Advertisement

Kumaraswamy ಫೇಸ್‌ಬುಕ್‌ ಖಾತೆಯಲ್ಲಿ ಅಶ್ಲೀಲ ಚಿತ್ರಗಳು!

11:08 PM Aug 26, 2023 | Team Udayavani |

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಫೇಸ್‌ಬುಕ್‌ ಪೇಜ್‌ ಹ್ಯಾಕ್‌ ಆಗಿದ್ದು, ತತ್‌ಕ್ಷಣವೇ ಎಚ್ಚೆತ್ತುಕೊಂಡ ಅವರ ಸಾಮಾಜಿಕ ಜಾಲತಾಣ ನಿರ್ವಹಣ ತಂಡವು ಪಾಸ್‌ವರ್ಡ್‌ ಹಾಗೂ ಪ್ರೊಫೈಲ್‌ ಪೋಟೋ ಅನ್ನು ಬದಲಾಯಿಸಿದೆ.

Advertisement

ಶುಕ್ರವಾರ ವರಮಹಾಲಕ್ಷ್ಮೀ ಹಬ್ಬದ ಶುಭಾಶಯ ಕೋರಿ ಪೋಸ್ಟ್‌ ಹಾಕಿದ್ದ ಎಚ್‌.ಡಿ. ಕುಮಾರಸ್ವಾಮಿ ಖಾತೆಯಲ್ಲಿ ಶನಿವಾರ ಇದ್ದಕ್ಕಿದ್ದಂತೆ ಅಶ್ಲೀಲ ಚಿತ್ರಗಳು ಹರಿದಾಡಲು ಆರಂಭವಾಗಿತ್ತು.

ಮಹಿಳೆಯರ ನಗ್ನಚಿತ್ರಗಳು, ವೀಡಿಯೋ ಲಿಂಕ್‌ಗಳಿದ್ದವು. ಕೆಲವರಿಗೆ ಮೆಸೆಂಜರ್‌ನಲ್ಲಿ ಸಂದೇಶಗಳೂ ರವಾನೆಯಾಗಿವೆ. ಸಾಲದ್ದಕ್ಕೆ ಈ ಅಶ್ಲೀಲ ಚಿತ್ರಗಳಿಗೆ ಹಲವರ ಹೆಸರುಗಳು ಟ್ಯಾಗ್‌ ಆಗಿದ್ದು, ಎಚ್‌ಡಿಕೆ ಸಾಮಾಜಿಕ ಜಾಲತಾಣ ನಿರ್ವಹಣೆ ಮಾಡುವ ತಂಡದ ಗಮನಕ್ಕೆ ಈ ವಿಚಾರ ತಲುಪುವಷ್ಟರಲ್ಲಿ ಹಲವರ ಖಾತೆಗಳಿಗೆ ಫೋಟೋ, ವೀಡಿಯೋ, ಲಿಂಕ್‌ಗಳು ಶೇರ್‌ ಆಗಿದ್ದವು.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next