Advertisement

ಸಕಾಲಕ್ಕೆ ಸಿಗದ ಕುಂದಾಣ ಗ್ರಾಪಂ ಪಿಡಿಒ

12:05 PM Jul 11, 2023 | Team Udayavani |

ದೇವನಹಳ್ಳಿ: ತಾಲೂಕಿನ ಕುಂದಾಣ ಗ್ರಾಪಂಯಲ್ಲಿ ಜನ ಸಾಮಾನ್ಯರ ಕೆಲಸಗಳಿಗೆ ಪಿಡಿಒ ಸಕಾಲದಲ್ಲಿ ಸಿಗುತ್ತಿಲ್ಲವೆಂಬ ಆರೋಪದಿಂದಾಗಿ ಗ್ರಾಮ ಪಂಚಾಯಿತಿ ಸದಸ್ಯರು ಗ್ರಾಪಂ ಮುಂಭಾಗದಲ್ಲಿ ಪಿಡಿಒ ಶಶಿಧರ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Advertisement

ಕುಂದಾಣ ಗ್ರಾಪಂ ಸದಸ್ಯ ಕ್ಯಾತೇಗೌಡ ಮಾತ ನಾಡಿ, ಗ್ರಾಪಂನಲ್ಲಿ ಯಾವುದೇ ಕೆಲಸ ಕಾರ್ಯಗಳು ಸರಿಯಾದ ಸಮಯಕ್ಕೆ ಆಗುತ್ತಿಲ್ಲ. ಖಾತೆ ಸೇರಿದಂತೆ ಇತರೆ ಕೆಲಸಗಳಿಗಾಗಿ ಸಾರ್ವಜನಿಕರು ಕಚೇರಿಗೆ ಬಂದು ಪಿಡಿಒ ಇಲ್ಲವೆಂದು ಬೇಜಾರ್‌ ಆಗಿ ವಾಪಾಸ್‌ ಆಗುತ್ತಿದ್ದಾರೆ. ಇಲ್ಲಿ ಯಾರೂ ಕೇಳುವವರಿಲ್ಲ, ಹೇಳು ವವರಿಲ್ಲದಂತೆ ಆಗಿದೆ. ಅವರಿಗೆ ಇಷ್ಟಬಂದ ಸಮಯಕ್ಕೆ ಬಂದು ಹೋಗುತ್ತಾರೆ. ಪಿಡಿಒ ಬದ ಲಾವಣೆಗೆ ಸದಸ್ಯರೆಲ್ಲರೂ ಸೇರಿ ಚರ್ಚಿಸಿ ತೀರ್ಮಾನ ತೆಗೆದು ಕೊಳ್ಳುತ್ತೇವೆ. ವರ್ಗಾ ವಣೆಗಾಗಿ ಓಡಾಡುತ್ತಿದ್ದಾರೆಂದು ಕೇಳಿ ಬರುತ್ತಿದೆ. ಹಾಗಾಗೀ ಗ್ರಾಪಂ ಕೆಲಸಗಳ ಮೇಲೆ ನಿರುತ್ಸಾಹ ತೋರುತ್ತಿ¨ªಾರೆ. ಗ್ರಾಮಗಳಲ್ಲಿ ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆಯಾಗುತ್ತಿದೆ ಎಂದು ಪಿಡಿಒ ಶಶಿಧರ್‌ ಕಾರ್ಯವೈಖರಿ ವಿರುದ್ಧ ಕಿಡಿಕಾರಿದರು.

ಪಿಡಿಒ ನಮಗೆ ಬೇಕಿಲ್ಲ : ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಸುಮಾರು 1 ಸಾವಿರಕ್ಕೂ ಹೆಚ್ಚು ಖಾತೆ ಗಳನ್ನು ಪಿಡಿಒ ಮಾಡಿದ್ದಾರೆ. ಕೆಲವು ಖಾತೆಗಳನ್ನು ಮಾಡದಂತೆ ಸದಸ್ಯರು ಹೇಳಿದ್ದರೂ ಸಹ ಯಾವುದೇ ಸ್ಪಂದನೆ ನೀಡದೆ, ತಮಗೆ ಇಷ್ಟ ಬಂದ ರೀತಿಯಲ್ಲಿ ಖಾತೆಗಳನ್ನು ಮಾಡಿ ಕೊಟ್ಟಿದ್ದಾರೆ. ಜನರ ಸಮಸ್ಯೆಗಳಿಗೆ ಸ್ಪಂದಿ ಸುವ ಕೆಲಸ ಮಾಡುತ್ತಿಲ್ಲ. ಸುಮಾರು 2 ತಿಂಗಳಿ ನಿಂದ ವಾಟರ್‌ ಮ್ಯಾನ್‌ಗಳಿಗೆ ಸಂಬಳ ನೀಡಿಲ್ಲ. ಬೆಳಗ್ಗೆ ಕಚೇರಿಗೆ ತಡವಾಗಿ ಬರುತ್ತಾರೆ. ಇಂತಹ ಪಿಡಿಒ ನಮಗೆ ಬೇಕಿಲ್ಲ. ಮೇಲಾಧಿಕಾರಿಗಳು ಉತ್ತಮ ಪಿಡಿಒ ಅನ್ನು ನಮ್ಮ ಪಂಚಾಯಿತಿಗೆ ನೇಮಿಸಿ ಎಂದು ಉಳಿದ ಸದಸ್ಯರು ತಮ್ಮ ಆಕ್ರೋಶವನ್ನು ಹೊರ ಹಾಕಿದರು.

ಸೂಲಕುಂಟೆ ಗ್ರಾಮದ ರಾಮಕೃಷ್ಣಪ್ಪ ಮಾತನಾಡಿ, ಸೂಲಕುಂಟೆ ಗ್ರಾಮದಲ್ಲಿ ವೀರಗಾರ ದೇವಸ್ಥಾನವಿದೆ. ಆ ಜಾಗ ಬೇರೆಯವರಿಗೆ ಖಾತೆಯಾಗಿದೆ. ಆ ಖಾತೆ ಯನ್ನು ವಜಾಗೊಳಿಸಿ, ದೇವಾಲಯಕ್ಕೆ ಮೀಸಲಿಟ್ಟು ಖಾತೆ ಮಾಡಬೇಕು ಎಂದು ಹೇಳುತ್ತಿದ್ದೇವೆ. ಪಿಡಿಒ ಸಕಾಲಕ್ಕೆ ಸಿಗುತ್ತಿಲ್ಲ. ಪಂಚಾಯಿತಿಯಿಂದ ದೇವಾಲಯವೆಂದು ದಾಖಲಾಗಬೇಕು. ಒಂದು ವರ್ಷದ ಹಿಂದೆ ಈ-ಖಾತೆಗೆ ತಕಾರರು ಅರ್ಜಿ ಹಾಕಿ ದ್ದೇನೆ. ಇದುವರೆಗೆ ಆಗಿಲ್ಲ. ಇಬ್ಬರು ಸದಸ್ಯರಿಗೆ ಹೇಳಿದ್ದೇನೆ. ಪಿಡಿಒ ಇಲ್ಲವೆಂದು ಏನು ಕ್ರಮಗಳು ನಡೆಯುತ್ತಿಲ್ಲ ಎಂದು ಆರೋಪಿಸಿದರು. ‌

ಈ ವೇಳೆ ಗ್ರಾಪಂ ಅಧ್ಯಕ್ಷ ವಿ.ನಾರಾಯಣಸ್ವಾಮಿ, ಸದಸ್ಯರಾದ ಪ್ರವೀಣ್, ಸೂಲಕುಂಟೆ ಕೊಂಡ ಮುನಿಯಪ್ಪ, ಕೆ.ವಿ.ಸ್ವಾಮಿ, ಸೂಲಕುಂಟೆ ಗ್ರಾಮಸ್ಥ ನವೀನ್‌ಕುಮಾರ್‌, ಸದಸ್ಯರು, ಸಾರ್ವಜನಿಕರು ಇದ್ದರು.

Advertisement

ಬಿಲ್‌ ಕಲೆಕ್ಟರ್‌ಗೆ ತರಾಟೆ: ಚಲನ-ವಲನ ಪುಸ್ತಕದಲ್ಲಿ ಪಿಡಿಒ ಕಾರ್ಯ ವೈಖರಿಯನ್ನು ಗ್ರಾಪಂ ಸದಸ್ಯರು ಗಮನಿಸಿದರು. ಖಾತೆ ವಿಚಾರವಾಗಿ ಸದಸ್ಯರ ಗಮನಕ್ಕೆ ಬರದೆ, ಯಾವ ರೀತಿ ಖಾತೆ ಮಾಡಿದ್ದೀರ ಎಂದು ಪ್ರಶ್ನಿಸಿ, ಮಹಜರ್‌, ಅಳತೆ ಮಾಡದೆ ಖಾತೆ ಮಾಡದೆ ಹೇಗೆ ಮಾಡಿದ್ದೀರ ಎಂದು ಗ್ರಾಪಂ ಬಿಲ್‌ ಕಲೆಕ್ಟರ್‌ ಶಾಂತಕುಮಾರ್‌ ಅವರಿಗೆ ಸದಸ್ಯರು ತರಾಟೆಗೆ ತೆಗೆದುಕೊಂಡರು.

ಕುಂದಾಣ ಗ್ರಾಮ ಪಂಚಾಯಿತಿ ಯಲ್ಲಿ ಸರಿಯಾದ ಸಮಯಕ್ಕೆ ಹೋಗಿ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡಲಾಗುತ್ತಿದೆ. ಸಾರ್ವಜನಿಕರ ಸಮಸ್ಯೆ ಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದೇನೆ. ಯಾವುದೇ ಅಕ್ರಮ ಖಾತೆಗಳು ಆಗಿಲ್ಲ. ಕುಂದಾಣ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಜನರ ಸಮಸ್ಯೆಗಳು ಮತ್ತು ಅವುಗಳಿಗೆ ಪರಿಹಾರ ಒದಗಿಸಲಾಗುತ್ತಿದೆ. ●ಶಶಿಧರ್‌, ಪಿಡಿಒ, ಕುಂದಾಣ

Advertisement

Udayavani is now on Telegram. Click here to join our channel and stay updated with the latest news.

Next