Advertisement
3 ಹೋಬಳಿಗಳಾದ ಕುಂದಾಪುರ, ಬೈಂದೂರು ಹಾಗೂ ವಂಡ್ಸೆಯನ್ನು ಒಳಗೊಂಡ ಅವಿಭಜಿತ ಕುಂದಾಪುರ ತಾಲೂಕಿನಲ್ಲಿ ಈ ಭಾಗದಲ್ಲಿ ಭತ್ತ, ಉದ್ದು, ನೆಲಗಡಲೆ, ಹೆಸರು, ಹುರುಳಿ, ಅಲಸಂಡೆ, ಮುಸುಕಿನ ಜೋಳ ಹಾಗೂ ಕಬ್ಬು ಬೆಳೆಗಳನ್ನು ಬೆಳೆಯುವ ಗುರಿ ಹೊಂದಲಾಗಿದೆ. ಇದರಲ್ಲಿ ಈವರೆಗೆ ಶೇ.48 ರಷ್ಟು ಕೂಡ ಗುರಿ ಸಾಧಿಸಲಾಗಿದೆ. ಆದರೆ 1,335 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಕೃಷಿಯ ಹೊಂದಿದ್ದು, ಈ ಪೈಕಿ ಈವರೆಗೆ ಕೇವಲ 520 ಹೆಕ್ಟೇರ್ ಪ್ರದೇಶದಲ್ಲಿ ಅಷ್ಟೇ ಬೆಳೆಯಲಾಗಿದೆ. ಭತ್ತ ಕೃಷಿಯ ಗುರಿ ನಿಗದಿಯ ಶೇ.38 ರಷ್ಟು ಮಾತ್ರ ಸಾಧ್ಯವಾಗಿದೆ.
ಉದ್ದು ಒಟ್ಟಾರೆ 875 ಹೆ. ಗುರಿಯಲ್ಲಿ 560 ಹೆ. ಬೆಳೆಸಲಾಗಿದೆ. ಹೆಸರು ಬೆಳೆ 40 ಹೆ. ಗುರಿಯಿದ್ದು, ಇದರಲ್ಲಿ 8 ಹೆ. ಗುರಿ ಸಾಧ್ಯವಾಗಿದೆ. ಅಲಸಂಡೆ ಬೆಳೆ 40 ಹೆ. ಪ್ರದೇಶದಲ್ಲಿ ಗುರಿಯಿದ್ದು, ಈ ವರೆಗೆ ಎಲ್ಲಿಯೂ ಬೆಳೆಸಲಾಗಿಲ್ಲ. ಮುಸುಕಿನ ಜೋಳವನ್ನು 5 ಹೆ. ಪ್ರದೇಶದಲ್ಲಿ ಬೆಳೆಸಲಾಗಿದೆ. ಕಬ್ಬು 28 ಹೆ. ಪ್ರದೇಶದಲ್ಲಿ ಬೆಳೆಯಲಾಗಿದೆ. ಮುಂಗಾರು ಶೇ.97 ಸಾಧನೆ
ಅವಿಭಜಿತ ಕುಂದಾಪುರ ತಾಲೂಕಿನ 3 ಹೋಬಳಿಗಳಲ್ಲಿ ಒಟ್ಟು ಸೇರಿ ಮುಂಗಾರು ಹಂಗಾಮಿನಲ್ಲಿ ಶೇ. 97 ರಷ್ಟು ಗುರಿ ಸಾಧಿಸಲಾಗಿದೆ. ಒಟ್ಟಾರೆ 13,725 ಹೆ. ಪ್ರದೇಶದಲ್ಲಿ ಕೃಷಿ ಮಾಡುವ ಗುರಿ ಹೊಂದಲಾಗಿದ್ದು, ಈ ಪೈಕಿ 13,370 ಹೆ. ಪ್ರದೇಶದಲ್ಲಿ ಬೆಳೆಸಲಾಗಿದೆ.
Related Articles
ಜಿಲ್ಲೆಯಲ್ಲಿಯೇ ಅತ್ಯಧಿಕ ನೆಲಗಡಲೆ ಬೆಳೆಯುವ ತಾಲೂಕು ಕುಂದಾಪುರವಾಗಿದೆ. ಈ ಬಾರಿ ಒಟ್ಟು 1,430 ಹೆ. ಗುರಿಯಿದ್ದು, ಇದರಲ್ಲಿ 695 ಹೆ. ಪ್ರದೇಶದಲ್ಲಿ ಬೆಳೆಯಲಾಗಿದೆ. ಈ ಪೈಕಿ ಕುಂದಾಪುರ ಹೋಬಳಿಯಲ್ಲಿ 200 ಹೆ. ಪೈಕಿ 190 ಹೆ., ಬೈಂದೂರಲ್ಲಿ 500 ಹೆ. ಹಾಗೂ ವಂಡ್ಸೆಯಲ್ಲಿ ಕೇವಲ 5 ಹೆ. ಪ್ರದೇಶದಲ್ಲಿ ಅಷ್ಟೇ ಬೆಳೆಯಲಾಗಿದೆ.
Advertisement
ಉತ್ತಮ ಬೆಳೆ ಸಾಧ್ಯತೆಈ ಬಾರಿ ಮುಂಗಾರಿನಲ್ಲಿಯೂ ಮಳೆಯ ಪ್ರಮಾಣ ಚೆನ್ನಾಗಿ ಇದ್ದುದರಿಂದ ಎಲ್ಲೆಡೆ ಉತ್ತಮ ಕೃಷಿಯಾಗಿದೆ. ಹಿಂಗಾರಿನಲ್ಲಿಯೂ ಉತ್ತಮ ಮಳೆಯಾಗಿದ್ದು, ಒಳ್ಳೆಯ ಬೆಳೆಯಾಗುವ ನಿರೀಕ್ಷೆಯಿದೆ. ಉದ್ದು, ನೆಲಗಡಲೆ ಬೆಳೆಸಲು ರೈತರು ಹೆಚ್ಚು ಆಸಕ್ತಿ ವಹಿಸಿದ್ದಾರೆ. ತಾಲೂಕಿನಲ್ಲಿ ಒಟ್ಟು 88 ಕ್ವಿಂಟಾಲ್ ಭತ್ತ, 12.60 ಕ್ವಿಂಟಾಲ್ ಉದ್ದು, 205 ಕ್ವಿಂಟಾಲ್ ನೆಲಗಡಲೆ ಬೀಜವನ್ನು ರೈತರಿಗೆ ವಿತರಿಸಲಾಗಿದೆ.
– ರೂಪಾ, ಸಹಾಯಕ ಕೃಷಿ ನಿರ್ದೇಶಕಿ, ಕುಂದಾಪುರ ಪ್ರಶಾಂತ್ ಪಾದೆ