Advertisement
ಮತಗಟ್ಟೆ ವಿವರಒಟ್ಟು 222 ಮತಗಟ್ಟೆಗಳಿದ್ದು, ಕುಂದಾಪುರ ಹೋಬಳಿಯಲ್ಲಿ 33, ಕೋಟ ಹೋಬಳಿಯಲ್ಲಿ 89 ಮತಗಟ್ಟೆಗಳಿವೆ. 64 ಸೂಕ್ಷ್ಮ ಮತಗಟ್ಟೆಗಳಿದ್ದು, 30 ಮತಗಟ್ಟೆಗಳನ್ನು ವಲ್ನರೇಬಲ್ ಮತಗಟ್ಟೆಗಳನ್ನಾಗಿ ಗುರುತಿಸಲಾಗಿದೆ. 4 ಮತಗಟ್ಟೆಗಳು ಸಖೀ ಮತಗಟ್ಟೆಗಳಾಗಿದ್ದು, ಅಲ್ಲಿ ಮಹಿಳಾ ಸಿಬಂದಿ ಕರ್ತವ್ಯ ನಿರ್ವಹಿಸುತ್ತಾರೆ. ಒಂದು ಮತಗಟ್ಟೆಯು ಅಂಗವಿಕಲರ ಮತಗಟ್ಟೆಯಾಗಿದ್ದು, ಅಲ್ಲಿ ಅಂಗವಿಕಲ ಸಿಬಂದಿಯಿರುತ್ತಾರೆ. ಕೊರಗ ಸಮುದಾಯ ಹೆಚ್ಚಿಗೆ ಇರುವ ಒಂದು ಮತಗಟ್ಟೆಯನ್ನು ಕೊರಗ ಸಂಪ್ರದಾಯ ಬಿಂಬಿಸುವ ಉದ್ದೇಶಕ್ಕಾಗಿ ಎಥಿ°ಕಲ್ ಮತಗಟ್ಟೆಯಾಗಿ ಗುರುತಿಸಲಾಗಿದೆ.
ಕಾದಿರಿಸಿದ ಸಿಬಂದಿ ಸೇರಿ ಅಧ್ಯûಾಧಿಕಾರಿಗಳು 238, ಸಹಾಯಕ ಅಧ್ಯûಾಧಿಕಾರಿ 238, ಪೋಲಿಂಗ್ ಆಫೀಸರ್ 546 ಒಟ್ಟು 1,022 ಅಧಿಕಾರಿಗಳನ್ನು ನೇಮಿಸಿಕೊಳ್ಳಲಾಗಿದೆ. ಸಂಬಂಧಪಟ್ಟ ಸಿಬಂದಿಗೆ ಈಗಾಗಲೇ ಎರಡು ಹಂತದಲ್ಲಿ ತರಬೇತಿ ನೀಡಿ ಸನ್ನದ್ಧಗೊಳಿಸಲಾಗಿದೆ.
Related Articles
ಚುನಾವಣ ಪ್ರಕ್ರಿಯೆಯಲ್ಲಿ ನಿಯೋಜಿತ ಅಧಿಕಾರಿ ಹಾಗೂ ಮತಗಟ್ಟೆ ಅಧಿಕಾರಿಗಳಿಗೆ ಅಗತ್ಯ ವಾಹನ ಸೌಲಭ್ಯ ಮಾಡಲಾಗಿದ್ದು, ಇದಕ್ಕಾಗಿ 37 ಬಸ್‌ಗಳು, 28 ವ್ಯಾನ್‌ಗಳನ್ನು ಉಪಯೋಗಿಸಿಕೊಳ್ಳಲಾಗಿದೆ. ಹೊರ ತಾಲೂಕುಗಳಿಂದ ಆಗಮಿಸುವ ಸಿಬಂದಿಗೆ ಆಯಾ ತಾಲೂಕು ಕೇಂದ್ರಗಳಿಂದ ವಾಹನ ವ್ಯವಸ್ಥೆ ಕಲ್ಪಿಸಲಾಗಿದೆ.
Advertisement
ಮತಯಂತ್ರಗಳ ತಯಾರಿಚುನಾವಣ ಅಂತಿಮ ಕಣದಲ್ಲಿರುವ 12 ಅಭ್ಯರ್ಥಿಗಳ ಕ್ಯಾಂಡಿಡೇಟ್ ಸೆಟ್ಟಿಂಗ್ ಕಾರ್ಯವನ್ನು ಎ. 10ರಂದು ಭಂಡಾರ್‌ಕಾರ್ ಕಲಾ ಮತ್ತು ವಿಜ್ಞಾನ ಕಾಲೇಜು ಕುಂದಾಪುರ ಇಲ್ಲಿ ವಿವಿಧ ರಾಜಕೀಯ ಪಕ್ಷಗಳ ಏಜೆಂಟ್ ಹಾಗೂ ಅಭ್ಯರ್ಥಿಗಳ ಸಮ್ಮುಖದಲ್ಲಿ ನಡೆಸಿ, ಭದ್ರತಾ ಕೊಠಡಿ ಯಲ್ಲಿ ಬಿಗು ಆರಕ್ಷಕ ಬಂದೋಬಸ್ತಿನೊಂದಿಗೆ ದಾಸ್ತಾನು ಇರಿಸಲಾಗಿದೆ. ಚುನಾವಣ ಭದ್ರತೆ
ರಕ್ಷಣಾ ತುಕಡಿಗಳನ್ನು ನಿಯೋಜಿಸಿಕೊಳ್ಳಲಾಗಿದ್ದು, ವಿಶೇಷವಾಗಿ ವನ್ಯಮೃಗಗಳ ಉಪಟಳವಿರುವಲ್ಲಿ ಅಗತ್ಯ ಅರಣ್ಯ ಇಲಾಖೆಯ ರಕ್ಷಣಾ ತಂಡವನ್ನು ಹಾಗೂ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಅರೆಸೇನಾ ಭದ್ರತಾ ಪಡೆಗಳನ್ನು ಬಳಸಿಕೊಳ್ಳಲಾಗಿದೆ. ಚುನಾವಣ ಸಂಬಂಧ ಮಸ್ಟರಿಂಗ್ ಕಾರ್ಯವನ್ನು ಎ. 17ರಂದು ಹಾಗೂ ಡಿಮಸ್ಟರಿಂಗ್ ಕಾರ್ಯವನ್ನು ಎ. 18ರಂದು ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜಿನಲ್ಲಿ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಮಾದರಿ ನೀತಿ ಸಂಹಿತೆ
ಒಟ್ಟು 17 ರೆವಿನ್ಯೂ ಸೆಕ್ಟರ್ ಅಧಿಕಾರಿಗಳ, 30 ಪೊಲೀಸ್ ಇನ್‌ಸ್ಪೆಕ್ಟರ್ ಅಧಿಕಾರಿಗಳ ತಂಡ ರಚಿಸಲಾಗಿದೆ. ಕ್ಷೇತ್ರದಲ್ಲಿ 3 ಫ್ಲೆ„ಯಿಂಗ್ ಸ್ಕ್ವಾಡ್ ತಂಡ ರಚಿಸಲಾಗಿದ್ದು, ಪ್ರತಿ ತಂಡದಲ್ಲೂ ತಲಾ 3 ಅಧಿಕಾರಿಗಳಂತೆ ಒಟ್ಟು 9 ಅಧಿಕಾರಿಗಳಿದ್ದಾರೆ. ಈ ತಂಡವು 24×7 ರಂತೆ ಕಾರ್ಯಾ ಚರಿಸುತ್ತದೆ. ತಂಡದಲ್ಲಿ ಒಬ್ಬ ಅಧಿಕಾರಿ ಪೊಲೀಸ್ ಹಾಗೂ ವೀಡಿಯೋ ಗ್ರಾಫರ್ ಒಳಗೊಂಡಿ ರುತ್ತಾರೆ. ಕ್ಷೇತ್ರದಲ್ಲಿ ವೀಡಿಯೋ ಸರ್ವೆಲೈನ್ಸ್ ತಂಡಗಳನ್ನು ರಚಿಸಲಾಗಿದ್ದು, ಈ ತಂಡದಲ್ಲೂ ಸಹ ಒಬ್ಬ ಅಧಿಕಾರಿ, ಪೊಲೀಸ್ ಹಾಗೂ ವೀಡಿಯೋ ಗ್ರಾಫರ್ ಒಳಗೊಂಡಿದ್ದಾರೆ. ಸಹಾಯಕ ಚುನಾವಣಾಧಿಕಾರಿ ಕಚೇರಿಯಲ್ಲಿ ಒಂದು ವೀಡಿಯೋ ವ್ಯೂವಿಂಗ್ ತಂಡವನ್ನು ರಚಿಸಲಾಗಿದೆ. 24×7 ಮಾದರಿಯಲ್ಲಿ ಕಂಟ್ರೋಲ್ ರೂಂ (08254-298058) ಹಾಗೂ ಟೋಲ್ ಫ್ರೀ ನಂಬರ್ 1950 ನ್ನು ತೆರೆಯಲಾಗಿದೆ. ಏಕ ಗವಾಕ್ಷಿ ತೆರೆಯಲಾಗಿದ್ದು, ಇದರಲ್ಲಿ ವಿವಿಧ ಸಭೆ/ ಸಮಾರಂಭಗಳನ್ನು ನಡೆಸಲು ಅನುಮತಿ ಕೋರಿ ಸಲ್ಲಿಸಲಾದ ಅರ್ಜಿಗಳಿಗೆ ನಿಯಮಾನುಸಾರ ಅನುಮತಿ ನೀಡಲಾಗುತ್ತದೆ. ಲೆಕ್ಕ ಪತ್ರ ಪರಿಶೀಲನೆ ತಂಡವನ್ನು ರಚಿಸಲಾಗಿದೆ. ಚುನಾವಣ ಆಯೋಗ ಬಿಡುಗಡೆ ಮಾಡಿದ ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ದೂರು ಸಲ್ಲಿಸಲು ಸೀವಿಜಿಲ್ ಮೊಬೈಲ್ ಆ್ಯಪ್ ಇದೆ. ಮತದಾನ ಜಾಗೃತಿ
ಪ್ರತಿ ಗ್ರಾಮದಲ್ಲಿ ಸಂಘ ಸಂಸ್ಥೆಗಳು ಹಾಗೂ ವಿವಿಧ ಅಧಿಕಾರಿಗಳ ತಂಡಗಳ ಮೂಲಕ ಮತದಾನ ಜಾಗೃತಿ ಮಾಡಲಾಗಿದೆ. ಅರ್ಹ ಮತದಾರರಿಗೆ ಭಾವಚಿತ್ರವಿರುವ ವೋಟರ್ ಸ್ಲಿಪ್ ಹಾಗೂ ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಗೊಂಡವರಿಗೆ ಮತದಾರರ ಗುರುತು ಚೀಟಿ ಹಂಚುವ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮತದಾನದ ಪ್ರಕ್ರಿಯೆಯಲ್ಲಿ ಬಿಎಲ್‌ಒ ಅವರು ನೀಡಿದ ವೋಟರ್‌ಸ್ಲಿಪ್‌ಅನ್ನು ಗುರುತುಚೀಟಿ (ಎಪಿಕ್) ಹಾಗೂ ಚುನಾವಣ ಆಯೋಗ ನಿರ್ದೇಶಿಸಿದ ಇನ್ನಿತರ 11 ದಾಖಲೆಗಳನ್ನು ಬಳಸಿ ಪಾಲ್ಗೊಳ್ಳುವಂತೆ ಸಲಹೆ ನೀಡಲಾಗಿದೆ.