Advertisement

ಅಡ್ಕ: ಮಾರಕಾಯುಧದಿಂದ ದಾಳಿ: ಗುಂಡು ಹಾರಾಟ; ಕಾರುಗಳಿಗೆ ಹಾನಿ

12:47 AM Nov 01, 2020 | sudhir |

ಕುಂಬಳೆ: ಜಿಲ್ಲೆಯಲ್ಲಿ ಸಕ್ರಿಯವಾಗಿರುವ ಅಮಲು ಪದಾರ್ಥ ದಂಧೆಯ ಕುರಿತು ನಾರ್ಕೊಟಿಕ್‌ ಸೆಲ್‌ ಅಧಿಕಾರಿಗಳು ತನಿಖೆ ಆರಂಭಿಸಿರುವಂತೆ ಬಂದ್ಯೋಡು ಅಡ್ಕದಲ್ಲಿ ಶನಿವಾರ ಬೆಳಗ್ಗೆ ಮಾದಕ ತಂಡದ ಆಕ್ರಮಣ ನಡೆದಿದೆ.
ಕೊಲೆ ಪ್ರಕರಣದ ಆರೋಪಿ ಶಮೀರ್‌ನ ತಂದೆ ಬಂದ್ಯೋಡು ಅಡ್ಕ ಬೈದಲದ ಶೇಖಾಲಿ ಮತ್ತು ಪತ್ನಿ ಸಂಚರಿಸುತ್ತಿದ್ದ ಕಾರಿಗೆ ವೇಗದಲ್ಲಿ ಬಂದ ಇನ್ನೊಂದು ಕಾರು ಢಿಕ್ಕಿ ಹೊಡೆದಿದೆ. ಢಿಕ್ಕಿ ಹೊಡೆದ ಪರಿಣಾಮ ಶೇಖಾಲಿ ಪ್ರಯಾಣಿಸುತ್ತಿದ್ದ ಕಾರಿಗೆ ಹಾನಿಯಾಗಿದೆ. ಆದರೂ ಅದನ್ನು ಲೆಕ್ಕಿಸದೆ ಶೇಖಾಲಿ ಕಾರನ್ನು ಮನೆಯಂಗಳಕ್ಕೆ ಕೊಂಡೊಯ್ದಿದ್ದರು. ಮನೆಯಂಗಳದಲ್ಲಿ ನಿಲ್ಲಿಸಿದ ಕಾರಿನ ಮೇಲೆ ಗುಂಡು ಹಾರಾಟ ನಡೆಸಲಾಗಿದ್ದು, ತಲವಾರು ಸಹಿತ ಮಾರಕಾಯುಧಗಳನ್ನು ಬಳಸಿ ಕಾರನ್ನು ಹಾನಿಗೊಳಿಸಲಾಗಿದೆ. ಕೆಲವು ಹೊತ್ತು ಆತಂಕ ಸೃಷ್ಟಿಸಿದ ತಂಡವು ಬಂದ ಕಾರಿನಲ್ಲಿ ಮರಳಿದೆ.

Advertisement

ಕೇಸು ದಾಖಲು
ಘಟನೆಗೆ ಸಂಬಂಧಿಸಿ ತಳಂಗರೆಯ ಜಾಕಿ, ಬಂಬ್ರಾಣದ ಉಸ್ಮಾನ್‌, ತಳಂಗರೆಯ ಅಬಿ, ಕುಬಣೂರಿನ ಶಬಿ, ಕೋಬ್ರಾ ವಿರುದ್ಧ ಆಮ್ಸ್‌ ಆ್ಯಕ್ಟ್ ಪ್ರಕಾರ ಕೇಸು ದಾಖಲಿಸಲಾಗಿದೆ.

ಇದನ್ನೂ ಓದಿ:ಸುರೇಂದ್ರ ಬಂಟ್ವಾಳ್‌ ಹತ್ಯೆ ಪ್ರಕರಣ: ಒಟ್ಟು 9 ಆರೋಪಿಗಳ ಬಂಧನ

ಶೇಖಾಲಿಯವರ ಮನೆಗೆ ಆಕ್ರಮಣ ನಡೆದ ಬೆನ್ನಲ್ಲೇ ಬಂದ್ಯೋಡು ಅಡ್ಕದಲ್ಲಿ ಕಾರೊಂದಕ್ಕೆ ಟಿಪ್ಪರ್‌ ಲಾರಿ ಢಿಕ್ಕಿ ಹೊಡೆದಿದೆ. ಟಿಪ್ಪರ್‌ ಲಾರಿಯಿಂದ ಇಳಿದ ತಂಡ ಕಾರಿಗೆ ಗುಂಡು ಹಾರಿಸಿದ್ದು, ಮಾರಕಾಯುಧಗಳನ್ನು ಬಳಸಿ ಕಾರಿಗೆ ಹಾನಿಗೈದಿದೆ. ಬಳಿಕ ಕಾರಿನಲ್ಲಿದ್ದ ನಾಲ್ಕು ಮಂದಿ ಪರಾರಿಯಾಗಿದ್ದಾರೆ. ಕಾಸರಗೋಡು ಡಿವೈಎಸ್‌ಪಿ ಬಾಲಕೃಷ್ಣನ್‌ ನಾಯರ್‌ ನೇತೃತ್ವದ ಪೊಲೀಸ್‌ ತಂಡ ತನಿಖೆ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next