Advertisement

Bengaluru: ನಿಷೇಧಿತ ಇ-ಸಿಗರೆಟ್‌ ಮಾರಾಟ: ನಾಲ್ವರ ಬಂಧನ

10:35 AM Sep 14, 2024 | Team Udayavani |

ಬೆಂಗಳೂರು: ನಿಷೇಧಿತ ಇ-ಸಿಗರೆಟ್‌ಗಳನ್ನು ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಜೆ.ಜೆ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ವಿಲ್ಸನ್‌ ಗಾರ್ಡನ್‌ ನಿವಾಸಿ ಮೊಹಮ್ಮದ್‌ ಜವಾದುಲ್ಲಾ (53), ಮೈಸೂರು ರಸ್ತೆಯ ಶಾಮಣ್ಣ ಗಾರ್ಡನ್‌ ನಿವಾಸಿ ಮುಜೀಬ್‌ ಉರ್‌ ರೆಹಮಾನ್‌ (21), ಉಮೇಜ್‌ ಖಾನ್‌ (20) ಹಾಗೂ ಜೆ.ಜೆ.ನಗರದ ವಿನಾಯಕನಗರ ನಿವಾಸಿ ಮೊಹಮ್ಮದ್‌ ಮಜರ್‌ (38) ಬಂಧಿತರು. ಆರೋಪಿಗಳಿಂದ 1.50 ಲಕ್ಷ ರೂ. ಮೌಲ್ಯದ 106 ನಿಷೇಧಿತ ಎಲೆಕ್ಟ್ರಾನಿಕ್‌ ಇ ಸಿಗರೆಟ್‌, ಎರಡು ಚಾರ್ಜರ್‌, 12 ರೀಫಿಲ್‌ಗ‌ಳನ್ನು ಜಪ್ತಿ ಮಾಡಲಾಗಿದೆ.

ಆರೋಪಿಗಳು ಪಾದರಾಯನಪುರ ಬಳಿಯ ಅರ್ಬನ್‌ ಕ್ಲಾತಿಂಗ್‌ ಕಟ್ಟಡದ ಪಕ್ಕದ ಅಂಗಡಿಯಲ್ಲಿ ಇ-ಸಿಗರೆಟ್‌ ಇರಿಸಿಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದರು. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಅಂಗಡಿ ಮೇಲೆ ದಾಳಿ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next