Advertisement

ರೈತರ ಮೂಗಿಗೆ ತುಪ್ಪ ಸವರಿದ ಕುಮಾರಸ್ವಾಮಿ

06:10 AM Oct 07, 2018 | Team Udayavani |

ಶಿವಮೊಗ್ಗ: ಸಾಲಮನ್ನಾ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ರೈತರ ಮೂಗಿಗೆ ತುಪ್ಪ ಹಚ್ಚಿದ್ದು ಬಿಟ್ಟರೆ ಇನ್ನೇನೂ ಆಗಿಲ್ಲ. ಸಾಲ ಮನ್ನಾ ಹೇಳಿಕೆ ಬರೀ ಹೇಳಿಕೆಯಾಗಿಯೇ ಉಳಿದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಆರೋಪಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿ ರೈತರ ಸಾಲ ಮನ್ನಾ ಪ್ರಕಟಿಸಿದ್ದರು. ಆದರೆ, ಇದುವರೆಗೂ ಸಹಕಾರಿ ಬ್ಯಾಂಕುಗಳಿಗೆ ಯಾವುದೇ ಸ್ಪಷ್ಟ ನಿರ್ದೇಶನ ಬಂದಿಲ್ಲ. ಹೊಸ ಸಾಲವೂ ಸಿಗುತ್ತಿಲ್ಲ. ರೈತರ ಆತ್ಮಹತ್ಯೆ ಹೆಚ್ಚಾಗಿದೆ. ರಾಷ್ಟ್ರೀಕೃತ ಬ್ಯಾಂಕುಗಳ ಜತೆ ಸರಕಾರ ಚರ್ಚಿಸಿಲ್ಲ. ಬ್ಯಾಂಕ್‌ಗಳು ಈಗಲೂ ರೈತರಿಗೆ ನೋಟಿಸ್‌ ನೀಡುತ್ತಲೇ ಇವೆ. ಒಟ್ಟಾರೆ ರೈತರನ್ನು ರಾಜ್ಯ ಸರಕಾರ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳು ವಂಚಿಸುವ ಕೆಲಸ ಮಾಡುತ್ತಿವೆ ಎಂದು ಆರೋಪಿಸಿದರು. 

ರಾಜ್ಯದ 55 ತಾಲೂಕುಗಳಲ್ಲಿ ಈಗಲೂ ಭೀಕರ ಬರವಿದೆ. ಸಂಪುಟ ವಿಸ್ತರಣೆ, ಸಮ್ಮಿಶ್ರ ಸರಕಾರದ ಗೊಂದಲ, ಸಚಿವರ ನಿರ್ಲಕ್ಷéಗಳಿಂದ ಸರಕಾರ ಇದೆಯೋ?, ಇಲ್ಲವೋ? ಎಂಬಂತಾಗಿದೆ. ಇದೊಂದು ಕೆಟ್ಟ ಸರಕಾರ ಎಂದು ದೂರಿದರು.

Advertisement

Udayavani is now on Telegram. Click here to join our channel and stay updated with the latest news.

Next