Advertisement

ಮಹಾ ಕುಂಭ ಮೇಳದ ಗಂಗಾ ಪವಿತ್ರ ಸ್ನಾನಕ್ಕೆ ಧಾವಿಸಿದ ಜನ ಸಾಗರ : ಕೋವಿಡ್ ನಿಯಮಗಳು ಮಾಯ..!

12:14 PM Apr 12, 2021 | Team Udayavani |

ಹರಿದ್ವಾರ : ದೇಶದಲ್ಲಿ ರೂಪಾಂತರಿ ಕೋವಿಡ್ ಸೋಂಕಿನ ಅಲೆ ಹಠಾತ್ ಏರಿಕೆಯಿಂದ ದೊಡ್ಡ ಮಟ್ಟದಲ್ಲಿ ಆತಂಕ ಸೃಷ್ಟಿಯಾದ ಸಂದರ್ಭದಲ್ಲೇ ಉತ್ತರಾಖಂಡದ ಹರಿದ್ವಾರದಲ್ಲಿ ಮಹಾಕುಂಭ ಮೇಳ ಆರಂಭವಾಗಿದ್ದು, ಲಕ್ಷೋಪಲಕ್ಷ ಮಂದಿ ಗಂಗಾ ಪವಿತ್ರ ಸ್ನಾನಕ್ಕಾಗಿ ಹರಿದ್ವಾರಕ್ಕೆ ಧಾವಿಸಿದ್ದಾರೆ.

Advertisement

ಮಹಾಕುಂಭ ಮೇಳಕ್ಕೆ ಆಗಮಿಸಿದ ಜನರ ನಡುವೆ ಸಾಮಾಜಿಕ ಅಂತರ ಸೇರಿ ಕೋವಿಡ್ ನಿಯಮಾವಳಿಗಳು ಮಾಯವಾಗಿವೆ. ಮಹಾಕುಂಭ ಪವಿತ್ರ ಸ್ನಾನಕ್ಕಾಗಿ ಬಂದವರನ್ನು ನಿರ್ವಹಿಸುವುದು ಕೂಡ ಕಷ್ಟವಾಗಿದೆ.

ಓದಿ : ಜನರೇ ನಿಬಂಧನೆ ಹಾಕಿಕೊಂಡರೆ ಲಾಕ್ ಡೌನ್ ಅವಶ್ಯಕತೆಯಿಲ್ಲ: ಸಚಿವ ಸುಧಾಕರ್

ಕೋವಿಡ್ ನಿಯಮಗಳನ್ನು ಪಾಲನೆ ಮಾಡಿ ಎಂದು ನಿರಂತರವಾಗಿ ಭಕ್ತಾದಿಗಳಲ್ಲಿ ಮನವಿ ಮಾಡಿಕೊಳ್ಳುತ್ತಿದ್ದರೂ ಅವರು ಕೇಳುತ್ತಿಲ್ಲ. ದೇಶದ ಬೇರೆ ಬೇರೆ ಕಡೆಗಳಿಂದ ಇಲ್ಲಿಗೆ ಬಂದ ಭಕ್ತಾದಿಗಳ ನಡುವೆ ಸಾಮಾಜಿಕ ಅಂತರವನ್ನು ನಿರ್ವಹಿಸುವುದಕ್ಕೆ ಕಷ್ಟವಾಗುತ್ತಿದೆ.  ಜನರ ಗುಂಪಿನಲ್ಲಿ ನಿಯಮ ಉಲ್ಲಂಘನೆ ಮಾಡುತ್ತಿರುವವರಿಗೆ ದಂಡ ವಿಧಿಸಲು ಕೂಡ ಸಾಧ್ಯವಾಗುತ್ತಿಲ್ಲ. ಹರ್ ಕಿ ಪೌರಿ ಘಾಟ್ ನಲ್ಲಿ ಸಾಮಾಜಿಕ ಅಂತರ ಇಲ್ಲದಂತಾಗಿದೆ ಎಂದು ಹರಿದ್ವಾರದಲ್ಲಿ ಕಾರ್ಯ ನಿರತವಾಗಿರುವ ಪೊಲೀಸ್ ಇನ್ಸ್ ಪೆಕ್ಟರ್ ಜನರಲ್ ಸಂಜಯ್ ಗುಂಜ್ಯಾಲ್ ಹೇಳಿರುವುದನ್ನು ರಾಷ್ಟ್ರೀಯ ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.

Advertisement

ದೇಶದಲ್ಲಿ ಕೋವಿಡ್ ಪ್ರಕರಣಗಳು ದಿನ ನಿತ್ಯ ಏರಿಕೆಯಾಗುತ್ತಿದೆ. ಘಾಟ್ ನಲ್ಲಿ ಸಾಮಾಜಿಕ ಅಂತರವನ್ನು ನಿರ್ವಹಿಸುವುದಕ್ಕೆ ಪ್ರಯತ್ನ ಪಟ್ಟರೆ ಕಾಲ್ತುಳಿತ ಸಂಭವಿಸುವ ಸಾಧ್ಯತೆ ಇದೆ ಎಂದು ಕೂಡ ಗುಂಜ್ಯಾಲ್ ತಿಳಿಸಿದ್ದಾರೆ.

ಇನ್ನು, ಪವಿತ್ರ ಗಂಗಾ ಸ್ನಾನಕ್ಕಾಗಿ ಮಹಾ ಕುಂಭ ಸಂದರ್ಭದಲ್ಲಿ ಬೆಳಗ್ಗೆ ಏಳು ಗಂಟೆಯವರೆಗೆ ಮಾತ್ರ ಸಾಮಾನ್ಯ ಜನರಿಗೆ ಅವಕಾಶವಿದ್ದು, ತದನಂತರ ಸಾಧುಗಳಿಗೆ ಅವಕಾಶವಿದೆ.

ಓದಿ :  ಪರಲೋಕದ ಮುಕ್ತಿದಾತರ ಇಹಲೋಕದ ಬವಣೆ : ರುದ್ರಭೂಮಿ ನೌಕರರಿಗೆ 10 ತಿಂಗಳಿಂದ ವೇತನವಿಲ್ಲ

Advertisement

Udayavani is now on Telegram. Click here to join our channel and stay updated with the latest news.

Next