Advertisement

Kumble: ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ

07:47 PM Nov 26, 2024 | Team Udayavani |

ಕುಂಬಳೆ: ತಂದೆ ಮತ್ತು ತಾಯಿಯನ್ನು ಮನೆಯ ಕೊಠಡಿಯಲ್ಲಿ ಕೂಡಿ ಹಾಕಿದ ಬಳಿಕ 19ರ ಹರೆಯದ ಪುತ್ರಿ ತಂದೆಯ ಕಾರು ಸಹಿತ ಪರಾರಿಯಾದ ಘಟನೆ ನಡೆದಿದೆ. ಈ ಬಗ್ಗೆ ಲಭಿಸಿದ ದೂರಿನಂತೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಂತೆ ಬಂದ್ಯೋಡು ಮೀಪಿರಿಯಲ್ಲಿ ಕಾರು ಪತ್ತೆಯಾಗಿದೆ.

Advertisement

ಯುವತಿ ಪ್ರಿಯತಮನೊಂದಿಗೆ ಪರಾರಿಯಾಗಿರುವುದಾಗಿ ಸೂಚನೆಯಿದೆ. ಘಟನೆಗೆ ಸಂಬಂಧಿಸಿ ತಂದೆ ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ನ. 25ರಂದು ಸಂಜೆ ಕಯ್ನಾರು ಶಾಂತಿಯೋಡು ನಿವಾಸಿ ಯುವತಿ ಕಾರಿನೊಂದಿಗೆ ಪರಾರಿಯಾಗಿದ್ದಾಳೆ. ಈಕೆಗೆ ಈ ಹಿಂದೆ ಓರ್ವ ಯುವಕನೊಂದಿಗೆ ಪ್ರೇಮವಿತ್ತೆನ್ನಲಾಗಿದೆ. ಈ ಮಧ್ಯೆ ಈಕೆಯನ್ನು ಬೇರೊಬ್ಬ ಯುವಕನೊಂದಿಗೆ ವಿವಾಹ ಮಾಡಿಸಲಾಗಿತ್ತು. ಆದರೆ ವಿವಾಹ ನಡೆದು ಎರಡು ತಿಂಗಳೊಳಗೆ ಆ ಸಂಬಂಧ ಮುರಿದು ಬಿದ್ದಿತ್ತು. ಅದರ ಬೆನ್ನಲ್ಲೇ ಯುವತಿ ಒಮ್ಮೆ ನಾಪತ್ತೆಯಾಗಿ ಮರುದಿನ ಮನೆಗೆ ವಾಪಸಾಗಿದ್ದಳು. ಯುವತಿಯನ್ನು ಬೇರೊಬ್ಬ ಯುವಕನೊಂದಿಗೆ ವಿವಾಹ ಮಾಡಿಸಲು ಮನೆಯವರು ಆಲೋಚಿಸುತ್ತಿರುವಂತೆಯೇ ಯುವತಿ ತಂದೆ, ತಾಯಿಯನ್ನು ಕೊಠಡಿಯಲ್ಲಿ ಕೂಡಿ ಹಾಕಿದ ಬಳಿಕ ಪರಾರಿಯಾಗಿದ್ದಾಳೆಂದು ಪೊಲೀಸರಿಗೆ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next