Advertisement

ಕುಂದಾಪುರ ಅಗ್ನಿಶಾಮಕ ಇಲಾಖೆಗೆ ಇಕ್ಕಟ್ಟಾದ ರಸ್ತೆಯೇ ಅಡ್ಡಿ! 

06:00 AM Jul 26, 2018 | |

ಬಸ್ರೂರು : ಅವಘಡಗಳೇನಾದರೂ ಸಂಭವಿಸಿದಲ್ಲಿ ಕುಂದಾಪುರ ಅಗ್ನಿಶಾಮಕ ಠಾಣೆಯಿಂದ ವಾಹನಗಳು ತರಾತುರಿಯಲ್ಲಿ ಹೊರಡುವುದು ಕಷ್ಟ. ಕಾರಣ ಇಲ್ಲಿನ ತೀವ್ರ ಇಕ್ಕಟ್ಟಾದ ರಸ್ತೆ!

Advertisement

ಕುಂದಾಪುರದ ಕೋಣಿಯಿಂದ 6 ಕಿ.ಮೀ. ದೂರದ ಕೋಣಿಯಲ್ಲಿ ರಾಜ್ಯ ಹೆದ್ದಾರಿಯಿಂದ 1.5 ಕಿ.ಮೀ. ದೂರದಲ್ಲಿ ಅಗ್ನಿಶಾಮಕ ಠಾಣೆಯಿದೆ. ಆದರೆ ರಸ್ತೆ ತೀವ್ರ ಇಕ್ಕಟ್ಟಾಗಿದ್ದು ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗಿದೆ. 
 
ಇಕ್ಕಟ್ಟಿನ ರಸ್ತೆಯಲ್ಲಿ ಬಂಧಿ!
ಕುಂದಾಪುರದ ಹಳೆ ಬಸ್‌ ನಿಲ್ದಾಣದ ಬಳಿ 1992ರಿಂದ ಕಾರ್ಯಾಚರಿಸುತ್ತಿದ್ದ ಠಾಣೆ 1998ರಲ್ಲಿ ಕೋಣಿ ಬದಿಗೆ ಸ್ಥಳಾಂತರವಾಗಿತ್ತು. ಸಿಬಂದಿಗಳಿಗೆ 14 ವಸತಿಗೃಹಗಳೂ ಇಲ್ಲಿವೆ.  ಕುಂದಾಪುರ ಪುರಸಭಾ ವ್ಯಾಪ್ತಿಯ ಹೊರಗೆ ಈ ಠಾಣೆಯಿದ್ದು ಸಂಪರ್ಕ ರಸ್ತೆ ಸಮರ್ಪಕವಾಗಿಲ್ಲ.  ಈ ಠಾಣೆಗೆ ಬೈಂದೂರು, ಹಂಗಾರಕಟ್ಟೆ ಸೇತುವೆ, ಬೆಳ್ವೆ-ಮಡಾಮಕ್ಕಿ -ಕಾಸನಮಕ್ಕಿ-ಅಮಾಸೆಬೈಲು ತನಕ ವ್ಯಾಪ್ತಿಯಿದ್ದು ಇಲ್ಲಿಂದ ಅಗತ್ಯ ಬಿದ್ದಾಗ ಇಕ್ಕಟ್ಟಾದ ರಸ್ತೆಯಲ್ಲೇ ಹೊರಡಬೇಕಾಗುತ್ತದೆ. ಇದಕ್ಕಾಗಿ ರಸ್ತೆ ಅಗಲೀಕರಣ ಅಗತ್ಯವಾಗಿದೆ. 
 
ಮನವಿ
ರಸ್ತೆ ಅಗಲೀಕರಣಗೊಳಿಸುವಂತೆ   ಅಗ್ನಿಶಾಮಕ ಠಾಣಾ ಅಧಿಕಾರಿ ವೆಂಕಟರಮಣ ಮೊಗೇರ ಅವರು ಮೇಲಧಿ ಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಇನ್ನು ರಸ್ತೆ ಅಗಲೀಕರಣ ಮಾತ್ರ ನಡೆದಿಲ್ಲ. 

ಮನವಿ ಮಾಡಲಾಗಿದೆ
ಇಲ್ಲಿನ ಸಂಪರ್ಕ ರಸ್ತೆಯ ಬಗ್ಗೆ ಮೇಲಧಿಕಾರಿಗಳಿಗೆ ಮನವಿ ಮಾಡುತ್ತಲೇ ಇದ್ದೇವೆ. ಆದರೆ ಪ್ರಯೋಜನವಾಗಿಲ್ಲ . ಅಗ್ನಿ ಅವಘಡಗಳು ಸಂಭವಿಸಿದ ತಕ್ಷಣ ತೆರಳಲು ಅಗಲ ಕಿರಿದಾದ ರಸ್ತೆಯು ತೊಡಕಾಗಿದೆ.
– ವೆಂಕಟರಮಣ ಮೊಗೇರ,
ಠಾಣಾಧಿಕಾರಿ, ಕುಂದಾಪುರ ಅಗ್ನಿಶಾಮಕ ಠಾಣೆ

ಮೊದಲೇ ಯೋಚಿಸಬೇಕಿತ್ತು
ಕೋಣಿಯಲ್ಲಿ  ಠಾಣೆ ಸ್ಥಾಪನೆಯಾಗುವ ಸಂದರ್ಭದಲ್ಲೆ ನಾನು ಗ್ರಾ.ಪಂ. ಸದಸ್ಯನಾಗಿ ಈ ಇಕ್ಕಟ್ಟಿನ ರಸ್ತೆಯ ಬಗ್ಗೆ ಪ್ರಸ್ತಾಪಿಸಿದ್ದೇನೆ. ಆದರೆ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಈಗ ಸಾಲು ಸಾಲು ಮನೆಗಳಿರುವುದರಿಂದ ಅಗಲೀಕರಣ ಗ್ರಾ.ಪಂ.ಗೆ ಸಾಧ್ಯವಾಗುತ್ತಿಲ್ಲ. ಸರಕಾರ ಇಲ್ಲಿ ವಾಸಿಸುವ ಮಂದಿಗೆ ಬೇರೆಡೆ ಜಾಗ ಕಲ್ಪಿಸಿ ಪರಿಹಾರ ನೀಡಿದರೆ ಇಕ್ಕಟ್ಟಿನ ರಸ್ತೆ ಅಗಲ ಮಾಡಬಹುದು. 
–  ಕೆ. ಸಂಜೀವ ಮೊಗವೀರ,
ಅಧ್ಯಕ್ಷರು, ಗ್ರಾ.ಪಂ. ಕೋಣಿ

Advertisement

Udayavani is now on Telegram. Click here to join our channel and stay updated with the latest news.

Next