Advertisement

ಕುಂದಾಪುರ ತಾ|: ಜುಲೈನಲ್ಲಿ ವಾಡಿಕೆಗಿಂತ ಹೆಚ್ಚು ವರ್ಷಧಾರೆ

12:41 AM Aug 04, 2019 | Sriram |

ಕುಂದಾಪುರ: ಮುಂಗಾರು ಆರಂಭವಾಗಿ ಎರಡು ತಿಂಗಳು ಕಳೆದಿದ್ದು, ಅವಿಭಜಿತ ಕುಂದಾಪುರ ತಾಲೂಕಲ್ಲಿ ಜೂನ್‌ನಲ್ಲಿ ವಾಡಿಕೆಗಿಂತ ಕಡಿಮೆಯಾಗಿದ್ದರೂ ಜುಲೈ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ.

Advertisement

ಕುಂದಾಪುರ, ಬೈಂದೂರು ಹಾಗೂ ವಂಡ್ಸೆ ಮೂರೂ ಹೋಬಳಿಗಳಲ್ಲಿ ಒಟ್ಟಾರೆ ಜುಲೈ ತಿಂಗಳಲ್ಲಿ ಒಟ್ಟು 1,388 ಮಿ.ಮೀ. ಮಳೆಯಾಗಬೇಕಿತ್ತು. ರಾಜ್ಯ ವಿಪತ್ತು ನಿರ್ವಹಣಾ ಘಟಕದ ಅಂಕಿ – ಅಂಶಗಳ ಪ್ರಕಾರ ತಾಲೂಕಲ್ಲಿ 1,607 ಮಿ.ಮೀ. ಮಳೆಯಾಗಿದೆ. ಅಂದರೆ ವಾಡಿಕೆಗಿಂತ ಶೇ.16 ರಷ್ಟು ಹೆಚ್ಚಿನ ಮಳೆಯಾಗಿದೆ.

ಹೋಬಳಿವಾರು ವಿವರ
ಕುಂದಾಪುರ ಹಾಗೂ ಬೈಂದೂರು ಎರಡೂ ತಾಲೂಕುಗಳನ್ನು ಒಟ್ಟು ಸೇರಿಸಿ 3 ಹೋಬಳಿಗಳಿವೆ. ಜುಲೈನಲ್ಲಿ ಈ ಹೋಬಳಿಗಳ ಪೈಕಿ ಕುಂದಾಪುರದಲ್ಲಿ ಒಟ್ಟು 1,856 ಮಿ.ಮೀ. ಮಳೆಯಾಗಬೇಕಿದ್ದರೆ, 1,692 ಮಿ.ಮೀ. ವರ್ಷಧಾರೆಯಾಗಿದೆ. ಅಂದರೆ ಶೇ.9 ರಷ್ಟು ಮಳೆ ಪ್ರಮಾಣ ವಾಡಿಕೆಗಿಂತ ಕಡಿಮೆಯಾಗಿದೆ.

ಇನ್ನು ಬೈಂದೂರು ಹೋಬಳಿಯಲ್ಲಿ ಒಟ್ಟು 1,268 ಮಿ.ಮೀ. ಮಳೆಯಾಗಬೇಕಿತ್ತು. ಇಲ್ಲಿ ಒಟ್ಟು 1,600 ಮಿ.ಮೀ. ಮಳೆಯಾಗುವ ಮೂಲಕ ಶೇ.26 ರಷ್ಟು ಹೆಚ್ಚಿನ ಮಳೆಯಾಗಿದೆ. ವಂಡ್ಸೆ ಹೋಬಳಿಯಲ್ಲಿ 1,186 ಮಿ.ಮೀ. ಮಳೆಯಾಗಬೇಕಿದ್ದರೆ, ಈ ಬಾರಿಯ ಜುಲೈನಲ್ಲಿ ಇಲ್ಲಿ 1,554 ಮಿ.ಮೀ. ಮಳೆಯಾಗಿದೆ. ಅಂದರೆ ವಾಡಿಕೆಗಿಂತ ಶೇ. 31 ರಷ್ಟು ಹೆಚ್ಚಿನ ಮಳೆಯಾಗಿದೆ.

ಜೂನ್‌ನಲ್ಲಿ ಕೊರತೆ
ಕೃಷಿ ಚಟುವಟಿಕೆಗಳು ಆರಂಭವಾಗುವ ಜೂನ್‌ ತಿಂಗಳಲ್ಲಿ ಮಾತ್ರ ಮಳೆ ಪ್ರಮಾಣ ವಾಡಿಕೆಗಿಂತ ಕಡಿಮೆ ಬಂದಿದೆ. ಇದರಿಂದ ಭತ್ತದ ಕೃಷಿಗೆ ಬಹಳಷ್ಟು ಹೊಡೆತ ಬಿದ್ದಿದೆ.

Advertisement

ಜೂನ್‌ನಲ್ಲಿ ಕುಂದಾಪುರ ತಾಲೂಕಲ್ಲಿ 1,115 ಮಿ.ಮೀ. ಮಳೆಯಾಗಬೇಕಿತ್ತು. ಆದರೆ ಕೇವಲ 676 ಮಿ.ಮೀ. ಮಾತ್ರ ಮಳೆಯಾಗಿದೆ. ಅಂದರೆ ಶೇ. 39 ರಷ್ಟು ಕಡಿಮೆ ಮಳೆಯಾಗಿದೆ. ಹೋಬಳಿಗಳ ಈ ಪೈಕಿ ಕುಂದಾಪುರದಲ್ಲಿ 1,340 ಮಿ.ಮೀ. ಮಳೆಯಾಗಬೇಕಿತ್ತು. 617 ಮಿ.ಮೀ. ಮಳೆಯಾಗುವ ಮೂಲಕ ವಾಡಿಕೆಗಿಂತ ಶೇ.54 ರಷ್ಟು ಕಡಿಮೆಯಾಗಿದೆ. ಬೈಂದೂರಲ್ಲಿ 1,049 ಮಿ.ಮೀ. ಮಳೆಯಾಗಬೇಕಿತ್ತು. 724 ಮಿ.ಮೀ. ಮಳೆಯಾಗಿದೆ. ಶೇ. 31ರಷ್ಟು ಮಳೆ ಕೊರತೆಯಾಗಿದೆ. ವಂಡ್ಸೆ ಹೋಬಳಿಯಲ್ಲಿ 1,026 ಮಿ.ಮೀ. ಮಳೆ ವಾಡಿಕೆಯಾಗಿದ್ದರೆ, 670 ಮಿ.ಮೀ. ಅಷ್ಟೇ ಮಳೆ ಸುರಿದಿದೆ. ಶೇ.35 ರಷ್ಟು ಕಡಿಮೆ ಮಳೆ ಬಂದಿದೆ.

ವರ್ಷದಲ್ಲಿ ವಾಡಿಕೆಗಿಂತ ಕಡಿಮೆ
ಈ ವರ್ಷ ಮುಂಗಾರು ಪೂರ್ವ ಮತ್ತು ಮುಂಗಾರು ಹಂಗಾಮಿನಲ್ಲಿ ಆ. 2ರ ವರೆಗೆ ಕುಂದಾಪುರ ತಾಲೂಕಲ್ಲಿ 2,779 ಮಿ.ಮೀ. ಮಳೆಯಾಗಬೇಕಿದ್ದರೆ, ಈ ವರೆಗೆ ಒಟ್ಟು 2,328 ಮೀ.ಮೀ. ಮಳೆಯಾಗಿದೆ. ಅಂದರೆ ಈ ವರ್ಷವನ್ನು ಪರಿಗಣಿಸಿದಾಗ ವಾಡಿಕೆಗಿಂತ ಶೇ. 16ರಷ್ಟು ಕಡಿಮೆ ಮಳೆಯಾಗಿದೆ. ಈ ಪೈಕಿ ಕುಂದಾಪುರ ಹೋಬಳಿಯಲ್ಲಿ ವಾಡಿಕೆಗಿಂತ ಗರಿಷ್ಠ ಶೇ. 33ರಷ್ಟು ಕಡಿಮೆ, ಬೈಂದೂರಲ್ಲಿ ಶೇ. 9ರಷ್ಟು ಕಡಿಮೆ, ವಂಡ್ಸೆಯಲ್ಲಿ ಶೇ.8 ರಷ್ಟು ಕಡಿಮೆ ಮಳೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next