Advertisement
ಶಾಸಿŒ ಸರ್ಕಲ್‌ನಿಂದ ಮೆರವಣಿಗೆ ಮೂಲಕ ಮಿನಿ ವಿಧಾನಸೌಧಕ್ಕೆ ತೆರಳಿ ಅಲ್ಲಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ದುಬಾರಿ ದಂಡ, ಕೇಂದ್ರ ಮೋಟಾರ್ ವಾಹನ ಕಾಯ್ದೆ ತಿದ್ದುಪಡಿ 2019ನ್ನು ಹಿಂಪಡೆಯಬೇಕು. 15 ವರ್ಷಕ್ಕಿಂತ ಹಳೆಯ ಅಟೋಗಳನ್ನು ರದ್ದುಪಡಿಸುತ್ತಿದ್ದು ಹಳೆ ಆಟೋಗಳಿಗೆ ಕಂಪೆನಿಗಳಿಂದ ದರ ನಿಗದಿಪಡಿಸಬೇಕು. ಸರಕಾರ ಪ್ರೋತ್ಸಾಹಧನ ವಾಗಿ 50 ಸಾವಿರ ರೂ. ನೀಡಬೇಕು. ರಾಷ್ಟ್ರೀಕೃತ ಬ್ಯಾಂಕಿನಿಂದ ಸಾಲ ಸೌಲಭ್ಯ ನೀಡಬೇಕು. ಆಟೋ ಚಾಲಕರಿಗೆ ಮನೆ, ಕಾಲನಿ ನಿರ್ಮಿಸಿಕೊಡಬೇಕು. ವಾಹನಗಳ ವಿಮಾ ಪ್ರೀಮಿಯಂ ದರ ಹೆಚ್ಚಳವನ್ನು ನಿಯಂತ್ರಿಸಬೇಕು. ಅಸಂಘಟಿತ ಕಾರ್ಮಿಕರಾದ ಅಟೋ ಚಾಲಕರಿಗೆ ಪಶ್ಚಿಮ ಬಂಗಾಳ ಮಾದರಿಯಲ್ಲಿ ಭವಿಷ್ಯನಿಧಿ ಜಾರಿಗೊಳಿಸಬೇಕು, ಪಿಂಚಣಿ ಯೋಜನೆ ಜಾರಿಗೊಳಿಸಬೇಕು. ಅಸಂಘಟಿತ ಕಾರ್ಮಿಕರ ಕಲ್ಯಾಣ ಭದ್ರತಾ ಮಂಡಳಿ ರಚಿಸಬೇಕು, ಕಲ್ಯಾಣ ಕಾರ್ಯಕ್ರಮ ಜಾರಿಗೊಳಿಸಬೇಕು. ಅಟೋ ಚಾಲಕರ ಕುಟುಂಬಕ್ಕೆ ಇಎಸ್‌ಐ ಸೌಲಭ್ಯ ಜಾರಿಗೊಳಿಸಬೇಕು. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಬೇಕು. ಹೊಂಡಗಳನ್ನು ಮುಚ್ಚಬೇಕು. ಶಾಸಿŒ ಸರ್ಕಲ್ ಫ್ಲೈಓವರ್ ಕಾಮಗಾರಿ ಬೇಗನೇ ಮುಗಿಸಬೇಕು ಮೊದಲಾದ ಬೇಡಿಕೆಗಳನ್ನು ಮಂಡಿಸಲಾಯಿತು.
Related Articles
Advertisement