Advertisement
ಉಳ್ಳೂರಿನಲ್ಲಿ ಪ್ಲಾಸ್ಟಿಕ್ ಶೆಡ್‌ನಲ್ಲಿ 67ರ ಹರೆ ಯದ ವೃದ್ಧೆ ಮೂಕಾಂಬಿಕೆ ತನ್ನ ಪುತ್ರ ಈಶ್ವರ್ (47) ಜತೆ ವಾಸಿಸುತ್ತಿದ್ದರು. ಇವರು ಮೂಲತಃ ಬೈಂದೂರಿನವರಾಗಿದ್ದರೂ ಹಲವು ವರ್ಷಗಳ ಹಿಂದೆ ಹೊಸನಗರದಲ್ಲಿ ಬಾಡಿಗೆ ಮನೆಯಲ್ಲಿದ್ದರು. ನಾಲ್ಕು ತಿಂಗಳ ಹಿಂದೆ ಮತ್ತೆ ಬೈಂದೂರು ತಾಲೂಕಿಗೆ ಬಂದು ಇಲ್ಲಿ ನೆಲೆಸಿ ದ್ದರು. ಕೆಲವು ದಿನಗಳ ಹಿಂದೆ ಮೂಕಾಂಬಿಕೆ ಅವರು ಬಿದ್ದು ಕಾಲು ಮುರಿದಿತ್ತು.
ಹೀಗಿರುವಾಗ ಉದಯವಾಣಿ ಪತ್ರಿಕೆ ಇವರಿಗೆ ಸಿಕ್ಕಿದ್ದು ಅದರಲ್ಲಿರುವ ನಂಬರ್‌ಗೆ ಕರೆ ಮಾಡಿ ತಾವು ಮೊದಲು ಇದ್ದ ಹೊಸನಗರಕ್ಕೆ ತೆರಳಲು ಪೊಲೀಸರಿಂದ ಅನುಮತಿ ದೊರಕಿಸಿಕೊಡುವಂತೆ ಮನವಿ ಮಾಡಿದ್ದರು. ಅಲ್ಲಿ ತಾಯಿಗೆ ಚಿಕಿತ್ಸೆ ಕೊಡಿಸುವ ಬಯಕೆಯನ್ನು ಈಶ್ವರ್ ವ್ಯಕ್ತಪಡಿಸಿದ್ದರು. ಕೂಡಲೇ ಕುಂದಾಪುರ ಎ.ಎಸ್.ಪಿ. ಹರಿರಾಮ್ ಶಂಕರ್‌ಗೆ ವಾಸ್ತವತೆ ತಿಳಿಸಲಾಯಿತು. ತತ್‌ಕ್ಷಣ ಸ್ಪಂದಿಸಿದ ಅವರು ಬೈಂದೂರು ಠಾಣಾಧಿಕಾರಿ ಸಂಗೀತಾ ಮತ್ತು ಸಿಬಂದಿ ಯನ್ನು ಅವರ ಮನೆಗೆ ಪರಿಶೀಲನೆಗಾಗಿ ಕಳುಹಿಸಿದರು. ಇವರ ಶೋಚ ನೀಯ ಪರಿಸ್ಥಿತಿ ಕಂಡ ಠಾಣಾಧಿಕಾರಿಗಳು ಸ್ವಲ್ಪ ಆರ್ಥಿಕ ನೆರವು ಹಾಗೂ ಒಂದು ತಿಂಗಳಿಗಾಗುವಷ್ಟು ಆಹಾರ ಸಾಮಗ್ರಿ ಕೂಡ ನೀಡಿದರು. ಮಾತ್ರವಲ್ಲದೆ ಮೂಕಾಂಬಿಕೆ ಅವರ ಚಿಕಿತ್ಸೆಗೆ ವೈದ್ಯಕೀಯ ನೆರವು ಒದಗಿ ಸುವ ವ್ಯವಸ್ಥೆ ಮಾಡಿ ಉಡುಪಿಯ ಆಸ್ಪತ್ರೆಗೆ ದಾಖಲಿಸಲು ವ್ಯವಸ್ಥೆ ಮಾಡಿದ್ದಾರೆ. ಉಡುಪಿಯ ಕೆಲವು ದಾನಿಗಳು ಕೂಡ ಇವರ ನೆರವಿಗೆ ಧಾವಿಸಿದ್ದಾರೆ.
Related Articles
ಲಾಕ್‌ಡೌನ್‌ನಿಂದ ಪರಿಸ್ಥಿತಿ ತುಂಬಾ ಕಷ್ಟದಲ್ಲಿತ್ತು. ತಾಯಿಗೆ ಸೂಕ್ತ ಚಿಕಿತ್ಸೆ ಕೊಡಲು ಹೊಸನಗರಕ್ಕೆ ತೆರಳಬೇಕಿತ್ತು. ನಿತ್ಯ ಊಟಕ್ಕೂ ಕಷ್ಟ ಪಡಬೇಕಾದ ಸಂದರ್ಭದಲ್ಲಿ ಪತ್ರಿಕೆ ಹಾಗೂ ಆರಕ್ಷಕ ಇಲಾಖೆ ನನಗೆ ನೆರವು ನೀಡಿದೆ. ಇದರಿಂದ ನನಗೆ ಬಹಳ ಉಪಕಾರವಾಗಿದೆ.
-ಈಶ್ವರ ಉಳ್ಳೂರು.
Advertisement
ತುರ್ತು ನೆರವುಮಾಹಿತಿ ಪಡೆದ ತತ್‌ಕ್ಷಣ ಬೈಂದೂರು ಠಾಣಾಧಿಕಾರಿಯವರನ್ನು ಸ್ಥಳಕ್ಕೆ ಕಳುಹಿಸಿ ವಿವರ ಪಡೆದಿದ್ದೇನೆ. ಮಾತ್ರವಲ್ಲದೆ ತುರ್ತು ನೆರವು ನೀಡಲಾಗಿದ್ದು ಅವರಿಗೆ ಅವಶ್ಯವಿರುವ ಎಲ್ಲ ನೆರವನ್ನು ನೀಡುವ ವ್ಯವಸ್ಥೆ ಮಾಡಲಾಗಿದೆ. ತಾಯಿಯ ಚಿಕಿತ್ಸೆಗೆ ಯಾವುದೇ ರೀತಿ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗುವುದು ಮತ್ತು ಲಾಕ್‌ಡೌನ್‌ನಿಂದ ಅವರ ಕುಟುಂಬಕ್ಕೆ ಆಹಾರ ತೊಂದರೆಯಾಗದಂತೆ ಇಲಾಖೆ ನೋಡಿಕೊಳ್ಳುತ್ತದೆ. ದಾನಿಗಳ ಮಾನವೀಯ ಸ್ಪಂದನೆಯ ನಿರೀಕ್ಷೆ ಕೂಡ ಇದೆ.
-ಹರಿರಾಮ್ ಶಂಕರ್, ಎ.ಎಸ್.ಪಿ. ಕುಂದಾಪುರ