Advertisement

ಕುಮಟಾದಲ್ಲಿ ಗೋಕಳ್ಳರ ಅಟ್ಟಹಾಸ : ರಸ್ತೆ ಬದಿ ಮಲಗಿದ್ದ ಹಸುವನ್ನೇ ಹೊತ್ತೊಯ್ದರು..

04:27 PM May 14, 2022 | Team Udayavani |

ಕುಮಟಾ: ಪಟ್ಟಣದ ರಥಬೀದಿಯಲ್ಲಿರುವ ವೆಂಕಟರಮಣ ದೇವಾಲಯದ ಎದುರು ರಾತ್ರಿ ವೇಳೆ ರಸ್ತೆಯಲ್ಲಿ ಮಲಗಿರುವ ಹಸುಗಳನ್ನು ಕದ್ದೊಯ್ದ ಘಟನೆ ನಡೆದಿದ್ದು, ಶನಿವಾರದಂದು ತಡವಾಗಿ ಬೆಳಕಿಗೆ ಬಂದಿದೆ.

Advertisement

ಎಪ್ರಿಲ್ 24 ರ ರಾತ್ರಿ 1 ಘಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಮಾರುತಿ ಸ್ವಿಫ್ಟ್  ಕಾರಿನಲ್ಲಿ ಬಂದ ಗೋಕಳ್ಳರು ದೇವಸ್ಥಾನದ ಬಳಿ ಮಲಗಿದ್ದ ಹಸುವನ್ನು ಎಳೆದೊಯ್ದು ಕಾರಿಗೆ ತುಂಬಿಸಿದ್ದಾರೆ. ನಂತರ ಅಲ್ಲಿಂದ ಕುಮಟಾ ಮಾರ್ಗವಾಗಿ ಹೊರಟಿದ್ದಾರೆ.

ಈ ಎಲ್ಲಾ ಘಟನೆಗಳು ದೇವಾಲಯಕ್ಕೆ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಕುಮಟಾ ಪೋಲಿಸರು ಗೋಕಳ್ಳರಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಮುಸ್ಲಿಂ ಹುಡುಗಿಯನ್ನು ವೇದಿಕೆಗೆ ಕರೆದಿದ್ದೇಕೆ? : ಕೇರಳದಲ್ಲಿ ಹೊಸ ವಿವಾದ ; ಭಾರಿ ಚರ್ಚೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next