Advertisement
ಕನ್ನಡ, ತುಳು ಭಾಷೆಯಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಯಕ್ಷಗಾನ ಇಂಗ್ಲಿಷ್, ಹಿಂದಿ, ಕೊಂಕಣಿ, ಹವ್ಯಕ, ಸಂಸ್ಕೃತ ಭಾಷೆಗಳಲ್ಲಿಯೂ ಆಗಾಗ ಪ್ರದರ್ಶನಗೊಂಡಿದೆ. ಇದೀಗ ಆ ಸರದಿ ಕುಂದಗನ್ನಡಕ್ಕೆ. ಇಲ್ಲಿಯ ತನಕ ಕೆಲವೊಂದು ಪ್ರಸಂಗಗಳಲ್ಲಿ ಹಾಸ್ಯ ದೃಶ್ಯಕ್ಕೆ ಸೀಮಿತವಾಗಿದ್ದ ಕುಂದಗನ್ನಡ ಇಡೀ ಪ್ರಸಂಗವನ್ನೇ ಆಕ್ರಮಿಸಿಕೊಳ್ಳುವ ಮೂಲಕ ಕುಂದಗನ್ನಡದ ಪ್ರಬುದ್ಧತೆ ಎತ್ತಿ ಹಿಡಿದಿದೆ.
Related Articles
Advertisement
ಪ್ರಾರಂಭದಲ್ಲಿ ಭಾಗವತ ಲಂಭೋದರ ಹೆಗಡೆ ಅವರು ಕಾಂಬ್ರಲೆ ಶ್ರೀ-ಹರಿ ಬಂದ| ತ| ನ್ನಂಬ್ದರ ಕಾಯುವೆನೆಂದ || ಚಂದಗ್ವಾಂಪಿಯು ಕಿಟ್ಟ| ಪದ್ಯದೊಂದಿಗೆ ಹೊಸ ಸಂಚಲನ ಮೂಡಿಸಿದರು. ರುಕ್ಮಿಣಿ-ಸುಭದ್ರೆಯರ ಮಾತಿನ ಚಕಮಕಿಯ ಪದ್ಯಗಳಿಗೆ ಹೊಸ ಜೋಶ್ ನೀಡಿದರು. ಪ್ರಸಾದ್ ಕುಮಾರ್ ಅವರ ಕಂಠಸಿರಿಯಲ್ಲಿ ಪುಣ್ಯಾಸ್ತ್ರಿ ಬಾರೆ ಜಾಣೆ|ಮನ್ಸಂಗ್ ಇಪ್ª| ನಿನ್ನಲ್ಲಿ ಹೇಳ್ತೆ ಕೇಣೆ||, ದ್ವಂದ್ವ ಸಂಕಟಕ್ಕೆ ಸಿಲುಕಿದೆ ಎನ್ನುವುದನ್ನು ಪಾರ್ಥ ಸತಿ-ಸುತನಲ್ಲಿ ಅರುಹುದನ್ನು ಹೇಳ್ ಅಪ್ಪ ಅಬ್ಬಿಗೆ ಹೊಡಿತಾ| ಹೇಳ್ದಿರೆ ಅಪ್ಪ ನಾಯಿತಿಂತಾ…ಪದ್ಯ ಭಾರಿ ಕರತಾಡನ ಪಡೆದುಕೊಂಡಿತು. ಹಿರಿಯ ಭಾಗವತ ಕೆ.ಪಿ ಹೆಗಡೆಯವರು ಆಟಕ್ಕೊಂದು ಹೊಸ ಹುರುಪು ನೀಡಿದರು. ಗಿರಿಗಿಂಟಿ ಗೋಪಾಲ ಭಾವಯ್ಯ| ಹಾಗೂ ಕೃಷ್ಣ ಅರ್ಜುನನಿಗೆ ಹೇಳುವ ಬಿಲ್ಗಾರ ನಾನೆಂಬ ಹಂಸಾಣಿ ನಿನಗುಂಟು| ಅದ್ಭುತವಾಗಿ ಮೂಡಿ ಬಂತು. ಮದ್ದಳೆಯಲ್ಲಿ ಎನ್.ಜಿ.ಹೆಗಡೆ, ದೇವದಾಸ್ ರಾವ್ ಕೂಡ್ಲಿ, ಚಂಡೆಯಲ್ಲಿ ಕೃಷ್ಣಾನಂದ ಶೆಣೈ, ಲೋಹಿತ್, ಭರತ್ ಚಂದನ್ ಸಾಥ್ ಉತ್ತಮವಾಗಿತ್ತು.ಆಖ್ಯಾನದಲ್ಲಿರುವ 40 ಪದ್ಯಗಳು ತೀರ ಅಪರೂಪವಾದ ಪದಗಳನ್ನು, ಪದ್ಯಗಳಾಗಿ ಯಕ್ಷ ಛಂದಸ್ಸಿನೊಳಗೆ ಹದವಾಗಿ ಕೆತ್ತಿಡುವಲ್ಲಿ ಕವಿ ಇಲ್ಲಿ ಶಿಲ್ಪಿ ಎಂದೆನಿಸಿಕೊಂಡಿದ್ದಾರೆ. ಶಶಿಕಾಂತ ಶೆಟ್ಟರು ಕೃಷ್ಣನಾಗಿ ಅದ್ಬುತ ಅಭಿನಯ ನೀಡಿದರು. ಅರ್ಜುನನಾಗಿ ಕಾಣಿಸಿಕೊಂಡವರು ಉಪ್ಪುಂದ ನಾಗೇಂದ್ರ ರಾವ್. ಸುಭದ್ರೆಯಾಗಿ ಹೆನ್ನಾಬೈಲ್ ಸಂಜೀವ ಶೆಟ್ಟಿ, ರುಕ್ಮಿಣಿಯಾಗಿ ಉಪ್ಪುಂದ ಗಣೇಶ ಭಾವನೆಗಳನ್ನು ಅಚ್ಚುಕಟ್ಟಾಗಿ ತೆರೆದಿಟ್ಟರು. ಅಭಿಮನ್ಯು ಹರೀಶ ಮೊಗವೀರ ಜಪ್ತಿ ತಾಯಿಯೊಂದಿಗಿನ ಬಾಲತನ, ತಂದೆ ಜೊತೆ ಸಂವಾದ ಎಲ್ಲವೂ ಉತ್ತಮ. ಭೀಮನಾಗಿ ಶ್ರೀಧರ ಭಂಡಾರಿ ಭದ್ರಾಪುರ ಭೇಷ್ ಎನಿಸಿಕೊಂಡರೆ, ದಾರುಕನಾಗಿ ಶಿವಾನಂದ ಕೋಟ ನಗೆಯ ಹೊನಲನ್ನು ಹರಿಸಿದರು.
ನಾಗರಾಜ್ ಬಳಗೇರಿ