Advertisement
ಕುಮಾರಸ್ವಾಮಿ ಅವರ 13 ತಿಂಗಳ ಆಡಳಿತ ಅವಧಿಯ ವೈಫಲ್ಯಗಳ ಕುರಿತು ಸಿಎಂ ಅವರಿಗೆ ಹತ್ತು ಪ್ರಶ್ನೆಗಳನ್ನು ಕೇಳುವ ಮೂಲಕ ಉತ್ತರಿಸುವಂತೆ ಸವಾಲು ಹಾಕಿದರು .
Related Articles
Advertisement
ಗ್ರಾಮದ ಎಲ್ಲರಿಗೂ ಮನೆ ಕಟ್ಟಲು ಹಣ ಕೊಡುತ್ತೇನೆ, ಎಲ್ಲಾ ಮನೆಗೆ ಶೌಚಾಲಯ ನಿರ್ಮಿಸಲು ನೆರವಿನ ಭರವಸೆ ನೀಡಿದ್ದ ಸಿಎಂ.
ಒಂದೇ ಒಂದು ಮನೆ ಕಟ್ಟಿಸಲು ಸಾಲ ಕೂಡ ಕೊಟ್ಟಿಲ್ಲ, ಇಡೀ ಗ್ರಾಮದಲ್ಲಿ ಇರೋದು ಎರಡೇ ಶೌಚಾಲಯ.
2006ರಲ್ಲಿ ಕೆಆರ್ ಪೇಟೆ ತಾಲೂಕಿನ ಬಂಡಿಹೊಳೆ ಗ್ರಾಮದಲ್ಲಿ ಸಿಎಂ ಗ್ರಾಮವಾಸ್ತವ್ಯ:
*ಎಚ್.ಡಿ.ಕುಮಾರಸ್ವಾಮಿ ಗ್ರಾಮ ವಾಸ್ತವ್ಯದ ದಿನ ಸಾರ್ವಜನಿಕ ಸಮಾರಂಭ ಮಾಡಿದ ಶಾಲೆ ಬಿದ್ದು ಹೋಗಿದೆ.
*ಗ್ರಾಮದಲ್ಲಿ ಕುಡಿಯುವ ನೀರಿನ ಬವಣೆ ಇನ್ನೂ ಹಾಗೇ ಇದೆ
*ರಸ್ತೆಗಳಿಲ್ಲ, ಯಾವುದೇ ಮೂಲಭೂತ ಸೌಕರ್ಯಗಳನ್ನೂ ಒದಗಿಸಿಲ್ಲ.
2006ರಲ್ಲಿ ಬೆಳಗಾವಿ ಅಥಣಿ ತಾಲೂಕಿನ ನಾಗನೂರು ಪಿಕೆ ಗ್ರಾಮದಲ್ಲಿ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ:
*ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಕೃಷ್ಣಾ ನದಿ ಪ್ರವಾಹದಿಂದ ತತ್ತರಿಸಿರುವ 22 ಗ್ರಾಮಗಳನ್ನು ಸ್ಥಳಾಂತರಿಸಿ ಸಂಪೂರ್ಣ ಅಭಿವೃದ್ಧಿಪಡಿಸುವುದಾಗಿ ಮುಖ್ಯಮಂತ್ರಿ ಘೋಷಿಸಿ ಹೋಗಿದ್ದರು.
*ಭರವಸೆ ನೀಡಿ ಈಗ ದಶಕಗಳೇ ಕಳೆದಿದೆ. ಈವರೆಗೂ ನಾಗನೂರು ಗ್ರಾಮದ ವಾಸಿಗಳಿಗೆ ಯಾವುದೇ ಸ್ಥಳಾಂತರದ ಭರವಸೆ ಸಿಕ್ಕಿಲ್ಲ, ಗ್ರಾಮದ ಅಭಿವೃದ್ಧಿಯೂ ಆಗಿಲ್ಲ.