ಕುಂಬಳೆ: ಆರಿಕ್ಕಾಡಿ ಪಾರೆಸ್ಥಾನ ಶ್ರೀ ಭಗವತೀ ಆಲಿ ಚಾಮುಂಡಿ ಕೇÒತ್ರದ ವಾರ್ಷಿಕ ಕಳಿಯಾಟ ಮಹೋತ್ಸವವು ಮಾ.30ರಿಂದ ಆರಂಭಗೊಂಡು ಎ.6ರ ತನಕ ಧಾರ್ಮಿಕ ಸಾಂಸೃRತಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ಮಾ.30 ರಂದು ಚಪ್ಪರ ಮು ಹೂರ್ತ,ದೀಪ ಪ್ರತಿಷ್ಠೆಯ ಬಳಿಕ ರಾತ್ರಿ ಭಂಡಾರ ಮನೆಯಿಂದ ಭಂಡಾರ ಆಗಮಿಸಿತು.
ಮಾ.31 ರಂದು ಸಂಜೆ ಭಗವತೀ ದರ್ಶನ,ಕೆಂಡಸೇವೆ,ಪ್ರದಕ್ಷಿಣೆ ಬಲಿ,ಬಿಂಬ ದರ್ಶನದ ಬಳಿಕ ಧ್ವಜಾರೋಹಣದ ಬಳಿಕ ರಾತ್ರಿ ವಿವಿಧ ದೈವದ ಕೋಲಗಳು ನಡೆಯಿತು.
ಎ.1 ರಂದು ಸಂಜೆ ಭಗವತೀ ದರ್ಶನ ಮತ್ತು ಅಡೆಯಾಳಂ ಚೇರ್ಕಲ್,ರಾತ್ರಿ ವಿವಿಧ ದೈವಗಳ ಕೋಲ ನಡೆಯಿತು.ಎ.2 ರಂದು ಮೊದಲ ಕಳಿಯಾಟದಂಗವಾಗಿ ಬೆಳಗ್ಗೆ ಮಲಯಾಂ ಚಾಮುಂಡಿ ದೈವದಕೋಲ,ಸಂಜೆ ವಿವಿಧ ದೈವಗಳ ಕೋಲ ನಡೆಯಿತು.
ಎ.3 ರಂದು ನಡು ಕಳಿಯಾಟ ದಂಗವಾಗಿ ಬೆಳಗ್ಗೆ ವೀರ ಪುತ್ರನ್ ದೈವದ ಕೋಲ,ಸಂಜೆ ವಿವಿಧ ದೈವಗಳ ಕೋಲ ನಡೆಯಿತು. ರಾತ್ರಿ ಮಂಗಳೂರು ಲಕುಮಿ ತಂಡದಿಂದ ಒವುಲಾ ಒಂತೆ ದಿನಾನೆ ತುಳು ನಾಟಕ ಜರಗಿತು. ಎ.4 ರಂದು ಬೆಳಗ್ಗೆ ಪೀಯಾಯಿ,ಆಲಿ ಭೂತದ ಬಳಿಕ ರಾತ್ರಿ ತನಕ ವಿವಿಧ ದೈವಗಳ ಕೋಲ ನಡೆಯಿತು.ರಾತ್ರಿನೃತ್ಯ ವೈಭವ ಜರಗಿತು. ಎ.5 ರಂದು ಮುಂಜಾನೆ ಪುತ್ರನ್ ದೈವಗಳ ಕೋಲ,ಬೆಳಗ್ಗೆ ಪೀಯಾಯಿ,ಆಲಿಭೂತ ಮುಂತಾದ ದೈವಗಳ ಕೋಲ ರಾತ್ರಿ ತನಕ ನಡೆಯಿತು.
ಎ.6ರಂದು ಬೆಳಗ್ಗೆ ಪೀಯಾಯಿ,ಆಲಿ ಭೂತದ ಬಳಿಕ ರಾತ್ರಿ ತನಕ ವಿವಿಧ ದೈವಗಳ ಕೋಲ ನಡೆದು ರಾತ್ರಿ ಭಂಡಾ ರಮನೆಗೆ ಭಂಡಾರ ನಿರ್ಗಮನದ ಬಳಿಕ ಅನ್ನದಾನದೊಂದಿಗೆ ಸಂಪನ್ನ ಗೊಂಡಿತು.
ಸಾಮರಸ್ಯಕ್ಕೆ ಸಾಕ್ಷಿಯಾದ ಆಲಿಭೂತದ ದರ್ಶನಕ್ಕೆ ಮುಸ್ಲಿಂ ಮಹಿಳೆಯರು ಪ್ರತಿವರ್ಷದಂತೆ ಆಗ ಮಿಸಿ ಆಲಿಭೂತದ ಮುಂದೆ ಪ್ರಾರ್ಥಿಸಿ ಹರಕೆ ಸಲ್ಲಿಸಿ ಪ್ರಸಾದ ಸೀÌಕರಿಸಿದರು. ನಿತ್ಯ ಮಧ್ಯಾಹ್ನ ನಡೆದ ಅನ್ನದಾನದಲ್ಲಿ ಸಹಸ್ರಾರು ಮಂದಿ ಭಾಗವಹಿಸಿದರು.