Advertisement

Kumble: ಕಾರು ಅಪಘಾತ; ಗಾಯಾಳು ಮಹಿಳೆ ಸಾವು

09:11 PM Sep 27, 2024 | Team Udayavani |

ಕುಂಬಳೆ: ಕಲ್ಲಿಕೋಟೆ ಬಳಿಯ ಕೊಡುವಳ್ಳಿಯಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡು ಕಲ್ಲಿಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೇರ್ಕಳ ಪರಪ್ಪ ಹೌಸ್‌ನ ಸಿದ್ದಿಕ್‌ ಅವರ ಪತ್ನಿ ತಸ್ಲಿಮಾ (28) ಮೃತಪಟ್ಟಿದ್ದಾರೆ.

Advertisement

ಗಾಯಗೊಂಡಿರುವ ತಸ್ಲಿಮಾ ಅವರ ಸಹೋದರ ಅಬ್ದುಲ್‌ ಜಮಾಲ್‌ (27), ಸಂಬಂಧಿಕೆ ಕುಂಞಾಲಿಮ(30) ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ತಸ್ಲಿಮಾ ಅವರ ಮಕ್ಕಳಾದ ತಸ್ಫಿಯಾ (8), ಫಾತಿಮಾ (4) ಅವರನ್ನು ಕಲ್ಲಿಕೋಟೆಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೆ. 24ರಂದು ನಿಯಂತ್ರಣ ತಪ್ಪಿ ಕಾರು ರಸ್ತೆಯ ಡಿವೈಡರ್‌ಗೆ ಢಿಕ್ಕಿ ಹೊಡೆದು ಮಗುಚಿ ಬಿದ್ದು ಅಪಘಾತ ಸಂಭವಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next