Advertisement

ಕುಂಭಾಶಿ: ಪಲ್ಟಿಯಾಗಿ ಕಾರು ಜಖಂ

02:45 AM Jul 13, 2017 | |

ತೆಕ್ಕಟ್ಟೆ ( ಕುಂಭಾಶಿ):  ಇಲ್ಲಿನ ಕುಂಭಾಶಿ ರಾ.ಹೆ.66 ಬಸ್‌ ತಂಗುದಾಣದ ಅನತಿ ದೂರದಲ್ಲಿಯೇ ಮಾರುತಿ ಸ್ವಿಫ್ಟ್‌ ಕಾರೊಂದು ರಸ್ತೆಯ ಸಮೀಪದಲ್ಲಿರುವ ಮೈಲಿಗಲ್ಲಿಗೆ ಢಿಕ್ಕಿ ಹೊಡೆದು ಪಲ್ಟಿಯಾದ  ಘಟನೆ ಬುಧವಾರ ಮಧ್ಯಾಹ್ನ ಗಂಟೆ 2:30 ರ ಸುಮಾರಿಗೆ ಸಂಭವಿಸಿದೆ.

Advertisement

ಘಟನೆ ವಿವರ:  ರಿಯಾಜ್‌  ಸಂಬಂಧಿಕರೊಂದಿಗೆ ಉಡುಪಿಯಿಂದ ಕುಂದಾಪುರ ಕೋಡಿಯತ್ತ ಮಾರುತಿ ಸ್ವಿಫ್ಟ್‌ ಸಾಗುತ್ತಿದ್ದ ಸಂದರ್ಭದಲ್ಲಿ ಪಾದಾಚಾರಿ ಅಡ್ಡಬಂದ ಹಿನ್ನೆಲೆಯಲ್ಲಿ ತಪ್ಪಿಸುವ ಭರದಲ್ಲಿ ನಿಯಂತ್ರಣ ತಪ್ಪಿದ ಕಾರು ರಾ.ಹೆ.66 ಸಮೀಪದಲ್ಲಿದ್ದ ಮೈಲಿಗಲ್ಲಿಗೆ ನೇರವಾಗಿ ಬಂದು ಢಿಕ್ಕಿ ಹೊಡೆ ದಿದೆ ಪರಿಣಾಮವಾಗಿ ಮಾರುತಿ ಸ್ವಿಫ್ಟ್‌ ಕಾರು ಪಲ್ಟಿಯಾಗಿದೆ. ಘಟನೆಯ ತೀವ್ರತೆಗೆ ಮಾರುತಿ ಸ್ವಿಫ್ಟ್‌ ಕಾರು ಸಂಪೂರ್ಣ ಜಖಂಗೊಂಡಿದೆ, ಕಾರಿನ ಗಾಜು ಸಂಪೂರ್ಣ ಒಡೆದಿದ್ದು ಮುಂದಿನ ಚಕ್ರ ಸಿಡಿದಿದೆ. ಅತೀ ವೇಗದಿಂದ ಬಂದಿರುವ ಕಾರು ಪಾದಾಚಾರಿಯನ್ನು ತಪ್ಪಿಸುವ ನೆಪದಲ್ಲಿ ರಾ.ಹೆ.66 ಇಕ್ಕೆಲದಲ್ಲಿರುವ ಮೈಲಿಗಲ್ಲು ಕೆಡವಿ ಮುಂದೆ ಸಾಗಿದ್ದು ನಂತರ ಆಯಾತಪ್ಪಿ ಪಲ್ಟಿಯಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next