Advertisement

ಕುಂದಾಪುರ: ಕಾಮಗಾರಿ ಬಹುತೇಕ ಸ್ಥಗಿತ?; ಜನರ ನಿರೀಕ್ಷೆ ಹುಸಿ 

01:00 AM Feb 24, 2019 | Harsha Rao |

ಕುಂದಾಪುರ: ಬಹುನಿರೀಕ್ಷಿತ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸ್ಥಗಿತಗೊಂಡ ಲಕ್ಷಣಗಳು ಗೋಚರವಾಗುತ್ತಿವೆ. 

Advertisement

ಎಲ್ಲೆಲ್ಲಿ ಬಾಕಿ
ಬಸೂÅರು ಮೂರುಕೈಯಲ್ಲಿ ಅಂಡರ್‌ಪಾಸ್‌ ಕಾಮಗಾರಿ, ಶಾಸಿŒ ಸರ್ಕಲ್‌ನಲ್ಲಿ ಫ್ಲೈಓವರ್‌ಗೆ ಸಂಪರ್ಕ ರಸ್ತೆ, ಬಸೂÅರು ಮೂರು ಕೈಯ ಅಂಡರ್‌ಪಾಸ್‌ಗೆ ಸಂಪರ್ಕ ರಸ್ತೆ, ಕೆಎಸ್‌ಆರ್‌ಟಿಸಿ ಕಡೆಯಿಂದ ಫ್ಲೈಓವರ್‌ಗೆ ಸಂಪರ್ಕ ರಸ್ತೆ ಬಹುತೇಕ ಸ್ಥಗಿತ ಗೊಂಡಿದೆ. ಕಾರಣ ಈಗಿಲ್ಲಿ ಕೆಲಸ ಮಾಡುತ್ತಿರುವವರು ಮೂರ್‍ನಾಲ್ಕು ಮಂದಿ! 

ಆದೇಶ
ಕುಂದಾಪುರ ಸಹಾಯಕ ಕಮಿಷನರ್‌ ಆಗಿದ್ದ ಟಿ. ಭೂಬಾಲನ್‌ ಅವರು ಶಾಸಿŒ ಸರ್ಕಲ್‌ನಲ್ಲಿ ಕಳೆದ 6 ವರ್ಷಗಳಿಂದ ಅಪೂರ್ಣಾವಸ್ಥೆಯಲ್ಲಿದ್ದ ಫ್ಲೈಓವರ್‌ನಿಂದಾಗಿ ಸಾರ್ವಜನಿಕರಿಗೆ ತೊಂದರೆ ಯಾಗುತ್ತಿದೆ ಎಂದು ಕೇಸು ದಾಖಲಿಸಿ ಮಾರ್ಚ್‌ ಅಂತ್ಯದೊಳಗೆ ಫ್ಲೈಓವರ್‌ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕ ವಾಹನಗಳ ಓಡಾಟಕ್ಕೆ ಬಿಟ್ಟುಕೊಡಬೇಕೆಂದು ಆದೇಶ ನೀಡಿದ್ದಾರೆ. ಇದೇ ಮಾದರಿಯ ಆದೇಶವನ್ನು ಅವರು ಉಡುಪಿ ಕರಾವಳಿ ಫ್ಲೈಓವರ್‌ಗೂ ನೀಡಿದ್ದರು. ಅಲ್ಲಿ ಕಾಮಗಾರಿ ಮುಗಿದಿದ್ದು ಇಲ್ಲಿ ಕೈಗೆತ್ತಿಕೊಳ್ಳಲಾಗಿತ್ತು. ಸಾರ್ವಜನಿಕರು ಇಲ್ಲಿ ಕಾಮಗಾರಿ ಶರವೇಗದಿಂದ ನಡೆಯಲಿದೆ ಎಂದು ಭಾವಿಸಿದ್ದರು. ಅದೇ ಮಾದರಿಯಲ್ಲಿ ಬಸೂÅರು ಮೂರುಕೈ ಅಂಡರ್‌ಪಾಸ್‌ ಕಾಮಗಾರಿ ವೇಗವಾಗಿ ನಡೆದಿತ್ತು. ಆದರೆ ಇದೀಗ ಸಾರ್ವಜನಿಕರ ನಿರೀಕ್ಷೆ ಬುಡಮೇಲಾಗಿದೆ. ಮಾರ್ಚ್‌ನಲ್ಲಿ ಕಾಮಗಾರಿ ಮುಕ್ತಾಯ ನಿಜಕ್ಕೂ ಆಗುತ್ತಾ ಎನ್ನುವುದೇ ಜನರನ್ನು ಕಾಡುತ್ತಿದೆ.  

ಟೋಲ್‌ ಬಲವಂತ
ಶೇ.80ರಷ್ಟು ಕಾಮಗಾರಿ ಆಗದೇ ಟೋಲ್‌ ವಸೂಲಿ ಮಾಡುವಂತಿಲ್ಲ ಎಂದಿದ್ದರೂ ಹೆಜಮಾಡಿ ಹಾಗೂ ಸಾಸ್ತಾನದಲ್ಲಿ ಟೋಲ್‌ ವಸೂಲಿ ಕಾರ್ಯ ನಿರಾತಂಕವಾಗಿ ನಡೆಯುತ್ತಿದೆ. ಕಾಮಗಾರಿ ಸರಿಯಾಗಿ ಮಾಡದಿದ್ದರೆ ಟೋಲ್‌ ವಸೂಲಿ ನಿಲ್ಲಿಸಲಾಗುವುದು ಎಂದು ಎಸಿಯವರು ಕೂಡಾ ಎಚ್ಚರಿಸಿದ್ದರು. ಇಲ್ಲೂ ಕುಂದಾಪುರಕ್ಕೆ ಅನ್ಯಾಯವೇ ಆಗಿದ್ದು ಕುಂದಾಪುರ ಪೇಟೆಯ ಅರ್ಧಭಾಗದ ಜನರಿಗೆ ಮಾಸಿಕ ಪಾಸ್‌ ಕೊಡುತ್ತಿದೆ. ಇನ್ನರ್ಧ ಭಾಗದ ಮಂದಿಯ ವಿಳಾಸ ನೋಡಿ ಇದು 20 ಕಿ.ಮೀ. ವ್ಯಾಪ್ತಿಯಲ್ಲಿ ಇಲ್ಲ ಎಂದು ನಿರಾಕರಿಸಲಾಗುತ್ತಿದೆ. 

ಸಮಸ್ಯೆಗಳು
ಉಡುಪಿ ನವಯುಗ ಕನ್‌ಸ್ಟ್ರಕ್ಷನ್‌ ಕಂಪೆನಿ ಸುರತ್ಕಲ್‌ನಿಂದ ಕುಂದಾಪುರವರೆಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿದೆ. ಆದರೆ ಆರಂಭದಿಂದ ಇಂದಿನವರೆಗೂ ಕಂಪೆನಿ ಸಮಸ್ಯೆಗಳ ಸುಳಿಯಲ್ಲೇ ನಲುಗುತ್ತಿದೆ. ಸಮರ್ಪಕ ಕಾಮಗಾರಿ ನಡೆಸಲು ಸಾಧ್ಯವಾಗದೇ ಜಿಲ್ಲಾಡಳಿತದಿಂದ ಸಹಕಾರ ದೊರೆಯುತ್ತಿಲ್ಲ ಎಂದು ದೂರು ನೀಡಿದೆ. ಪ್ರತಿನಿತ್ಯ ಎರಡು ಟೋಲ್‌ಗ‌ಳಲ್ಲಿ ಟೋಲ್‌ ಸುಂಕ ವಸೂಲಿ ಮಾಡುತ್ತಿದ್ದರೂ ಕಾಮಗಾರಿ ಪೂರ್ಣಗೊಳಿಸಲು ಇನ್ನೂ ಸಾಧ್ಯವಾಗಿಲ್ಲ. ಈ ಮಧ್ಯೆ ಕಾಮಗಾರಿ ಬಗ್ಗೆ ಯಾವುದೇ ವಿವರಗಳನ್ನು ಸಂಸ್ಥೆ ನೀಡುತ್ತಿಲ್ಲ. ಕಾಮಗಾರಿಯ ನೀಲಿನಕ್ಷೆ ಪ್ರದರ್ಶನವನ್ನೂ ಮಾಡಿಲ್ಲ.

Advertisement

ಕಪ್ಪುಪಟ್ಟಿಗೆ ಸೇರ್ಪಡೆಗೆ ಸೂಚ ನೆ
ನವಯುಗ ಸಂಸ್ಥೆಯವರು ಫ್ಲೈಓವರ್‌ ಅರೆಬರೆ ಮಾಡಿಟ್ಟಂತೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಪೂರ್ಣಪ್ರಮಾಣದಲ್ಲಿ ಸಮರ್ಪಕವಾಗಿ ಮಾಡಲೇ ಇಲ್ಲ. ಅವರ ಹಣಕಾಸಿನ ತೊಂದರೆಯೋ ಏನೋ ನಮಗಂತೂ ಅದರ ಮಾಹಿತಿ ಇಲ್ಲ. ಆದರೆ ಕಾಮಗಾರಿಯಲ್ಲಿ ನಿರ್ಲಕ್ಷ್ಯ ಮಾಡಿ ಸಾರ್ವಜನಿಕರಿಗೆ ತೊಂದರೆ ಮಾಡಿದ್ದರಿಂದ, ಸಕಾಲದಲ್ಲಿ ಕಾಮಗಾರಿ ಪೂರೈಸಿ ಬಿಟ್ಟುಕೊಡದ್ದರಿಂದ  ನವಯುಗ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಲು ಸೂಚಿಸಲಾಗಿದೆ.
-ಶೋಭಾ ಕರಂದ್ಲಾಜೆ ಸಂಸದರು, ಉಡುಪಿ 

Advertisement

Udayavani is now on Telegram. Click here to join our channel and stay updated with the latest news.

Next