನು ನೇಮಿಸಲಾಗಿದ್ದು, ಅವರು ತರಕಾರಿ ಹಾಗೂ ದಿನಸಿ ವಸ್ತುಗಳನ್ನು ಮನೆ ಮನೆಗೆ ತಲುಪಿಸಲಿದ್ದಾರೆ. ವೈದ್ಯಕೀಯ ಕಾರಣಗಳಿಗಾಗಿ ಮಾತ್ರ ಜನರನ್ನು, ವಾಹನಗಳನ್ನು ಬಿಡಲಾಗುತ್ತದೆ. ಕುಂದಾಪುರ ಉಪ ವಿಭಾಗದ 64 ಪಿಡಿಒಗಳು, ಇಬ್ಬರು ತಾ.ಪಂ.ಇಒಗಳು ಇದರ ನಿರ್ವಹಣೆ ಮಾಡಲಿದ್ದಾರೆ. ಇದಕ್ಕೆ ಉಡುಪಿ ಜಿ.ಪಂ. ಸಿಇಒ ಒಪ್ಪಿಗೆ ಸೂಚಿಸಿದ್ದು, ಎಲ್ಲ ಠಾಣೆಗಳ ಎಸ್‌ಐಗಳು ಗೊತ್ತುಪಡಿಸಿದ ವಾರ್ಡ್ ಸದಸ್ಯರು ಹಾಗೂ ಪಿಡಿಒಗಳ ಸಂಪರ್ಕದಲ್ಲಿರುತ್ತಾರೆ. ಎರಡು – ಮೂರು ದಿನಗಳಲ್ಲಿ ಈ ವ್ಯವಸ್ಥೆ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದು ಶೇ. 100 ಲಾಕ್‌ಡೌನ್‌ಗೆ ಸಹಕಾರಿಯಾಗಲಿದೆ. ಈ ಪ್ರಯೋಗವನ್ನು ಗ್ರಾಮಾಂತರದಲ್ಲಿ ಆರಂಭಿಸುತ್ತಿದ್ದು, ಪುರಸಭೆ ವ್ಯಾಪ್ತಿಯನ್ನು ಸದ್ಯಕ್ಕೆ ಹೊರಗಿಡಲಾಗಿದೆ. ಕುಂದಾಪುರ ನಗರಕ್ಕೆ ಜನ ಅನಗತ್ಯವಾಗಿ ಬರುವುದನ್ನು ತಡೆಯಲು ಈ ಉಪಕ್ರಮ ಕೈಗೊಳ್ಳಲಾಗಿದೆ.