Advertisement
ಕುಂದಾಪುರ ತಾಲೂಕಿನ ಕೋಡಿಯ ಲಕ್ಷ್ಮೀ ಗಾಣಿಗ, ಗುಜ್ಜಾಡಿ ಗ್ರಾಮದ ಮುತ್ತು, ಶಂಕರನಾರಾಯಣ ಗ್ರಾಮದ ಶಕುಂತಾಳ ಶೆಟ್ಟಿ, ಹೊಸಂಗಡಿ ಗ್ರಾಮದ ಜ್ಯೋತಿ ಅವರ ಮನೆಗೆ ಹಾನಿ ಸಂಭವಿಸಿದೆ.
ಕುಂದಾಪುರ ಮುಖ್ಯ ರಸ್ತೆಯ ಎವಿಎನ್ ಬಿಲ್ಡಿಂಗ್ ಬಳಿ ಮರವೊಂದು ಬುಡ ಸಹಿತ ಧರಾಶಾಯಿಯಾಗಿ ರಿಕ್ಷಾಕ್ಕೆ ಹಾನಿಯಾಗಿದೆ. ವಿದ್ಯುತ್ ತಂತಿ ತಾಗಿ ಮಳಿಗೆಯೊಂದರ ನಾಮಫಲಕಕ್ಕೆ ತುಸು ಹಾನಿಯಾಗಿದೆ.
Related Articles
ಬೈಂದೂರು: ಯಡ್ತರೆ ಸಮೀಪ ರಾಹುತನಕಟ್ಟೆ ಸರಕಾರಿ ಹಿ.ಪ್ರಾ. ಶಾಲೆ ಶನಿವಾರ ಮುಂಜಾನೆ ಜಲಾ ವೃತಗೊಂಡಿದೆ. ಬಳಿಕ ಮಕ್ಕಳಿಗೆ ರಜೆ ನೀಡಲಾಯಿತು.
Advertisement
ಶಾಲೆ ಸಮೀಪ ಸಮರ್ಪಕ ವಾದ ಚರಂಡಿ ವ್ಯವಸ್ಥೆ ಇಲ್ಲದೆ ರಾಷ್ಟ್ರೀಯ ಹೆದ್ದಾರಿಯ ನೀರುನೇರ ಶಾಲೆಯ ಆವರಣಕ್ಕೆ ಬರುತ್ತದೆ. ಹಲವು ವರ್ಷಗಳಿಂದ ಮಳೆಗಾಲದ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳುವಂತೆ ಅನೇಕ ಬಾರಿ ವಿನಂತಿಸಿದ್ದರೂ ಇಲಾಖೆ ಗಂಭೀರವಾಗಿ ಪರಿಗಣಿಸದ ಪರಿಣಾಮ ಶಾಲೆಗೆ ನೀರು ನುಗ್ಗಿದೆ. ಇದೇ ರೀತಿ ಮುಂದುವರಿದರೆ ಮಕ್ಕಳನ್ನು ಶಾಲೆಗೆ ಕಳುಹಿಸಲು ಆತಂಕ ಆಗುತ್ತಿದೆ. ಕನ್ನಡ ಶಾಲೆಯ ಅಭಿವೃದ್ಧಿಯಲ್ಲಿ ನಿಷ್ಕಾಳಜಿ ಬೇಸರ ತಂದಿದೆ ಎಂದು ಪಾಲಕರು ತಿಳಿಸಿದ್ದಾರೆ.
ಬಿಇಒ ನಾಗೇಶ ನಾಯ್ಕ, ಎಸ್‌ಡಿಎಂಸಿ ಸಮನ್ವಯ ವೇದಿಕೆ ಜಿಲ್ಲಾಧ್ಯಕ್ಷೆ ಜ್ಯೋತಿ ಜಯರಾಮ ಶೆಟ್ಟಿ, ಸಹ ಕಾರ್ಯದರ್ಶಿ ಸುಮಾ ಆಚಾರ್, ಉಸ್ತು ವಾರಿ ರಾಘವೇಂದ್ರ, ಎಸ್‌ಡಿಎಂಸಿ ಅಧ್ಯಕ್ಷೆ ಗೀತಾ ಶೆಟ್ಟಿ ಭೇಟಿ ನೀಡಿ ಪರಿಶೀಲಿಸಿದರು.
ಹೊಸಾಡು: 2 ಮನೆ ಅಪಾಯದಲ್ಲಿಕುಂದಾಪುರ: ನಿರಂತರ ಮಳೆಗೆ ಹೊಸಾಡು ಗ್ರಾಮದ ಭಗತ್ ನಗರದಲ್ಲಿ 2 ಮನೆಗಳು ಕುಸಿತದ ಭೀತಿಯಲ್ಲಿವೆ. ವಾಸುದೇವ ಖಾರ್ವಿ ಅವರ ಮನೆಯ ಹಿಂಭಾಗದ ಆವರಣ ಗೋಡೆ ಮಳೆ ನೀರಿನ ರಭಸಕ್ಕೆ ಕುಸಿದ ಪರಿಣಾಮ ಮನೆ ಬಿರುಕು ಬಿಟ್ಟಿದೆ. ಸಮೀಪದ ವೀರೇಶ ಅವರ ಮನೆ ಕೂಡ ಕುಸಿಯುವ ಭೀತಿಯಲ್ಲಿದೆ. ಅನಾಹುತ ಸಂಭವಿಸುವ ಮುನ್ನ ಮುನ್ನೆಚ್ಚರಿಕೆ ವಹಿಸಬೇಕಾಗಿದೆ ಎಂದು ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳನ್ನು, ಸ್ಥಳೀಯಾಡಳಿತವನ್ನು ಆಗ್ರಹಿಸಿದ್ದಾರೆ. ಹೊಸಾಡು ಗ್ರಾ.ಪಂ. ಆಡಳಿತಾಧಿಕಾರಿ, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಗ್ರಾ.ಪಂ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಗತ್ಯ ಕ್ರಮದ ಭರವಸೆ ನೀಡಿದ್ದಾರೆ.