Advertisement

ಕುಂದಾಪುರ: ಹೆದ್ದಾರಿ ಕಾಮಗಾರಿಗೆ ಆಮೆಗತಿಯ ಚಾಲನೆ !

09:54 AM Oct 25, 2019 | sudhir |

ಕುಂದಾಪುರ: ಇಲ್ಲಿನ ನಗರದಲ್ಲಿ ಹಾದು ಹೋದ ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿಗೆ ಎರಡು ದಿನಗಳಿಂದ ಆಮೆಗತಿಯ ವೇಗ ದೊರೆತಿದೆ.

Advertisement

ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಬಳಿ ಕ್ಯಾಟಲ್‌ ಅಂಡರ್‌ ಪಾಸಿಂಗ್‌ನ ಕಾಮಗಾರಿ ಅರ್ಧ ಆಗಿದ್ದುದು ಇದೀಗ ಇನ್ನೊಂದು ಕಡೆಯ ಕಾಮಗಾರಿಗೆ ಕಾಂಕ್ರೀಟ್‌ ಹಾಕಲಾಗಿದೆ. ಜತೆಗೆ ಇನ್ನಷ್ಟು ಎತ್ತರಿಸಲು ಕಬ್ಬಿಣದ ಸರಳುಗಳನ್ನು ಅಳವಡಿಸಲಾಗಿದೆ. ಇದು ಶಾಸಿŒ ಸರ್ಕಲ್‌ ಬಳಿಕ ಫ್ಲೈಓವರ್‌ಗೆ ಸಂಬಂಧಿಸಿದ ಕಾಮಗಾರಿಯಾಗಿದೆ.

ಹೊಂಡಗುಂಡಿ
ಶಾಸಿŒ ಸರ್ಕಲ್‌ ಬಳಿ, ಕೆಎಸ್‌ಆರ್‌ಟಿಸಿ ಬಳಿ, ವಿನಾಯಕ ಥಿಯೇಟರ್‌ ಬಳಿ ಎಂದು ಹೆದ್ದಾರಿ ತುಂಬ ಗುಂಡಿಗಳೇ ತುಂಬಿವೆ. ಮಳೆ ಬಂದಾಗ ಈ ಗುಂಡಿಗಳಲ್ಲಿ ನೀರು ತುಂಬಿ ದ್ವಿಚಕ್ರ ವಾಹನ ಸವಾರರ ಮೇಲೆ, ಅದರ ಹಿಂಬದಿ ಕುಳಿತವರ ಮೇಲೆ, ಕಚೇರಿ ಕಾಲೇಜು ಎಂದು ಪೇಟೆಗೆ ಬಂದವರು ನಡೆದು ಹೋಗುವವರಿಗೆ ಕೆಸರ ಸಿಂಚನ ನಿತ್ಯ ನಿರಕ. ಹಾಗಿದ್ದರೂ ಈ ಗುಂಡಿಗಳನ್ನು ಮುಚ್ಚುವ ಕಡೆಗೆ ಗುತ್ತಿಗೆದಾರ ಸಂಸ್ಥೆ ಪ್ರಯತ್ನ ಪಡಲಿಲ್ಲ.

ಸರ್ವಿಸ್‌ ರಸ್ತೆಗಳು ತೀರಾ ಕಿರಿದಾಗಿದ್ದು ಖಾಸಗಿ ಬಸ್‌ಗಳು ಜನರನ್ನು ಇಳಿಸಿಲು ಅಥವಾ ಹತ್ತಿಸಲು ನಿಲ್ಲಿಸಿದಾಗ ಹೆದ್ದಾರಿ ಬ್ಲಾಕ್‌ ಆಗುವುದು ಸಾಮಾನ್ಯ. ಸರ್ವಿಸ್‌ ರಸ್ತೆಗಳ ಬದಿ ಇರುವ ಅಂಗಡಿ, ಹೋಟೆಲ್‌ ಮಾಲಕರಂತೂ ಶಾಪಗ್ರಸ್ತರಂತಾಗಿದ್ದಾರೆ. ಗ್ರಾಹಕರು ಇಲ್ಲಿ ವಾಹನಗಳನ್ನು ನಿಲ್ಲಿಸುವಂತೆಯೇ ಇಲ್ಲ. ಏಕೆಂದರೆ ಇಲ್ಲಿ ಸರ್ವಿಸ್‌ ರಸ್ತೆಯೇ ಹೆದ್ದಾರಿ!.

ಜನಪ್ರತಿನಿಧಿಗಳ ಮೌನ
ಬಸೂÅರು ಮೂರುಕೈ ಅಂಡರ್‌ಪಾಸ್‌ ಕಾಮಗಾರಿ ನಡೆದಿಲ್ಲ, ಸರ್ವಿಸ್‌ ರಸ್ತೆಯೇ ರಾಜರಸ್ತೆಯಾಗಿದ್ದು ಇಕ್ಕಟ್ಟಿನಲ್ಲಿದೆ. ಫ್ಲೈಓವರ್‌ ಕಾಮಗಾರಿಯೂ ಮುಗಿದಿಲ್ಲ. ಅರ್ಧದಲ್ಲಿ ಕುಂದಾಪುರದ ಪಳೆಯುಳಿಕೆಯಂತೆ ಗೋಚರವಾಗುತ್ತಿದೆ. ಶಾಲಾ ಕಾಲೇಜು ಬಿಡುವ ಸಂದರ್ಭ ಸಾವಿರಾರು ಮಂದಿ ಶಾಸಿŒ ಸರ್ಕಲ್‌ನಲ್ಲಿ ಸೇರುತ್ತಾರೆ. ಫ್ಲೈಓವರ್‌ ಅವ್ಯವಸ್ಥೆಯಿಂದಾಗಿ ರಸ್ತೆ ದಾಟುವುದು ಕೂಡ ಕಷ್ಟವಾಗಿದೆ. ಪರ ಊರಿನ ವಾಹನಗಳಿಗೆ ಕೊಲ್ಲೂರು, ಬೈಂದೂರು ಕಡೆಗೆ ನಗರದೊಳಗೆ ಪ್ರವೇಶದಲ್ಲಿ ಗೊಂದಲ ಉಂಟಾಗುತ್ತದೆ.

Advertisement

ಕಾಮಗಾರಿ ಮುಗಿಯಲು ಕಳೆದ ಐದಾರು ವರ್ಷಗಳಿಂದ ಅವಧಿ ನೀಡಲಾಗುತ್ತಿದೆ. ಲೋಕಸಭಾ, ವಿಧಾನಸಭಾ ಚುನಾವಣೆ ಸಂದರ್ಭವೂ ಫ್ಲೈಓವರ್‌ ಕಾಮಗಾರಿ ಜನಸಾಮಾನ್ಯರ ಬೇಡಿಕೆಯಾಗಿತ್ತು. ಆದರೆ ಯಾವುದೇ ಜನಪ್ರತಿನಿಧಿ ಈ ಕುರಿತು ಆಸಕ್ತಿ ವಹಿಸಲೇ ಇಲ್ಲ. ಜನರ ದೌರ್ಭಾಗ್ಯ ಎಂಬಂತೆ ಅವ್ಯವಸ್ಥೆ ಮುಂದುವರಿದೇ ಇದೆ.

ಗೊಂದಲ
ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಕಡೆಯಿಂದ ಆರಂಭವಾಗುವ ಫ್ಲೈಓವರ್‌ ಕಾಮಗಾರಿ ಗಾಂಧಿ ಮೈದಾನ ಬಳಿ ಮುಗಿಯುತ್ತದೆಯೇ, ಅಲ್ಲಿ ಸರ್ವಿಸ್‌ ರಸ್ತೆಯಿಂದ ಪ್ರವೇಶ ಅವಕಾಶ ನೀಡಿ ನಂತರ ಬಸೂÅರು ಮೂರುಕೈ ಅಂಡರ್‌ಪಾಸ್‌ಗೆ ರಸ್ತೆ ಮುಂದುವರಿಯುತ್ತದೆಯೇ ಎಂಬ ಕುರಿತು ಜನರಿಗೆ ಅನುಮಾನಗಳಿವೆ. ಒಂದೊಮ್ಮೆ ಇಲ್ಲಿ ಸರ್ವಿಸ್‌ ರಸ್ತೆಗೆ ಪ್ರವೇಶಾವಕಾಶ ನೀಡಿದರೂ ಗೊಂದಲವಾಗಲಿದೆ. ಏಕೆಂದರೆ ಫ್ಲೈಓವರ್‌ನಿಂದ ಒಳಿಯುವ ವಾಹನಗಳು ಬಸೂÅರು ಮೂರುಕೈ ಅಂಡರ್‌ಪಾಸ್‌ನ ಏರು ರಸ್ತೆ ಕಡೆಗೆ ಗಮನ ಇಟ್ಟು ಚಾಲನೆಯಲ್ಲಿರುತ್ತವೆ. ಅತ್ತ ಕಡೆಯಿಂದ ಬಸೂÅರು ಮೂರುಕೈ ಕಡೆಯಿಂದ ಬರುವವರದ್ದು ಇದೇ ಚಿಂತನೆ. ಅರ್ಧದಲ್ಲಿ ಸರ್ವಿಸ್‌ ರಸ್ತೆಗೆ ಪ್ರವೇಶಾವಕಾಶ ನೀಡಿದರೆ ಅಪಘಾತ ಸಂಭವ ಸಾಧ್ಯತೆ ಜಾಸ್ತಿ. ಹಾಗಂತ ಇಲ್ಲಿ ಪ್ರವೇಶ ನೀಡದಿದ್ದರೂ ಅನನುಕೂಲವಾಗಲಿದೆ.

ಎಲ್‌ಐಸಿ ರಸ್ತೆ, ಲೋಕೋಪಯàಗಿ ಇಲಾಖೆ, ಎಎಸ್‌ಪಿ ಕಚೇರಿ, ವ್ಯಾಸರಾಯ ಮಠ, ಶಾಲೆ ಸೇರಿದಂತೆ ವಿವಿಧ ಕಚೇರಿಗಳು, ರಸ್ತೆಗಳು ಇಲ್ಲಿಗೆ ಕೊಂಡಿಯಾಗಿವೆ. ಇವಿಷ್ಟೂ ಪ್ರದೇಶಕ್ಕೆ ಸಂಬಂಧಿಸಿದವರಿಗೆ ತೊಂದರೆ ಕಟ್ಟಿಟ್ಟ ಬುತ್ತಿ. ಅವರು ಶಾಸಿŒ ಸರ್ಕಲ್‌ನಲ್ಲಿ ಫ್ಲೈಓವರ್‌ ಅಡಿಯಿಂದಾಗಿ ಸಾಗಬೇಕಾಗುತ್ತದೆ. ಕೆಎಸ್‌ಆರ್‌ಟಿಸಿ ಕಡೆಯಿಂದ ಬರುವವರು ಬಸೂÅರು ಮೂರುಕೈ ಅಂಡರ್‌ಪಾಸ್‌ ಮೂಲಕ ಸಾಗಿ ಎಲ್‌ಐಸಿ ರಸ್ತೆಗೆ ಬರಬೇಕಾಗುತ್ತದೆ. ಕೊಂಕಣ ಸುತ್ತಿ ಮೈಲಾರಕ್ಕೆ ಹೋದುದಕ್ಕಿಂತಲೂ ಹೆಚ್ಚಿನ ಸಮಸ್ಯೆ ತಂದೊಡ್ಡುವ ಯೋಚನೆ ಮತ್ತು ಯೋಜನೆ ಇದಾಗಿದೆ. ಹಾಗಂತ ಈ ಕುರಿತು ಜನಸಾಮಾನ್ಯರು, ಮಾಧ್ಯಮದವರು, ಹೋರಾಟಗಾರರು ಯಾರೇ ಮಾಹಿತಿ ಬಯಸಿದರೂ ಗುತ್ತಿಗೆ ಕಂಪನಿಯವರ ಯೋಜನೆ ಹೇಗೆ ಎಂಬ ಮಾಹಿತಿ ಲಭಿಸುವುದಿಲ್ಲ.

ತೊಂದರೆಯಾಗುತ್ತಿದೆ
ಗಾಂಧಿಮೈದಾನ ಬಳಿ ಸರ್ವಿಸ್‌ ರಸ್ತೆಯಿಂದ ಪ್ರವೇಶ ನೀಡದಿದ್ದರೆ ಜನಸಾಮಾನ್ಯರಿಗೆ ತೀರಾ ತೊಂದರೆಯಾಗುತ್ತದೆ. ಈ ನಿಟ್ಟಿನಲ್ಲಿ ಗುತ್ತಿಗೆದಾರ ಸಂಸ್ಥೆಯವರು ಸೂಕ್ತ ಮಾಹಿತಿ ನೀಡಿ ಜನರಿಗೆ ಅನುಕೂಲವಾಗುವಂತೆ ಕಾಮಗಾರಿ ಮಾಡಬೇಕು. ಅಥವಾ ಅಲ್ಲಿ ಕ್ಯಾಟಲ್‌ ಅಂಡರ್‌
ಪಾಸಿಂಗ್‌ನಂತಹ ಘಟಕ ಸಿದ್ಧಪಡಿಸಬೇಕು.
-ವಿನೋದ ಪೂಜಾರಿ, ಶಾಂತಿನಿಕೇತನ

ಎಸಿ ಸಭೆ
ಈಚೆಗೆ ಸಹಾಯಕ ಕಮಿಷನರ್‌ ಅವರು ಸಭೆ ಕರೆದು ಗುತ್ತಿಗೆದಾರ ಸಂಸ್ಥೆಯವರಿಗೆ ಕಾಮಗಾರಿ ಕೈಗೆತ್ತಿಕೊಳ್ಳಿ ಎಂದು ಸೂಚನೆ ನೀಡಿದ್ದರು. ಅದರ ಬೆನ್ನಲ್ಲೇ ಸಂಸ್ಥೆ ಮೂರ್ನಾಲ್ಕು ಕೆಲಸಗಾರರನ್ನಿಟ್ಟುಕೊಂಡು ಕ್ಯಾಟಲ್‌ ಅಂಡರ್‌ ಪಾಸಿಂಗ್‌ ಘಟಕದ ಕಾಮಗಾರಿ ನಡೆಸಲಾರಂಭಿಸಿದೆ. ಆದರೆ ಇಷ್ಟು ದೊಡ್ಡ ಫ್ಲೈಓವರ್‌, ಹೆದ್ದಾರಿ ಕಾಮಗಾರಿ ಈ ಮೂರ್ನಾಲ್ಕು ಮಂದಿಯಿಂದ ಎಷ್ಟು ದಶಕಗಳ ಅವಧಿಯಲ್ಲಿ ಮುಗಿಯಬಹುದು ಎನ್ನುವುದು ಜನಸಾಮಾನ್ಯರ ಪ್ರಶ್ನೆ. ಇದು ಕೇವಲ ಕಾನೂನಿನ ಕುಣಿಕೆಯಿಂದ ಪಾರಾಗಲು ಮಾಡಿದ ತಂತ್ರದಂತಿದೆ.

– ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next