ಉಡುಪಿ: ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಕುಂದಾಪುರ ತಾಲೂಕು ಆಸ್ಪತ್ರೆಗೆ ಸುಮಾರು 10 ವರ್ಷಗಳ ಹಿಂದೆ ನಿರ್ಮಿಸಿ ಕೊಡಲಾಗಿದ್ದ 50 ಹಾಸಿಗೆಯ ಹೆರಿಗೆ ವಾರ್ಡ್ ಅನ್ನು 150 ಹಾಸಿಗೆಗೆ ಉನ್ನತೀ ಕರಿಸಲಾಗುವುದು. ಇದರಲ್ಲಿ ಎರಡು ಸೆಮಿಸ್ಪೆಷಲ್ ವಾರ್ಡ್, ಒಂದು ಸ್ಪೆಷಲ್ ವಾರ್ಡ್, ಸುಸಜ್ಜಿತ ಶಸ್ತ್ರ ಚಿಕಿತ್ಸಾ ಕೊಠಡಿ, ಲಿಫ್ಟ್ ಗಳನ್ನೊಳ ಗೊಂಡು ಸುಸಜ್ಜಿತ ಅತ್ಯಾಧುನಿಕ ಸೌಲಭ್ಯವುಳ್ಳ ಹೆರಿಗೆ ವಾರ್ಡನ್ನು ಒಂದೂ ವರೆ ವರ್ಷದೊಳಗೆ ನಿರ್ಮಿಸಿ ಕಟ್ಟಡವನ್ನು ಟ್ರಸ್ಟ್ ಪ್ರವರ್ತಕ ಡಾ| ಜಿ. ಶಂಕರ್ ಅವರು ತಮ್ಮ ತಾಯಿ ದಿ| ಲಕ್ಷ್ಮೀ ಸೋಮ ಬಂಗೇರ ಅವರ ಹೆಸರಿನಲ್ಲಿ ಸರಕಾರಕ್ಕೆ ಹಸ್ತಾಂತರಿಸಲಿದ್ದಾರೆ.
ಈಗಾಗಲೇ ಪ್ರತಿ ತಿಂಗಳು 175 ರಿಂದ 200ರಂತೆ ವಾರ್ಷಿಕ ಸರಿ ಸುಮಾರು 2,500 ಹೆರಿಗೆಗಳು ಈ ಆಸ್ಪತ್ರೆಯಲ್ಲಿ ನಡೆಯುತ್ತಿದೆ. ಈ ಪ್ರದೇಶದ ಸುತ್ತಮುತ್ತಲಿನ ಭಟ್ಕಳ, ಬೈಂದೂರು, ಹೊನ್ನಾವರ, ಸಾಗರ, ಹಾಲಾಡಿ, ಶಂಕರನಾರಾಯಣ ಹಾಗೂ ಒಳನಾಡು ಭಾಗಗಳ ಬಡವರು ಆಸ್ಪತ್ರೆಯ ಹೆರಿಗೆ ವಾರ್ಡನ್ನೇ ಅವಲಂಬಿಸಿರುವ ಕಾರಣ ಬೆಡ್ ಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಮನಗಂಡ ಡಾ| ಜಿ. ಶಂಕರ್ ಅವರು, ಹೆರಿಗೆ ವಾರ್ಡನ್ನು 150 ಹಾಸಿಗೆಗೆ ಉನ್ನತೀಕರಿಸಲು ಚಿಂತನೆ ನಡೆಸಿ ಇದೇ ಆ. 21ರಂದು ಸರಕಾರ ದಿಂದ ಅನುಮೋದನೆ ಪಡೆದು ಕೊಂಡು ಒಪ್ಪಂದ ಪತ್ರವನ್ನು ಮಾಡಿ ಕೊಂಡರು. ಈಗಾಗಲೇ 50 ಹಾಸಿಗೆಯ ಹೆರಿಗೆ ವಾರ್ಡನ್ನು ಟ್ರಸ್ಟ್ ಮೂಲಕ ಮೊಗವೀರ ಯುವ ಸಂಘಟನೆ ಕೋಟೇಶ್ವರ, ಕುಂದಾಪುರ ಘಟಕ ಹಾಗೂ ಆಸ್ಪತ್ರೆ ಸ್ಥಳೀಯ ರûಾ ಸಮಿತಿ ವತಿಯಿಂದ ಸ್ವತ್ಛತೆ ಹಾಗೂ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದೆ.
ಉಡುಪಿ ನಗರದಲ್ಲೂ ಸರ ಕಾರ ಸ್ಥಳಾವಕಾಶ ಕಲ್ಪಿಸಿದರೆ ಮುಂದಿನ ದಿನ ಗಳಲ್ಲಿ ಸುಸಜ್ಜಿತ ಅತ್ಯಾ ಧು ನಿಕ ಸೌಲಭ್ಯವುಳ್ಳ ಹೆರಿಗೆ ವಾರ್ಡ್ ನಿರ್ಮಿಸಿ ಸರಕಾರಕ್ಕೆ ಹಸ್ತಾಂ ತರಿ ಸುವ ಆಶಯವನ್ನು ಟ್ರಸ್ಟ್ ಹೊಂದಿದೆ ಎಂದು ಡಾ| ಜಿ.ಶಂಕರ್ ತಿಳಿಸಿದ್ದಾರೆ.
ಟ್ರಸ್ಟ್ ಹಲವು ಆಸ್ಪತ್ರೆಗಳಿಗೆ ಡಯಾಲಿಸಿಸ್ ಯಂತ್ರ, ಶವ ಶೈತ್ಯಾ ಗಾರ, ಸುಸಜ್ಜಿತ ಹೆರಿಗೆ ಮತ್ತು ಸಂತಾನ ಹರಣ ಶಸ್ತ್ರಚಿಕಿತ್ಸಾ ಘಟಕ ವನ್ನು ನಿರ್ಮಿಸಿ ಕೊಟ್ಟಿದೆ. ಮಣಿಪಾಲ ವಿ.ವಿ., ಮೊಗವೀರ ಯುವ ಸಂಘಟನೆ ಸಹ ಯೋಗ ದೊಂದಿಗೆ ಕಳೆದ 9 ವರ್ಷಗಳಿಂದ ಜಿಲ್ಲೆಯ ಎಲ್ಲ ಸಮುದಾಯದ 1.25 ಲಕ್ಷ ಫಲಾನು ಭವಿ ಗಳಿಗೆ ಜಿ. ಶಂಕರ್ ಮಣಿಪಾಲ ಆರೋಗ್ಯ ಸುರûಾ ಕಾರ್ಡುಗಳನ್ನು ನೀಡುತ್ತಿದೆ. ರಾಜಾÂದ್ಯಂತ ರಕ್ತದಾನ ಶಿಬಿರಗಳನ್ನು ಸಂಘಟಿಸುವ ಮೂಲಕ ಒಂದು ಲಕ್ಷ ಯೂನಿಟ್ ರಕ್ತ ವನ್ನು ಸಂಗ್ರಹಿಸಿದ್ದು ಶೇ. 25ರಷ್ಟು ಸ್ಥಳೀಯ ಸರಕಾರಿ ಜಿಲ್ಲಾಸ್ಪತ್ರೆಗಳಿಗೆ ನೀಡ ಲಾಗುತ್ತಿದೆ. ಮಣಿಪಾಲ ವಿ.ವಿ. ಯೊಂದಿಗೆ ಮಾಡಿಕೊಂಡ ಒಡಂಬಡಿಕೆ ಮೂಲಕ ಕ್ಯಾನ್ಸರ್ ವಾರ್ಡ್, ಕಿಡ್ನಿ, ಹೃದಯ ಹಾಗೂ ಇನ್ನಿತರ ರೋಗಿಗಳಿಗೆ ಸಾಕಷ್ಟು ಧನ ಸಹಾಯ ಮಾಡುತ್ತಿದೆ.