Advertisement
ಕುಂದಾಪುರ ವಿನಾಯಕ ಚಿತ್ರಮಂದಿರ ಬಳಿಯ ರಿಕ್ಷಾ ನಿಲ್ದಾಣದಲ್ಲಿರುವ ಅಂಕದಕಟ್ಟೆಯ ನಿವಾಸಿ ಸತೀಶ್ ಪ್ರಭು ಅವರು 5 ಕಿ.ಮೀ. ವರೆಗೆ ಗ್ರಾಹಕರಿಂದ ಕೇವಲ 1 ರೂ. ಮಾತ್ರ ಬಾಡಿಗೆ ಪಡೆಯುತ್ತಿದ್ದಾರೆ. ಅವರ ಈ ಸೇವೆ ಐದು ದಿನಗಳ ಕಾಲ ಇರಲಿದೆ.
ಪ್ರಧಾನಿಯಾಗಿ ಮೋದಿ ಅವರು ಒಂದು ವರ್ಷ ಪೂರೈಸಿದಾಗ 2 ದಿನ ಮಾತ್ರ ಈ ಸೇವೆ ನೀಡಿದರೆ, 2ನೇ ವರ್ಷ 3 ದಿನ, 3ನೇ ವರ್ಷ 4, 4ನೇ ವರ್ಷಕ್ಕೆ 1 ರೂ. ಬಾಡಿಗೆ ಸೇವೆಯನ್ನು 5 ದಿನಗಳ ಕಾಲ ನೀಡಲಿದ್ದಾರೆ. ಪ್ರತಿ ವರ್ಷದಂತೆ ಈವರೆಗೆ ಸುಮಾರು 500 ಕ್ಕೂ ಹೆಚ್ಚು ಮಂದಿಗೆ ಇದೇ ರೀತಿ 1 ರೂ. ಮಾತ್ರ ಬಾಡಿಗೆ ಪಡೆದಿದ್ದೇನೆ. 4ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಈವರೆಗೆ 15 ಮಂದಿಗೆ 5 ಕಿ.ಮೀ. ವರೆಗೆ 1 ರೂ. ಬಾಡಿಗೆ ಪಡೆದಿದ್ದೇನೆ ಎಂದಿದ್ದಾರೆ. ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಲಿ
ಕೃಷಿಕರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಿದಂತೆ, 60 ವರ್ಷ ದಾಟಿದ ರಿಕ್ಷಾ ಚಾಲಕರಿಗೂ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಿದರೆ ಸಾಕಷ್ಟು ಅನುಕೂಲವಾಗಲಿದೆ. ಅದಲ್ಲದೆ ಹಿಂದಿನವರಿಗೆ ವಿದ್ಯಾಭ್ಯಾಸವಿಲ್ಲದ್ದರೂ, ರಿಕ್ಷಾ ಚಾಲನೆ, ಚಾಲನಾ ನಿಯಮ ಎಲ್ಲ ಗೊತ್ತಿದ್ದರೂ, 10ನೇ ತರಗತಿ ಪಾಸ್ ಆಗಿಲ್ಲವೆಂದು ಪರವಾನಿಗೆ ನೀಡದಿರುವುದು ಸರಿಯಲ್ಲ ಎಂದವರು ಹೇಳಿದರು.
Related Articles
ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ವೈಖರಿಯನ್ನು ಮೆಚ್ಚಿ, ಜನರಿಗೆ ಈ ಸೇವೆ ನೀಡುತ್ತಿದ್ದೇನೆ. ಅವರು ನನಗೆ ಮಾತ್ರವಲ್ಲ, ದೇಶದ ಹೆಚ್ಚಿನ ಜನರಿಗೆ ಇಷ್ಟವಾಗಿದ್ದಾರೆ. ಅವರಂತಹ ನಾಯಕರ ಅಗತ್ಯತೆ ನಮ್ಮ ದೇಶಕ್ಕಿದೆ. ಇನ್ನು ಒಂದು ವರ್ಷ ಅವರ ಆಡಳಿತಾವಧಿಯಿದ್ದು, ದೇಶಕ್ಕೆ ಇನ್ನಷ್ಟು ಒಳ್ಳೆಯ ಕಾರ್ಯಗಳನ್ನು ಮಾಡುವಂತಾಗಲಿ.
– ಸತೀಶ್ ಪ್ರಭು, ರಿಕ್ಷಾ ಚಾಲಕ
Advertisement