Advertisement

ಕುಂದಾಪುರ: ಕಾರು ಢಿಕ್ಕಿಯಾಗಿ ಸೈಕಲ್‌ ಸವಾರ ಸಾವು

07:20 PM Mar 06, 2022 | Team Udayavani |

ಕುಂದಾಪುರ: ಸೈಕಲ್‌ಗೆ ಕಾರು ಢಿಕ್ಕಿಯಾಗಿ ಸೈಕಲ್‌ ಸವಾರ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ ಘಟನೆ ಮಾ.6 ರಂದು ಬೆಳಗ್ಗೆ 9.20 ರ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 66ರ ಹೇರಿಕುದ್ರು ಬಳಿ ಸಂಭವಿಸಿದೆ.

Advertisement

ಸಾವನ್ನಪ್ಪಿದವರು ಶ್ರೀಧರ್‌ ಮಯ್ಯ ಎನ್ನುವವರಾಗಿದ್ದು, ತಲ್ಲೂರು ಕಡೆಯಿಂದ ಕುಂದಾಪುರ ಕಡೆಗೆ ಸೈಕಲ್‌ನಲ್ಲಿ ಬರುತ್ತಿದ್ದ ಶ್ರೀಧರ್‌ ಮಯ್ಯ ಅವರಿಗೆ ಚಂದ್ರಕಾಂತ ಎಂಬುವರು ಚಲಾಯಿಸುತ್ತಿದ್ದ ಕಾರು ಹಿಂದಿನಿಂದ ಢಿಕ್ಕಿ ಹೊಡೆದಿದೆ.

ಪರಿಣಾಮ ತಲೆಗೆ ಗಂಭೀರ ಗಾಯಗೊಂಡ ಅವರನ್ನು ಕೂಡಲೇ ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ. ಕಾರು ಚಾಲಕ ಚಂದ್ರಕಾಂತ ವಿರುದ್ಧ ಕುಂದಾಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next