Advertisement

ಕುಂದಾಪುರ: ನಗರದಲ್ಲಿ ತಲೆ ಎತ್ತಿವೆ ಅಕ್ರಮ ಕಟ್ಟಡಗಳು

10:27 PM Nov 13, 2019 | Team Udayavani |

ಕುಂದಾಪುರ: ಪುರಸಭೆ ವ್ಯಾಪ್ತಿಯಲ್ಲಿ ನಗರದ ವಿವಿಧೆಡೆ ಅಕ್ರಮ ಕಟ್ಟಡಗಳು ತಲೆ ಎತ್ತುತ್ತಿವೆ. ಈ ಕುರಿತು ಈಗಾಗಲೇ ಪುರಸಭೆಯಲ್ಲಿ ಗೆದ್ದು ಅಧಿಕಾರ ದೊರೆಯದಿದ್ದರೂ ಸದಸ್ಯರು ಆಕ್ಷೇಪ ಎತ್ತಿದ್ದಾರೆ. ಲಿಖೀತವಾಗಿ ದೂರು ಕೊಟ್ಟಿದ್ದಾರೆ. ಪುರಸಭೆ ಎಚ್ಚರಿಕೆ ನೀಡಿದೆ. ಪ್ರಯೋಜನ ಮಾತ್ರ ಆಗಿಲ್ಲ.

Advertisement

ಅಕ್ರಮ
ಪುರಸಭೆ ವ್ಯಾಪ್ತಿಯ ವಿವಿಧೆಡೆ ಖಾಸಗಿಯವರು ಭಾರೀ ಗಾತ್ರದ ಕಟ್ಟಡಗಳನ್ನು ನಿರ್ಮಿಸುತ್ತಿದ್ದಾರೆ. ಇವುಗಳಿಗೆ ಪುರಸಭೆಯಿಂದ ಅನುಮತಿಪತ್ರವನ್ನೇ ಪಡೆದಿಲ್ಲ. ನಿರಾಕ್ಷೇಪಣಾ ಪತ್ರಗಳಿಲ್ಲ. ರಸ್ತೆಯಿಂದ ಬಿಡಬೇಕಾದಷ್ಟು ದೂರವನ್ನೂ ಬಿಟ್ಟಿಲ್ಲ. ಪಾರ್ಕಿಂಗ್‌ ಜಾಗವೂ ಇಲ್ಲ. ವಾಣಿಜ್ಯ ಉದ್ದೇಶದಿಂದ ನಿರ್ಮಿಸಲ್ಪಡುತ್ತಿರುವ ಈ ಕಟ್ಟಡಗಳು ಪುರಸಭೆ ವ್ಯಾಪ್ತಿಯಲ್ಲಿ ಪಾಲಿಸಬೇಕಾದ ನಿಯಮಗಳನ್ನೆಲ್ಲ ಗಾಳಿಗೆ ತೂರಿವೆ. ಇದರಿಂದಾಗಿ ರಾಜಾರೋಷವಾಗಿ ಕಟ್ಟಲಾಗುತ್ತಿರುವ ಈ ಕಟ್ಟಡದ ಕುರಿತು ಸಾರ್ವಜನಿಕರು ಪ್ರಶ್ನೆ ಎತ್ತಿದ್ದಾರೆ.

ದೂರು
ಪೇಟೆ ವೆಂಕಟರಮಣ ದೇಗುಲದ ಬಳಿ ಪರ ವಾನಗಿ ರಹಿತವಾಗಿ ಕಟ್ಟಡವೊಂದು ನಿರ್ಮಾಣ ವಾಗುತ್ತಿದೆ ಎಂದು ಪುರಸಭೆ ಸದಸ್ಯರೊಬ್ಬರು ಪುರ ಸಭೆಗೆ ಲಿಖೀತ ದೂರು ನೀಡಿದ್ದಾರೆ. ಅಂತೆಯೇ ಕೋಡಿ ಎಂಬಲ್ಲಿಯೂ ಸರಕಾರಿ ಇಲಾಖೆಗಳ ಅನು ಮತಿಯಿಲ್ಲದೇ ಫಿಶ್‌ ಕಟ್ಟಿಂಗ್‌ ಕಟ್ಟಡ ವೊಂದನ್ನು ನಿರ್ಮಿಸಲಾಗುತ್ತಿದೆ. ಇದರ ಜತೆಗೆ ರಾಮ ಮಂದಿರ ರಸ್ತೆಯಲ್ಲೂ ಕಟ್ಟಡವೊಂದನ್ನು ಸೂಕ್ತ ಪರವಾನಗಿ ಇಲ್ಲದೇ ನಿರ್ಮಾಣ ಮಾಡಲಾಗುತ್ತಿದೆ.

ಸರಕಾರಿ ಕಟ್ಟಡವೇ ಅಕ್ರಮ
ಅವಿಭಜಿತ ಕುಂದಾಪುರ ತಾಲೂಕಿನಲ್ಲಿ 6,800 ಮಂದಿ ವಿಶೇಷಚೇತನರಿದ್ದಾರೆ. ಇವರಿಗಾಗಿ ತಾಲೂಕು ಪಂಚಾಯತ್‌ ಬಳಿ ನಿರ್ಮಾಣವಾದ 8 ಲಕ್ಷ ರೂ. ವೆಚ್ಚದ ವಿಶೇಷಚೇತನ ಭವನ ಕಟ್ಟಡವೇ ಅಕ್ರಮ ಎಂದು ಪುರಸಭೆ ಅಧಿಕಾರಿಗಳು ಹೇಳುತ್ತಿದ್ದು ನೋಟಿಸ್‌ಮಾಡಲಾಗಿದೆ. ಗ್ರಾ.ಪಂ. ಮಟ್ಟದ ಕಾರ್ಯಕರ್ತರ ಜತೆ ಸಮಾಲೋಚನೆ, ಸಭೆ ನಡೆಸಲು, ಮಾಹಿತಿ ನೀಡಲು, ಕಾರ್ಯಾಗಾರ ಏರ್ಪಡಿಸಲು ಅಗತ್ಯ ವಿರುವ ಭವನವೇ ವಿಶೇಷಚೇತನ ಭವನ. ಇಲ್ಲಿ ವಿಶೇಷಚೇತನ ಮಕ್ಕಳ ಶೈಕ್ಷಣಿಕ ತರಬೇತಿಗೂ ವ್ಯವಸ್ಥೆ ಮಾಡಬಹುದಾಗಿದೆ. ಉಡುಪಿ ಹಾಗೂ ಕಾರ್ಕಳದಲ್ಲಿ ಇಂತಹ ಭವನಗಳಿದ್ದು ಕುಂದಾಪುರದಲ್ಲಿ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೆ ಕಾಯುತ್ತಿದೆ. ಸದ್ಯ ಕುಂದಾಪುರದಲ್ಲಿ ತಾಲೂಕು ಮಟ್ಟದ ಸಿಬಂದಿಗೆ ತಾ.ಪಂ. ನಲ್ಲಿಯೇ ಕುರ್ಚಿ, ಟೇಬಲ್‌ ನೀಡಲಾಗಿದ್ದು ಹಿಂದಿನ ಉಪಾಧ್ಯಕ್ಷರು ತಮ್ಮ ಕೊಠಡಿಯಲ್ಲಿಯೇ ಮಾಸಿಕ ಸಭೆ ನಡೆಸಲು ಅನುವು ಮಾಡಿಕೊಟ್ಟಿದ್ದರು. ರಸ್ತೆ ಮಾರ್ಜಿನ್‌ ಸೇರಿದಂತೆ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ಪುರಸಭೆ ಈ ಕಟ್ಟಡ ನಿರ್ಮಾಣ ಮಾಡದಂತೆ ರಚನೆ ಸಂದರ್ಭವೇ ನೋಟಿಸ್‌ಮಾಡಿತ್ತು. ಆದರೆ ನೋಟಿಸ್‌ಇದ್ದರೂ ಕಟ್ಟಡದ ಕಾಮಗಾರಿ ಪೂರ್ಣಮಾಡಲಾಗಿದೆ. ಉದ್ಘಾಟನೆಯಷ್ಟೇ ಬಾಕಿಯಿದೆ.

ಡೆಮಾಲಿಶ್‌ ನೋಟಿಸ್‌
ಅಕ್ರಮವಾಗಿ ನಿರ್ಮಾಣವಾಗುತ್ತಿದೆ ಎಂದು ಕೋಡಿ ಫಿಶ್‌ ಕಟ್ಟಿಂಗ್‌ ಘಟಕ, ವೆಂಕಟರಮಣ ದೇವಾಲಯ ಬಳಿಯ ಕಟ್ಟಡ ಹಾಗೂ ರಾಮಮಂದಿರ ಬಳಿಯ ಅಕ್ರಮ ಕಟ್ಟಡವನ್ನು ಕೆಡಹುವುದಾಗಿ ಪುರಸಭೆ ನೋಟಿಸ್‌ಮಾಡಿದೆ. ಈ ಪೈಕಿ ಒಂದು ಕಟ್ಟಡದವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು ಪುರಸಭೆ ಆದೇಶವನ್ನು ಪುನರ್‌ಪರಿಶೀಲಿಸಲು ವಿನಂತಿಸಿದ್ದಾರೆ. ಆದರೆ ಜಿಲ್ಲಾಧಿಕಾರಿ ಕಚೇರಿಯಿಂದ ಯಾವುದೇ ಸೂಚನೆಗಳು ಬಂದಿಲ್ಲ. ಕೋಡಿ ಫಿಶ್‌ ಕಟ್ಟಿಂಗ್‌ ಕಟ್ಟಡದವರು ನ್ಯಾಯಾಲಯದ ಮೊರೆ ಹೋಗದಂತೆ ಈಗಾಗಲೇ ಪುರಸಭೆ ನ್ಯಾಯಾಲಯಕ್ಕೆ ಮುಂಜಾಗ್ರತಾ ಅರ್ಜಿ ಸಲ್ಲಿಸಿದೆ.

Advertisement

ಕೆಡವಲು ನೋಟಿಸ್‌
ಅಕ್ರಮವಾಗಿ ನಿರ್ಮಾಣವಾಗುತ್ತಿರುವ ಮೂರು ಕಟ್ಟಡಗಳನ್ನು ಕೆಡಹುವ ಕುರಿತು ಈಗಾಗಲೇ ಕಟ್ಟಡದ ಮಾಲಕರಿಗೆ ಕಾನೂನು ರೀತಿಯ ನೋಟಿಸ್‌ನಿàಡಲಾಗಿದೆ. ಒಬ್ಬರು ಡಿಸಿಯವರಿಗೆ ಮನವಿ ಸಲ್ಲಿಸಿದ್ದು ಅಲ್ಲಿಂದ ಯಾವುದೇ ಮರುತ್ತರ ಬಂದಿಲ್ಲ. ಇನ್ನೊಂದು ಕಟ್ಟಡದವರು ನ್ಯಾಯಾಲಯಕ್ಕೆ ಹೋಗದಂತೆ ಕೇವಿಯಟ್‌ ಸಲ್ಲಿಸಲಾಗಿದೆ. ಸರಕಾರಿ ಕಟ್ಟಡಕ್ಕೂ ನೋಟಿಸ್‌ ನೀಡಲಾಗಿದೆ.
-ಗೋಪಾಲಕೃಷ್ಣ ಶೆಟ್ಟಿ
ಮುಖ್ಯಾಧಿಕಾರಿ, ಪುರಸಭೆ

-ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next