Advertisement
ಇದೀಗ ಕೇಂದ್ರ ಸರಕಾರವೂ ಅಗತ್ಯ ಕಾಮಗಾರಿಗಳಿಗೆ ಅನುಮತಿ ನೀಡಲು ದ್ದೇಶಿಸಿದೆ. ಅದಕ್ಕೂ ಮೊದಲೇ ಇಲ್ಲಿನ ಸಹಾಯಕ ಕಮಿಷನರ್ ಅವರು ಖುದ್ದು ಆಸಕ್ತಿ ವಹಿಸಿ ಜಿಲ್ಲಾಧಿಕಾರಿ ಬಳಿ ವಿಶೇಷ ಅನುಮತಿ ಕೇಳಿ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗುವಂತೆ ಮಾಡಿದ್ದಾರೆ.
ಫ್ಲೈಓವರ್ ಕಾಮಗಾರಿ ಭಾಗಶಃ ಹಂತದಲ್ಲಿದೆ. ಈಗ ಪೂರ್ಣಗೊಳಿಸದೆ ಇದ್ದರೆ ಮೇ ತಿಂಗಳಲ್ಲಿ ಮಳೆ ಪ್ರಾರಂಭ ವಾದರೆ ಅನಂತರ ನವೆಂಬರ್ ತನಕ ಕಾಮಗಾರಿ ಪುನಃ ಕೈಗೆತ್ತಿಕೊಳ್ಳಲು ಅಸಾಧ್ಯ. ಅಲ್ಲದೆ, ಕಾಮಗಾರಿ ವಸ್ತುಗಳು ಕೊಚ್ಚಿಹೋಗಿ ಅಧ್ವಾನ ಆಗುವ ಸಾಧ್ಯತೆ ಹೆಚ್ಚೇ ಇದೆ. ಆದ್ದರಿಂದ ಕಾಮಗಾರಿ ಪುನರಾರಂಭಕ್ಕೆ ತೀರ್ಮಾನಿಸಲಾಗಿತ್ತು. ಈಗ ಬೆರಳೆಣಿಕೆ ಕಾರ್ಮಿಕರು ಕೆಲಸದಲ್ಲಿ ತೊಡಗಿದ್ದಾರೆ. ಆರಂಭಿಸಲಾಗುವುದು
ಫ್ಲೈಓವರ್ ಕಾಮಗಾರಿಯಷ್ಟೇ ಅಲ್ಲ, ಅರ್ಧ ಆದ ರಸ್ತೆ ಕಾಮಗಾರಿ, ಸೇತುವೆ ಕಾಮಗಾರಿಗಳನ್ನೂ ಈ ಸಂದರ್ಭ ವಿಶೇಷ ಅನುಮತಿ ಪಡೆದು ಆರಂಭಿಸಲಾಗುವುದು. ಆದರೆ ಅಲ್ಲಿ ವೈಯಕ್ತಿಕ ಸ್ವತ್ಛತೆ, ಸಾಮಾಜಿಕ, ದೈಹಿಕ ಅಂತರದಂತಹ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುವುದು.
-ಕೆ. ರಾಜು, ಸಹಾಯಕ ಕಮಿಷನರ್, ಕುಂದಾಪುರ