Advertisement

ಕುಂಪಲ: ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಸಾವು

10:11 AM Feb 19, 2023 | Team Udayavani |

ಉಳ್ಳಾಲ:  ಕೀಟನಾಶಕ ಸೇವಿಸಿ ಫೆ.14 ರಂದು ಆತ್ಮಹತ್ಯೆಗೆ ಯತ್ನಿಸಿದ್ದ ಪಿಯುಸಿ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೆ ಫೆ. 19 ರಂದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.

Advertisement

ಕುಂಪಲ ಆಶ್ರಯ ಕಾಲನಿಯಲ್ಲಿ ವಾಸವಿರುವ ತಮಿಳುನಾಡು ಮೂಲದ ಸೋಮನಾಥ ಮತ್ತು ಭವ್ಯ ದಂಪತಿಯ ಹಿರಿಯ ಪುತ್ರಿ ಧನ್ಯ (17) ಮೃತ ವಿದ್ಯಾರ್ಥಿನಿ.

ಧನ್ಯ ನಗರದ ರಾಮಕೃಷ್ಣ ಕಾಲೇಜಿನಲ್ಲಿ ದ್ವಿತೀಯ ಪಿ.ಯು ವಿದ್ಯಾರ್ಥಿನಿಯಾಗಿದ್ದಳು.

ಘಟನೆಯ ವಿವರ: ಫೆ.14 ರಂದು ಮಧ್ಯಾಹ್ನ ಧನ್ಯ ತಾಯಿ ಭವ್ಯ ಮನೆಗೆ ತೆರಳಿದಾಗ ರಜೆಯಲ್ಲಿದ್ದ ಮಗಳು ಮನೆಯಲ್ಲಿರಲಿಲ್ಲ. ಮಧ್ಯಾಹ್ನ 3 ಗಂಟೆಗೆ ಧನ್ಯ ಮನೆಗೆ ಮರಳಿದ್ದು, ಈ ವೇಳೆ ತಾಯಿ ಮಗಳಲ್ಲಿ ಎಲ್ಲಿಗೆ ಹೋಗಿದ್ದೆ ಎಂದು ಪ್ರಶ್ನಿಸಿದ್ದು, ಆಕೆ ಗೆಳತಿ ಮ‌ನೆಗೆ ಓದಲು ತೆರಳಿದ್ದೆ ಎಂದು ಹೇಳಿದ್ದಾಳೆ. ಗೆಳತಿ ಮನೆಗೆ ಹೋಗುವಾಗ ಫೋನ್ ಕರೆ ಏಕೆ ಮಾಡಿಲ್ಲ ಎಂದು ತಾಯಿ ಗದರಿ ಎರಡೇಟು ಹೊಡೆದಿದ್ದರಂತೆ.

ಬಳಿಕ ತಾಯಿ ಸಮೀಪದ ಮನೆಗೆ ಕೆಲಸಕ್ಕೆ ತೆರಳಿದ್ದರು.ಈ ವೇಳೆ ಧನ್ಯ ಮನೆಯೊಳಗಿದ್ದ ಗೆದ್ದಲು ಹೊಡೆಯುವ ಕೀಟ ನಾಶಕ ಸೇವಿಸಿ ತೀರಾ ಅಸ್ವಸ್ಥಳಾಗಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗಿನ ಜಾವ ಸಾವನ್ನಪ್ಪಿದ್ದಾಳೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next