Advertisement

ಕುಂಭಮೇಳಕ್ಕೆ  ರಾಜ್ಯದ ಜನತೆಗೆ ಆಹ್ವಾನ

12:00 PM Dec 27, 2018 | Harsha Rao |

ಬೆಂಗಳೂರು: ಉತ್ತರ ಪ್ರದೇಶದ ಪ್ರಯಾಗ್‌ ರಾಜ್‌ (ಹಿಂದಿನ ಅಲಹಾಬಾದ್‌)ನಲ್ಲಿ ಜ.15ರಿಂದ ಮಾ.31ರವರೆಗೆ ನಡೆಯುವ ಕುಂಭಮೇಳಕ್ಕೆ ಕರ್ನಾಟಕದ ಜನತೆಗೆ ಉತ್ತರ ಪ್ರದೇಶದ ಸಚಿವ ಸಿದ್ಧಾರ್ಥ್ನಾಥ್‌ ಸಿಂಗ್‌ ಆಹ್ವಾನ
ನೀಡಿದ್ದಾರೆ.

Advertisement

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐತಿಹಾಸಿಕ ಕುಂಭಮೇಳಕ್ಕಾಗಿ 3,200 ಹೆಕ್ಟೇರ್‌ ಪ್ರದೇಶವನ್ನು ಸ್ಮಾರ್ಟ್‌ ಸಿಟಿಯನ್ನಾಗಿ ಪರಿವರ್ತಿಸಲಾಗಿದೆ. 800 ವಿಶೇಷ ರೈಲುಗಳ ಸೌಲಭ್ಯ, 1 ಲಕ್ಷ 22 ಸಾವಿರ ತಾತ್ಕಾಲಿಕ ಶೌಚಾಲಯ, ವಸತಿ ವ್ಯವಸ್ಥೆ ಸೇರಿದಂತೆ ಕುಂಭಮೇಳಕ್ಕೆ ಆಗಮಿಸುವ ಪ್ರವಾಸಿಗರಿಗೆ ಎಲ್ಲ ರೀತಿಯ ಸೌಲಭ್ಯ ಒದಗಿಸಲಾಗಿದೆ. ಅಗತ್ಯವಾದ ಮೂಲ ಸೌಕರ್ಯ ಹಾಗೂ 15 ಕೋಟಿ ಜನರಿಗೆ ವಸತಿ ಕಲ್ಪಿಸಲು 4,200 ಕೋಟಿ ರೂ. ವ್ಯಯಿಸಲಾಗಿದೆ ಎಂದು ತಿಳಿಸಿದರು.

ಕುಂಭಮೇಳದ ವಿವಿಧ ಕಾರ್ಯಕ್ರಮದ ಸ್ಥಳ, ಸಮಯ ಹಾಗೂ ವಿಳಾಸ ಹುಡುಕಲು ಉತ್ತರ ಪ್ರದೇಶ ಸರ್ಕಾರ ವೈಬ್‌ಸೈಟ್‌ (kuಞಚಿಜಞಛಿlಚಟಟlಜಿcಛಿ.ಜಟv.ಜಿn) ಅಭಿವೃದ್ಧಿ ಪಡಿಸಿದೆ. ಇದರಲ್ಲಿ ಆ್ಯಪ್‌ ಡೌನ್‌ಲೋಡ್‌
ಮಾಡಿಕೊಂಡರೆ ಕುಂಭ ಮೇಳದ ಬಗ್ಗೆ ಎಲ್ಲಾ ಮಾಹಿತಿಗಳು ಸಿಗಲಿವೆ. ಭದ್ರತೆ ಗಾಗಿ 1135 ಸಿಸಿಟಿವಿ ಅಳವಡಿಸಲಾಗಿದೆ ಎಂದರು.

ತಪ್ಪಾಗಿ ಅರ್ಥೈಸಲಾಗಿದೆ: ಹನುಮಂತ ದಲಿತ ಸಮುದಾಯಕ್ಕೆ ಸೇರಿದವನಲ್ಲ. ಸಂಕಟಮೋರ್ಚ್‌ ಎಂದು ಹನುಮಾನ್‌ಗೆ ಕರೆಯಲಾಗು ತ್ತದೆ. ಸಂಕಟ ಬಂದಾಗ ಹನುಮಂತನನ್ನು ನೆನೆಯಲಾಗುವುದು ಎಂಬ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ಮಾತನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ ಎಂದು ಹೇಳಿದರು.

ಕುಂಭಮೇಳದಲ್ಲಿ ಬೆಂಗಳೂರಿಗರ ಕೈಚಳಕ
ಕುಂಭಮೇಳಕ್ಕಾಗಿ ಪ್ರಯಾಗ್‌ರಾಜ್‌ ಅನ್ನು ಸ್ಮಾರ್ಟ್‌ ಸಿಟಿಯನ್ನಾಗಿ ಮಾಡಲು ದೇಶದ ಹಲವು ತಂತ್ರಜ್ಞಾನ ತಜ್ಞರು, ಇಂಜಿನಿಯರುಗಳು ಭಾಗವಹಿಸಲಿದ್ದಾರೆ. ಆದರೆ ಅದರಲ್ಲಿ ಹೆಚ್ಚಿನವರು ಬೆಂಗಳೂರಿಗೆ ಸೇರಿದವರಾಗಿದ್ದಾರೆ. ಬೆಂಗಳೂರಿನ ಗೋಡೆಗಳ ಮೇಲೆ ಚಿತ್ರ ಬಿಡಿಸಿರುವುದು ಉತ್ತರ ಪ್ರದೇಶ ಸರ್ಕಾರದ ಗಮನ ಸೆಳೆದಿದೆ. ಹೀಗಾಗಿ ಕುಂಭ ಮೇಳದ ಸ್ಮಾರ್ಟ್‌ ಸಿಟಿಯಲ್ಲಿನ ಗೋಡೆಗಳ ಮೇಲೆ ಚಿತ್ರ ಬಿಡಿಸಲು ಬೆಂಗಳೂರಿನ ಕಲಾವಿದರಿಗೆ ಅವಕಾಶ ನೀಡಲಾಗಿದೆ.

Advertisement

ಬೆಂಗಳೂರಿನ ಗೋಡೆಗಳ ಮೇಲೆ ಚಿತ್ರ ಬಿಡಿಸಿದ ಕಲಾವಿದರೆ ಕುಂಭ ಮೇಳದ ಸ್ಮಾರ್ಟ್‌ ಸಿಟಿಯ ಗೋಡೆಗಳ ಮೇಲೂ ಚಿತ್ರ ರಚಿಸಿದ್ದಾರೆ ಎಂದು ಸಿದ್ಧಾರ್ಥ್ನಾಥ್‌ ಸಿಂಗ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next