ಕೊಲ್ಲೂರು: ಇಡೂರು ಬಳಿ ರಸ್ತೆಯ ಮೇಲೆ ಶನಿವಾರ ಬೃಹತ್ ಗಾತ್ರದ ಅಶ್ವತ್ಥ ಮರವೊಂದು ಬಿದ್ದ ಕಾರಣ ಕುಂದಾಪುರ – ಕೊಲ್ಲೂರು ನಡುವೆ ಸುಮಾರು 7 ತಾಸು ವಾಹನ ಸಂಚಾರ ಸ್ಥಗಿತಗೊಂಡಿತು.
ಮಧ್ಯಾಹ್ನ 12ರ ವೇಳೆಗೆ ಮರ ಬಿದ್ದು ಸಂಚಾರ ಸ್ಥಗಿತವಾಯಿತು. ಕೊಲ್ಲೂರು ಪೊಲೀಸರು ಮತ್ತು ಸಾರ್ವಜನಿಕರು ಸತತ 7 ತಾಸುಕಾರ್ಯಾಚರಣೆ ನಡೆಸಿ ಮರವನ್ನು ತೆರವುಗೊಳಿಸುವಲ್ಲಿ ಸಫಲರಾದರು.
ಕೊಲ್ಲೂರು ಸಹಿತ ಜಡ್ಕಲ್, ಮುದೂರು, ಹಾಲ್ಕಲ್, ಇಡೂರು, ಕೆರಾಡಿ, ವಂಡ್ಸೆ ಪರಿಸರದಲ್ಲಿ ಭಾರೀ ಮಳೆಯಾಗುತ್ತಿದ್ದು ಸೌಪರ್ಣಿಕಾ, ಕಾಶಿ, ಬೆಳ್ಕಲ್, ಕುಬಾj ನದಿಗಳು ಅಪಾಯ ಮಟ್ಟಕ್ಕೆ ತಲುಪಿವೆ.
ಕೇರಳ, ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳ್ನಾಡು ಹಾಗೂ ಕರ್ನಾಟಕದ ಭಕ್ತರು ಕೊಲ್ಲೂರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಆಯಾಯ ರಾಜ್ಯಗಳಲ್ಲಿ ಸುರಿಯುತ್ತಿರುವ ಭಾರೀ ಮಳೆ ಹಾಗೂ ಪ್ರವಾಹದಿಂದ ಉಂಟಾಗಿರುವ ರಸ್ತೆ, ರೈಲು ಸಂಚಾರ ನಿರ್ಬಂಧದಿಂದಾಗಿ ಭಕ್ತರ ಸಂಖ್ಯೆ ತೀವ್ರವಾಗಿ ಕುಸಿದಿದೆ.
ರಸ್ತೆ ಕುಸಿತ
ಕೊಲ್ಲೂರಿನಿಂದ ನಾಗೋಡಿ ಮಾರ್ಗವಾಗಿ ಹೊಸನಗರಕ್ಕೆ ಸಾಗುವ ಮಡ್ಡೋಡಿ ರಸ್ತೆ ಕುಸಿದಿದ್ದು ಸಂಪರ್ಕ ಕಡಿದುಕೊಂಡಿದೆ.