ಕುಂದಾಪುರ: ತಾಲೂಕು ಪಂಚಾಯತ್ ರಾಜ್ ಒಕ್ಕೂಟ ಕುಂದಾಪುರದ ವತಿಯಿಂದ ಗ್ರಾಮ ಪಂಚಾಯತ್‌ಗಳಲ್ಲಿ ಕೆ.ಡಿ.ಪಿ. ಸಭೆಯನ್ನು ನಡೆಸುವ ಕುರಿತಂತೆ ಮಾಹಿತಿ ಕಾರ್ಯಾಗಾರ ಮಂಗಳವಾರ ಕುಂದಾಪುರ ತಾ.ಪಂ. ಸಭಾಂಗಣದಲ್ಲಿ ನಡೆಯಿತು.
ಎಲ್ಲ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಉಡುಪಿ ಜಿಲ್ಲಾ ಪಂಚಾಯತ್‌ನಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಅವರು ಕೆ.ಡಿ.ಪಿ. ಸಭೆಯನ್ನು ನಡೆಸುವ ಬಗ್ಗೆ ಮಾಹಿತಿ ನೀಡಿ, ಸಭೆಯಲ್ಲಿ ಗಮನಿಸಬೇಕಾದ ಪ್ರಮುಖ ಅಂಶಗಳು, ಇದರಲ್ಲಿ ಚರ್ಚಿಸಬೇಕಾದ ವಿಷಯಗಳು, ಯಾವ – ಯಾವ ಇಲಾಖೆಗಳಿಂದ ಯಾವ ಯಾವ ವಿಷಯಗಳಲ್ಲ್ಲಿ ಗುರಿ ನಿಗದಿ ಮತ್ತು ಪ್ರಗತಿಯ ಪರಿಶೀಲನೆ ನಡೆಸಬೇಕು ಎನ್ನುವ ಬಗ್ಗೆ ಹಾಗೂ ಮುಂದಿನ ಅನುಸರಣೆಗಳ ಕುರಿತಾಗಿ ಮಾತನಾಡಿದ ಅವರು, ಈಗಾಗಲೇ ಮಾಡಿಕೊಂಡಿರುವ ಪೂವರ್ ತಯಾರಿ, ವಿವಿಧ ಇಲಾಖೆಗಳಿಂದ ಸಂಗ್ರಹಿಸಬಹುದಾದ ಮಾಹಿತಿಗಳ ನಮೂನೆಯನ್ನು ತಿಳಿಸಿ, ಅದರಂತೆ ಮಾಹಿತಿ ಕಲೆಹಾಕಲು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಪಂಚಾಯತ್ ರಾಜ್ ತಜ್ಞ ಎಸ್.ಜನಾರ್ದನ್ ಮರವಂತೆ ಮತ್ತು ಟಿ.ಬಿ. ಶೆಟ್ಟಿ ಅವರು ಗ್ರಾಮ ಸ್ವರಾಜ್ ಕಾಯ್ದೆಯ ಆಶಯದಂತೆ ಗ್ರಾಮ ಪಂಚಾಯತ್‌ಗೆ ನೀಡಬೇಕಾದ ಅಧಿಕಾರ ಹಸ್ತಾಂತರದ ಒಂದು ಪ್ರಮುಖ ಹೆಜ್ಜೆಯೆಂಬಂತೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ಕೆಡಿಪಿ ಸಭೆಯನ್ನು ನಡೆಸುವಂತೆ ಆದೇಶ ಹೊರಡಿಸಿರುವುದು ಸ್ವಾಗತಾರ್ಹ. ಇದರ ಮಹತ್ವದ ಕುರಿತು ಮತ್ತು ಸದುಯೋಗಪಡಿಸಿಕೊಳ್ಳುವುದು ಪ್ರತೀ ಗ್ರಾ.ಪಂ.ಗಳ ಜವಾಬ್ದಾರಿ ಎಂದರು.
ಉಡುಪಿ ಜಿ.ಪಂ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯೀ ಸಮಿತಿಯ ಅಧ್ಯಕ್ಷ ಕೆ. ಬಾಬು ಶೆಟ್ಟಿ ಅವರು ಕೆ.ಡಿ.ಪಿ. ಸಭೆಯ ಮೂಲಕ ಹೇಗೆ ವಿವಿಧ ಇಲಾಖೆಗಳನ್ನು ಗ್ರಾ.ಪಂ.ಗೆ ವರದಿ ಮಾಡುವಂತೆ ತಿಳಿಸಿ, ಆ ಮೂಲಕ ಗ್ರಾಮ ಮಟ್ಟದಲ್ಲಿ ವಿವಿಧ ಇಲಾಖೆಗಳ ಯೋಜನೆಗಳ ಸಮಗ್ರ ಅನುಷ್ಠಾನ ಮಾಡಲು ಸಾಧ್ಯವಿದೆ ಎಂದು ತಿಳಿಸಿದರು.
ಜಿ.ಪಂ. ಮಾಜಿ ಅಧ್ಯಕ್ಷ ರಾಜು ಪೂಜಾರಿ ಮಾತನಾಡಿದರು. ಕುಂದಾಪುರ ತಾಲೂಕು ಪಂಚಾಯತ್ ರಾಜ್ ಒಕ್ಕೂಟದ ಅಧಕ್ಷ ಉದಯ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಕುಂದಾಪುರ ತಾ.ಪಂ.ನ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಡಾ| ನಾಗಭೂಷಣ ಉಡುಪ, ದಿ ಕನ್ಸರ್ನ್ ್ಡಫಾರ್ ವರ್ಕಿಂಗ್ ಚಿಲ್ಡ್ರನ್ – ನಮ್ಮ ಭೂಮಿ ಸಂಸ್ಥೆಯ ಕಾರ್ಯಕರ್ತರು ಭಾಗವಹಿಸಿದ್ದರು.
ಕುಂದಾಪುರ ತಾ.ಪಂ. ರಾಜ್ ಒಕ್ಕೂಟದ ಪ್ರ. ಕಾರ್ಯದರ್ಶಿ ಸದಾಶಿವ ಪಡುವರಿ ಕಾರ್ಯಕ್ರಮ ನಿರ್ವಹಿಸಿದರು.