Advertisement

ಕಾರ್ಮಿಕರ ಪಾದ ತೊಳೆದ ಮೋದಿ

12:30 AM Feb 25, 2019 | Team Udayavani |

ಪ್ರಯಾಗ್‌ರಾಜ್‌: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ, ಭಾನುವಾರ ಸ್ವಚ್ಛತಾ ಕಾರ್ಮಿಕರ ಪಾದ ತೊಳೆದಿದ್ದಾರೆ. 

Advertisement

ಕುಂಭ ಮೇಳದಲ್ಲಿ ಸ್ವಚ್ಛತೆ ಕಾಪಾಡುವ ಕಾರ್ಮಿಕರಿಗೆ ಸ್ವತ್ಛ ಕುಂಭ ಸ್ವತ್ಛ ಆಭಾರ್‌ ಪುರಸ್ಕಾರ ನೀಡುವ ಕಾರ್ಯಕ್ರಮ ಇದಾಗಿದ್ದು, ಪಾದ ತೊಳೆಯಲು ಖುದ್ದು ದೇಶದ ಪ್ರಧಾನಿಯೇ ಆಗಮಿಸಿದ್ದು ಸ್ವಚ್ಛತಾ ಕಾರ್ಮಿಕರಿಗೆ ಅಚ್ಚರಿ ಉಂಟು ಮಾಡಿದೆ. ಸ್ವಚ್ಛತಾ ಕಾರ್ಮಿಕರ ಪೈಕಿ ಓರ್ವ ಮಹಿಳೆಯೂ ಇದ್ದು, “ಇದು ನನ್ನ ಜೀವನದ ಅತ್ಯಂತ ಖುಷಿಯ ಕ್ಷಣ. ಕನಸಿನಂತಿತ್ತು. ಎಲ್ಲರೊಂದಿಗೂ ಇದನ್ನು ನಾನು ಹೇಳಿಕೊಳ್ಳುತ್ತೇನೆ’ ಎಂದಿದ್ದಾರೆ.

ಸ್ವಚ್ಛತಾ ಕಾರ್ಮಿಕರ ಪಾದ ತೊಳೆಯುವುದು ಮತ್ತು ಅವರ ಆಶೀರ್ವಾದ ಪಡೆಯುವುದು ನನ್ನನ್ನು ಭಾವುಕನನ್ನಾಗಿಸಿದೆ. ಈ ಕಾರ್ಮಿಕರು ಇಂಚಿಂ ಚನ್ನೂ ಸ್ವಚ್ಛವಾಗಿಡುತ್ತಾರೆ. ಆದರೆ ಅವರನ್ನು ಯಾರೂ ಗುರುತಿಸುವುದಿಲ್ಲ. ಈಗ ಅವರ ಕೆಲಸ ನಮಗೆ ದೆಹಲಿಯವರೆಗೂ ತಲುಪುತ್ತಿದೆ. ಈ ಕುಂಭ ಮೇಳದಲ್ಲಿ ಶ್ರಮಿಸಿದ ಕೆಲಸಗಾರರಿಗಾಗಿ ಸ್ವಚ್ಛ ಸೇವಾ ಸಮ್ಮಾನ ಕೋಶವನ್ನು ಸ್ಥಾಪಿಸಲಾಗಿದೆ ಎಂದೂ ಅವರು ಇದೇ ವೇಳೆ ಹೇಳಿದ್ದಾರೆ.

ಇದೇ ವೇಳೆ ಪ್ರಧಾನಿ ಮೋದಿ ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಕೈಗೊಂಡು ಗಂಗಾರತಿಯನ್ನೂ ಮಾಡಿದ್ದಾರೆ. ಕುಂಭ ಮೇಳದ ಆಯೋಜಕರು ಹಾಗೂ ಶುಚಿತ್ವವನ್ನು ಕಾಪಾಡಲು ಶ್ರಮಿಸಿದ ಕಾರ್ಮಿಕರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. 22 ಕೋಟಿ ಭಕ್ತರನ್ನು ನಿರ್ವಹಿಸುವುದು ಸುಲಭವಲ್ಲ. ಹಿಂದೆಂದಿಗಿಂತಲೂ ಗಂಗಾ ಈಗ ಶುದ್ಧವಾಗಿದೆ. ಇದಕ್ಕೆ ನಮಾಮಿ ಗಂಗೆ ಯೋಜನೆಯೇ ಕಾರಣ ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next