Advertisement
ತಾಲೂಕು ರಚನೆ2017ರ ಡಿ.16ರಂದು ಬೈಂದೂರು ತಾಲೂಕು ಪ್ರತ್ಯೇಕ ಘೋಷಣೆಗೆ ಆಕ್ಷೇಪಣೆ ಸಲ್ಲಿಸಲು 30 ದಿನಗಳ ಗಡುವು ನೀಡಿ ಅಧಿಸೂಚನೆ ಹೊರಡಿಸಲಾಗಿತ್ತು. 2018ರ ಜ.27ರಂದು ಈ ಕುರಿತು ಅಧಿಸೂಚನೆ ಹೊರಡಿಸಿತು. ಕುಂದಾಪುರ ತಾಲೂಕಿನಲ್ಲಿದ್ದ 101 ಗ್ರಾಮಗಳ ಪೈಕಿ 26 ಗ್ರಾಮಗಳನ್ನು ಹೊಸ ತಾಲೂಕಿಗೆ ಸೇರಿಸಲಾಗಿತ್ತು.
ತಾಲೂಕು ರಚನೆ ಬಳಿಕ ಎರಡನೆ ಹಂತವಾಗಿ ತಾಲೂಕು ಪಂಚಾಯತ್ ರಚನೆಗೆ ಮುಂದಾಗಿದೆ. ಇದರನ್ವಯ ಶಿರೂರು ಪಂಚಾಯತ್‌ನ ಶಿರೂರು, ಪಡುವರಿ ಪಂ., ಉಪ್ಪುಂದ ಪಂ., ಬಿಜೂರು ಪಂ., ಕೆರ್ಗಾಲ್ ಪಂಚಾಯತ್‌ನ ಕೆರ್ಗಾಲ್ ಹಾಗೂ ನಂದನವನ, ಕೊಲ್ಲೂರು ಪಂ., ಜಡ್ಕಲ್ ಪಂ.ನ ಜಡ್ಕಲ್, ಮುದೂರು, ಗೋಳಿಹೊಳೆ ಗ್ರಾ.ಪಂ.ನ ಗೋಳಿಹೊಳೆ, ಮುದೂರು, ಕಾಲೊ¤àಡು ಪಂ., ಕಂಬದಕೋಣೆಯ ಕಂಬದಕೋಣೆ, ಹೆರಂಜಾಲು, ಹೇರೂರು ಪಂಚಾಯತ್‌ನ ಹೇರೂರು, ಉಳ್ಳೂರು 2, ಕಿರಿಮಂಜೇಶ್ವರ ಪಂ., ನಾವುಂದ ಪಂ., ಮರವಂತೆ ಪಂ., ಯಡ್ತರೆ ಪಂ., ಬೈಂದೂರು ಪಂ.ನ ಬೈಂದೂರು, ತೆಗ್ಗರ್ಸೆ, ಹಳ್ಳಿಹೊಳೆ ಪಂ., ನಾಡಾ ಪಂ.ನ ನಾಡಾ, ಹಡವು, ಬಡಾಕೆರೆ ಗ್ರಾಮಗಳು ಹೊಸದಾಗಿ ರಚನೆಯಾಗುವ ತಾಲೂಕು ಪಂಚಾಯತ್ ವ್ಯಾಪ್ತಿಗೆ ಸೇರಲಿವೆ. ತಾ.ಪಂ. ಸದಸ್ಯರು
ಪ್ರಸ್ತುತ 37 ಸದಸ್ಯಬಲ ಹೊಂದಿದ ಕುಂದಾಪುರ ತಾ.ಪಂ. ಕಿರಿದಾಗಲಿದೆ. 14 ತಾಲೂಕು ಪಂಚಾಯತ್ ಸದಸ್ಯರು, 3 ಜಿಲ್ಲಾ ಪಂಚಾಯತ್ ಸದಸ್ಯರು ಹೊಸ ತಾ.ಪಂ.ನಲ್ಲಿ ಇರಲಿದ್ದಾರೆ.
Related Articles
Advertisement
ಕಟ್ಟಡತಾತ್ಕಾಲಿಕವಾಗಿ ಬೈಂದೂರು ತಾ.ಪಂ. ಈಗ ಇರುವ ಸ್ತ್ರೀಶಕ್ತಿ ಸಂಘದ ಕಟ್ಟಡದಲ್ಲಿ ಕಾರ್ಯನಿರ್ವಹಿಸಲಿದೆ. ನಂತರ ಹೊಸ ಕಟ್ಟಡ ರಚನೆಗೆ ಅನುದಾನ ಬಿಡುಗಡೆಯಾಗಬೇಕಿದೆ. ಅಭಿವೃದ್ಧಿಗೆ ವರದಾನ
ಪ್ರತ್ಯೇಕ ತಾ.ಪಂ. ರಚನೆಯಾದರೆ ಆ ಪ್ಯಾಪ್ತಿಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ದೊರೆಯಲಿದೆ. ವಾರ್ಷಿಕ ಅನುದಾನ, ಉದ್ಯೋಗ ಖಾತ್ರಿ, ವಸತಿ ಯೋಜನೆಗಳು ಹೀಗೆ ಎಲ್ಲವೂ ಪ್ರತ್ಯೇಕ ದೊರೆಯಲಿದೆ. ಇದರಿಂದಾಗಿ ಎರಡೂ ತಾಲೂಕಿಗೆ ಪ್ರಯೋಜನ ಆಗಲಿದೆ. ಚುನಾವಣೆ ಇಲ್ಲ
ಹೊಸದಾಗಿ ಬೈಂದೂರು ತಾ.ಪಂ. ರಚನೆಯಾದರೂ ಚುನಾವಣೆ ಸದ್ಯಕ್ಕಿಲ್ಲ. ಈಗ ಇರುವ ಸದಸ್ಯರೇ ಹೊಸ ಆಡಳಿತ ಮಂಡಳಿ ರಚಿಸಿ ತಾ.ಪಂ. ಸಭೆ ನಡೆಸಲು ಕಾನೂನಿನಲ್ಲಿ ಅವಕಾಶ ಇದೆ. ಅವರು ಆಯ್ಕೆಯಾಗಿ ಐದು ವರ್ಷದ ಅವಧಿಯಾಗುವಾಗ ನಡೆಯುವ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲೇ ಚುನಾವಣೆ ನಡೆಯುತ್ತದೆ. ಅಧ್ಯಕ್ಷ, ಉಪಾಧ್ಯಕ್ಷ
ತಾ.ಪಂ.ಗೆ ಈಗ ಜಿ.ಪಂ.ನಲ್ಲಿ ಪ್ರಭಾರ ಯೋಜನಾಧಿಕಾರಿಯಾಗಿರುವ ಭಾರತಿ ಅವರನ್ನು ಕಾರ್ಯನಿರ್ವಹಣಾಧಿಕಾರಿ ಯಾಗಿ ನೇಮಿಸಿ ಆದೇಶ ಹೊರಡಿಸಿದೆ. ಪ್ರತ್ಯೇಕ ತಾ.ಪಂ. ರಚನೆಗೆ ಇನ್ನೂ ಗಜೆಟ್ ಆದೇಶ ಹೊರಬಿದ್ದಿಲ್ಲ. ಅನಂತರ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಮೀಸಲಾತಿ ನಿಗದಿಯಾಗುತ್ತದೆ. ಹೊಸ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆದು ಇದೇ 14 ಮಂದಿಗೆ ಪ್ರತ್ಯೇಕ ಸಭೆ ನಡೆಯಲು ಅವಕಾಶ ಇದೆ. ಈಗ ಕುಂದಾಪುರ ತಾ.ಪಂ. ಅಧ್ಯಕ್ಷೆಯಾಗಿರುವ ಶ್ಯಾಮಲಾ ಕುಂದರ್ ಅವರೇ ಬೈಂದೂರು ತಾ.ಪಂ. ವ್ಯಾಪ್ತಿಗೆ ಒಳಪಡಲಿದ್ದಾರೆ. ಆದ್ದರಿಂದ ಕುಂದಾಪುರ ತಾ.ಪಂ. ಅಧ್ಯಕ್ಷರೂ ಬದಲಾಗಲಿದ್ದಾರೆ. ಅಧಿಸೂಚನೆ ಬಂದ ಬಳಿಕ ರಚನೆ
ತಾ.ಪಂ.ನಿಂದ ಅವಶ್ಯವಿರುವ ಎಲ್ಲ ಮಾಹಿತಿಗಳನ್ನೂ ಕಳುಹಿಸಿಕೊಡಲಾಗಿದೆ. ಸರಕಾರದ ಅಧಿಕೃತ ಅಧಿಸೂಚನೆ ಬಂದ ಬಳಿಕ ಹೊಸ ತಾ.ಪಂ. ಮಂಡಳಿ ರಚನೆಯಾಗಲಿದೆ. ಇಒ ನೇಮಕ ಮೂಲಕ ಅದಕ್ಕೆ ಚಾಲನೆ ದೊರೆತಿದೆ.
– ಕಿರಣ್ ಪೆಡೆ°àಕರ್ ಇಒ, ಕುಂದಾಪುರ ತಾ.ಪಂ.