ಕುಂದಾಪುರ: ಮಕ್ಕಳ ಸುರಕ್ಷತೆಯ ವಿಚಾರದಲ್ಲಿ ನಿಯಮಗಳು ಪಾಲನೆಯಾಗುತ್ತಿದೆಯೇ ಎನ್ನುವ ನಿಟ್ಟಿನಲ್ಲಿ ಕುಂದಾಪುರ ಪೊಲೀಸ್ ಠಾಣೆ ಠಾಣಾಧಿಕಾರಿ ಹರೀಶ್ ಹಾಗೂ ಅಪರಾಧ ವಿಭಾಗಗಳ ಎಸ್‌ಐ ರಮೇಶ್ ಅವರ ನೇತೃತ್ವದಲ್ಲಿ ಶನಿವಾರ ಬಸೂÅರಿನ ಮೂರುಕೈ ಮತ್ತು ಕುಂದಾಪುರ ಪೇಟೆಯಲ್ಲಿ ದಿಢೀರ್ ಶಾಲಾ ವಾಹನಗಳನ್ನು ತಪಾಸಣೆ ನಡೆಸಲಾಯಿತು.
ಇದೇ ವೇಳೆ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ, ಹೆಚ್ಚಿನ ಮಕ್ಕಳನ್ನು ಕರೆದೊ ಯ್ಯುತ್ತಿದ್ದ ಕೆಲ ಶಾಲಾ ವಾಹನಗಳ ಚಾಲಕ ರಿಗೆ ಇದು ಮೊದಲ ಬಾರಿ ಆಗಿರುವುದರಿಂದ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಚಾಲಕರು ಸಂಚಾರಿ ನಿಯಮ ಪಾಲಿಸು ತ್ತಿದ್ದಾರೆಯೇ ಹಾಗೂ ಶಾಲಾ ವಾಹನಗಳು ಕಾನೂನು ಪ್ರಕಾರ ಇದೆಯೇ ಎನ್ನುವ ಕಾರಣಕ್ಕಾಗಿ ಪರಿಶೀಲನೆ ನಡೆಸಿದ್ದಾರೆ.
3 ವರ್ಷಗಳ ಹಿಂದೆ ತ್ರಾಸಿಯಲ್ಲಿ ಡಾನ್ ಬಾಸ್ಕೋ ಶಾಲೆಗೆ ಮಕ್ಕಳನ್ನು ಕರೆದೊಯ್ಯುತ್ತಿದ್ದ ವಾಹನ ಅಪಘಾತಕ್ಕಿಡಾಗಿ 8 ಮಕ್ಕಳು ಸಾವನ್ನಪ್ಪಿದ ಬಳಿಕ ಎಚ್ಚೆತ್ತ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಶಾಲಾ ಮಕ್ಕಳ ವಾಹನಗಳಿಗೆ ಕೆಲ ಮಾರ್ಗಸೂಚಿಗಳನ್ನು ನೀಡಿತ್ತು. ಆದರೆ ಆ ಮಾರ್ಗಸೂಚಿಗಳನ್ನು ಉಲ್ಲಂಘಿಸಿ, ನಿಯಮ ಬಾಹಿರವಾಗಿ ಮಕ್ಕಳನ್ನು ಕರೆದೊಯ್ಯಲಾಗುತ್ತಿದೆ ಎನ್ನುವ ಸಾರ್ವಜನಿಕ ದೂರುಗಳ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆದಿದೆ ಎನ್ನಲಾಗಿದೆ. ಕಾರ್ಯಾಚರಣೆಯಲ್ಲಿ ಎಎಸ್‌ಐ ಸುಧಾ ಪ್ರಭು, ಸಿಬಂದಿ ಸಚಿನ್, ಆನಂದ ಭಾಗಿಯಾದರು.
ಈಗ ಎಚ್ಚರಿಕೆ
ನಿಯಮ ಉಲ್ಲಂಘಿಸಿರುವ ಕುರಿತು ಕೆಲ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಇದು ಮೊದಲ ಬಾರಿಗೆ ಆಗಿರುವುದರಿಂದ ಎಚ್ಚರಿಕೆ ಅಷ್ಟೇ ನೀಡಲಾಗಿದೆ. ಮುಂದಿನ ಬಾರಿಯೂ ಇದೇ ಮರುಕಳುಹಿಸಿದರೆ ದಂಡ ವಿಧಿಸಲಾಗುವುದು.
- ಹರೀಶ್ ಆರ್.,
ಕುಂದಾಪುರ ಎಸ್‌ಐ