Advertisement
ಆದೇಶಇಲ್ಲಿನ ಈ ಹಿಂದಿನ ಉಪವಿಭಾಗ ದಂಡಾಧಿಕಾರಿ, ಸಹಾಯಕ ಕಮಿಷನರ್ ಟಿ. ಭೂಬಾಲನ್ ಅವರು ನವಯುಗ ಉಡುಪಿ ಟೋಲ್‌ವೇ ಪ್ರೈ.ಲಿ.ಗೆ ಅವರು ಉಡುಪಿಯ ಕರಾವಳಿ ಬೈಪಾಸ್‌ನಲ್ಲಿ ಅಂಡರ್ ಪಾಸ್ ನ. 1ರೊಳಗೆ, ಶಾಸ್ತ್ರಿ ಸರ್ಕಲ್‌ನ ಫ್ಲೈಓವರ್, ಬಸ್ರೂರು ಮೂರುಕೈ ಅಂಡರ್‌ಪಾಸ್ ಕಾಮಗಾರಿ ಎ.1ರ ಒಳಗೆ ಮುಗಿಸಬೇಕೆಂದು ಕಳೆದ ವರ್ಷ ಅ.10ರಂದು ಆದೇಶ ನೀಡಿದ್ದರು. ಆದರೆ ನೀಡಿದ ಆದೇಶ ಕಾರ್ಯಗತವಾಗಿಲ್ಲ. ಸೆಕ್ಷನ್ 133ರ ಅಡಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಅವರು ಪ್ರಕರಣದ ವಿಚಾರಣೆ ನಡೆಸಿದ್ದು ಅಂತಿಮ ಆದೇಶ ಜಾರಿ ಮಾಡಿದ್ದರು. ಆದರೆ ಕಾಮಗಾರಿ ನಡೆಯದೇ ಹಣಕಾಸಿನ ಅಡಚಣೆಯಿಂದ ಕಾಮಗಾರಿ ಸ್ಥಗಿತವಾಗಿದ್ದು ನಿಗದಿತ ಅವಧಿಯೊಳಗೆ ಕಾಮಗಾರಿ ಮುಗಿಸ ದಿದ್ದರೆ ನ್ಯಾಯಾಲಯದ ಆದೇಶ ಉಲ್ಲಂಘನೆ ತೂಗುಗತ್ತಿ ನೇತಾಡಿದರೂ ಪ್ರಯೋಜನವಾಗಿಲ್ಲ. ವೇತನ ಕೊಡದೇ ಕೆಲಸಕ್ಕೆ ಬರಲಾರೆವು ಎಂದು ಕಾರ್ಮಿಕರು ಹೊರಟು ಹೋಗಿಯಾಗಿದೆ.
Related Articles
ಇಷ್ಟು ಸಮಯದಿಂದ ಕಾಮಗಾರಿ ಅರೆಬರೆ ಸ್ಥಿತಿಯಲ್ಲಿದ್ದು ಜನಪ್ರತಿನಿಧಿಗಳು ಹಾಗೂ ಅರ್ಧ ಕಾಮಗಾರಿಯ ಫ್ಲೈಓವರ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟ್ರೋಲ್‌ಗೆ ಒಳಗಾಗಿತ್ತು. ಐತಿಹಾಸಿಕ ಸ್ಮಾರಕ ಎಂಬಂತೆ ಈಗ ಇದನ್ನು ವಿಡಂಬನೆಗೆ ಬಳಸಿಕೊಳ್ಳಲಾಗುತ್ತಿದೆ. ಇದೀಗ ಒಂದಷ್ಟು ಸಂಘಟನೆಗಳು ಒಟ್ಟಾಗಿ ಪ್ರತಿಭಟನೆಗೆ ಮುಂದಾಗಿವೆ. ಅ.20ರಂದು ಬೆಳಗ್ಗೆಯಿಂದ ಅಪರಾಹ್ನವರೆಗೆ ಪ್ರತಿಭಟನೆ ನಡೆಯಲಿದೆ. ಈ ಮಧ್ಯೆ ಈಗಿನ ಜಿಲ್ಲಾಧಿಕಾರಿಗಳು ಕೂಡಾ ಗುತ್ತಿಗೆದಾರ ಸಂಸ್ಥೆ ಜತೆ ಮಾತುಕತೆ ನಡೆಸಿದ್ದು ಅ.20ರಿಂದ ಕಾಮಗಾರಿ ಆರಂಭಿಸುವುದಾಗಿ ಸಂಸ್ಥೆಯವರು ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದಾರೆ.
Advertisement