Advertisement
ಚಿಂಚೋಳಿ: ಕುಂಚಾವರಂ ಅರಣ್ಯ ಪ್ರದೇಶ ಕಣ್ಮನ ಸೆಳೆಯುವಂತಿದ್ದು ಪ್ರವಾಸಿ ತಾಣವೆಂದು ಸರ್ಕಾರ ಘೋಷಿಸಬೇಕಿದೆ. ಗೋಪುನಾಯಕ-ಸಂಗಾಪುರ ತಾಂಡಾದ ಹತ್ತಿರ ಬೆಟ್ಟಗುಡ್ಡಗಳಿಂದ ಹರಿದು ಬರುವ ಎತ್ತಪೋತಾ ಜಲಧಾರೆ ನೋಡಲು ಆಂಧ್ರಪ್ರದೇಶ, ತೆಲಂಗಾಣ ರಾಜ್ಯದ ಅನೇಕ ನಗರ ಪ್ರದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ.
Related Articles
Advertisement
ಶಿವರಾಮಪುರ-ಶಹಾಪುರ ರಾಜ್ಯ ಹೆದ್ದಾರಿಯಲ್ಲಿ ಬರುವ ಕುಂಚಾವರಂ ಅರಣ್ಯ ಪ್ರದೇಶವನ್ನು 2011ರಲ್ಲಿ ರಾಜ್ಯ ಸರ್ಕಾರ ವನ್ಯಜೀವಿಧಾಮ ಪ್ರದೇಶವೆಂದು ಘೋಷಣೆ ಮಾಡಿದೆ. ಇದಾದ ನಂತರ ಕಾಡಿನಲ್ಲಿ ವಿವಿಧ ಜಾತಿಯ ಮರಗಳು, ಔಷ ಧೀಯ ಸಸ್ಯಗಳು, ವಿವಿಧ ಜಾತಿಯ ಹಕ್ಕಿಗಳು, ಕಾಡು ಪ್ರಾಣಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿವೆ.
ಸೇರಿಭಿಕನಳ್ಳಿ, ಶಾದೀಪುರ, ಮಂಡಿ ಬಸವಣ್ಣ, ಸಂಗಾಪುರ, ಗೊಟ್ಟಂಗೊಟ್ಟ,ಬೊಮ್ಮಾಪುರ, ಕುಂಚಾ ವರಂ- ಜಹೀರಾಬಾದ ರಸ್ತೆ, ಬಡಾತಾಂಡಾ, ವಂಟಿ ಚಿಂತಾ ತಾಂಡಾ ಪ್ರದೇಶ ಮತ್ತು ಬಡೆಸಾಬ್ ದರ್ಗಾ ಅರಣ್ಯಪ್ರದೇಶ ಪ್ರವಾಸಿಗರನ್ನು ಆಕರ್ಷಿಸುವ ಪ್ರಮುಖ ಪ್ರವಾಸಿ ತಾಣಗಳಾಗಿವೆ. ಮಳೆಗಾಲ-ಚಳಿಗಾಲದಲ್ಲಿ ಕುಂಚಾವರಂ ಅರಣ್ಯ ಪ್ರದೇಶ ಹಸಿರಿನಿಂದ ಕಂಗೊಳಿಸುತ್ತದೆ.
ಸಣ್ಣ ಪುಟ್ಟ ಜಲಪಾತಗಳು, ಬಾನೆತ್ತರಕ್ಕೆ ಬೆಳೆದಿರುವ ವಿವಿಧ ಜಾತಿಯ ಗಿಡಮರಗಳು, ಚಿಟ್ಟೆಗಳು, ವಿವಿಧ ಹೂವು ಬಳ್ಳಿಗಳು, ಹಕ್ಕಿಗಳ ಕಲರವ, ಕಾಡು ಪ್ರಾಣಿಗಳ ಕೂಗಾಟ ನೋಡುವ ಪ್ರದೇಶವೆಂದರೆ ಕುಂಚಾವರಂ ಅರಣ್ಯ ಪ್ರದೇಶ. ಆದ್ದರಿಂದ ಸರ್ಕಾರ ಈ ಪ್ರದೇಶವನ್ನು ಪ್ರವಾಸಿ ತಾಣವೆಂದು ಘೋಷಿಸಬೇಕು. ಬಂಡಿಪುರ, ಅಭಯಾರಣ್ಯ ದೊಡ್ಡವಾದ ಕಾಡು ಪ್ರದೇಶ ಇಲ್ಲಿದ್ದು,ಇದರ ರಕ್ಷಣೆ ನಮ್ಮೆಲ್ಲರದ್ದಾಗಿದೆ.