Advertisement

Kumta ಕೊನೆಗೂ ಬೋನಿಗೆ ಬಿದ್ದ ಚಿರತೆ; ನಿಟ್ಟುಸಿರು ಬಿಟ್ಟ ಗ್ರಾಮಸ್ಥರು!

06:56 PM Mar 23, 2024 | Team Udayavani |

ಕುಮಟಾ: ತಾಲೂಕಿನ ಚಿತ್ರಗಿಯ ಸುತ್ತಮುತ್ತ ಕಳೆದ ಕೆಲ ತಿಂಗಳುಗಳಿಂದ ಕಾಣಿಸಿಕೊಳ್ಳುತ್ತಿದ್ದ ಚಿರತೆಯನ್ನು ಸತತ ಪ್ರಯತ್ನದಿಂದ ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.

Advertisement

ಕಳೆದ ಕೆಲ ದಿನಗಳಿಂದ ಚಿರತೆಯು ಚಿತ್ರಗಿ, ಹಳಕಾರ ಸುತ್ತಮುತ್ತಲಿನ ಜನವಸತಿ ಪ್ರದೇಶಗಳಲ್ಲಿ ಕಾಣಿಸಿಕೊಂಡು ಸಾರ್ವಜನಿಕರಿಗೆ ಆತಂಕವನ್ನು ಉಂಟುಮಾಡಿತ್ತು.ಇದರಿಂದಾಗಿ ಈ ಭಾಗದಲ್ಲಿ ಜನ ಓಡಾಡಲು ಭಯಪಡುವಂತಾಗಿತ್ತು.

ತಾಲೂಕಿನ ಹೊಲನಗದ್ದೆಯಲ್ಲಿ ಚಿರತೆಯೊಂದು ಮನೆಯಲ್ಲಿದ್ದ ಎರಡು ನಾಯಿಯನ್ನು ಹೊತ್ತೊಯ್ದ ಘಟನೆಯ ಬಳಿಕ ಇಲ್ಲಿನ ಸುತ್ತಮುತ್ತಲಿನ ಜನ ಇನ್ನಷ್ಟು ಭಯಭೀತರಾಗಿದ್ದರು.ಹೀಗಾಗಿ ಚಿರತೆಯನ್ನು ಹಿಡಿಯಬೇಕೆಂದು ಪಟ್ಟು ಹಿಡಿದಿದ್ದ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಇದೊಂದು ಸವಾಲಾಗಿತ್ತು.ಶನಿವಾರ ಚಿತ್ರಗಿಯ ಅರಣ್ಯ ಸಮೀಪದಲ್ಲಿ ಬೋನಿನೊಳಗೆ ನಾಯಿಯನ್ನು ಕೂಡಿಹಾಕಿ ಇನ್ನೊಂದೆಡೆಯಿಂದ ಬಾಗಿಲು ಬಂದ್ ಮಾಡಲಾಗಿತ್ತು.ಇನ್ನೊಂದೆಡೆ ಬಾಗಿಲು ತೆಗೆದಿದ್ದು, ಈ ವೇಳೆ ನಾಯಿ ಹಿಡಿಯಲು ಪಂಜರದೊಳಗೆ ಬರುತ್ತಿದ್ದಂತೆ ಚಿರತೆಯು ಸೆರೆಯಾಗಿದೆ.

ಸ್ಥಳಕ್ಕೆ ಭೇಟಿ ನೀಡಿದ ಶಾಸಕ‌ ದಿನಕರ ಶೆಟ್ಟಿ ಮಾತನಾಡಿ, ಕೆಲವು ತಿಂಗಳುಗಳ ಹಿಂದೆ ಹೆಗಡೆಯಲ್ಲಿ ಒಂದು ಚಿರತೆಯನ್ನು ಅಧಿಕಾರಿಗಳು ಸೆರೆಹಿಡಿದು ಅರಣ್ಯಪ್ರದೇಶಕ್ಕೆ ರವಾನಿಸಿದ್ದರು.ಈಗ ಮತ್ತೊಮ್ಮೆ ಚಿತ್ರಗಿಯಲ್ಲಿ ಚಿರತೆಯನ್ನು ಸೆರೆ ಹಿಡಿದು ಜನರ ಭಯವನ್ನು ಹೋಗಲಾಡಿಸಿದ್ದಾರೆ.ನಿಜಕ್ಕೂ ಅರಣ್ಯ ಇಲಾಖೆಯ ಸಿಬ್ಬಂದಿಗಳ ಕಾರ್ಯ ಪ್ರಶಂಸನೀಯವಾದುದು ಎಂದು ಹೇಳಿದರು.

ಡಿ.ಎಫ್.ಓ. ಯೋಗೇಶ್ ಹಾಗೂ ಎ.ಸಿ.ಎಫ್. ಲೋಹಿತ್ ಅವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಎಸ್. ಟಿ. ಪಟಗಾರ, ಉಪವಲಯ ಅರಣ್ಯಾಧಿಕಾರಿಗಳಾದ ರಾಘವೇಂದ್ರ ನಾಯ್ಕ್, ರಾಘವೇಂದ್ರ ನಾಯ್ಕ್ ಹಾಗೂ ಹೂವಣ್ಣ ಗೌಡ, ಪ್ರಮುಖರಾದ ರಾಘವೇಂದ್ರ ನಾಯಕ, ಜಯಾ ಶೇಟ್, ಜಾಯ್ಸನ್ ಡಿಸೋಜ, ರಾಮದಾಸ ಭಂಡಾರಿ ಸೇರಿದಂತೆ ಮತ್ತಿತರರು ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next