Advertisement

ಬೇಲ್‌ ಸಿಗದಿದ್ದರೆ ಕುಮಾರಸ್ವಾಮಿ ಜೈಲ್‌ನಲ್ಲಿರಬೇಕಿತ್ತು: ಬಿಜೆಪಿ 

06:00 AM Sep 21, 2018 | |

ಬೆಂಗಳೂರು: ಜಂತಕಲ್‌ ಮೈನಿಂಗ್‌ ಪ್ರಕರಣ ಹಾಗೂ ಥಣಿಸಂದ್ರದ ಡಿನೋಟಿμಕೇಷನ್‌ ಪ್ರಕರಣದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ  ಅವರು ಬೇಲ್‌ ಪಡೆಯದಿದ್ದರೆ ಜೈಲ್‌ನಲ್ಲಿರಬೇಕಾಗುತ್ತಿತ್ತು ಎಂದು ಮಾಜಿ ಸಚಿವ ಬಿ. ಜೆ.ಪುಟ್ಟಸ್ವಾಮಿ ತಿರುಗೇಟು ನೀಡಿದ್ದಾರೆ.

Advertisement

ಪಕ್ಷದ ಕಚೇರಿಯಲ್ಲಿ ಆರ್‌.ಅಶೋಕ್‌,ಗೋವಿಂದ ಕಾರಜೋಳ ಅವರೊಂದಿಗೆ ಸುದ್ದಿಗೋಷ್ಠಿ ನಡೆಸಿದ ಅವರು, ಮುಖ್ಯಮಂತ್ರಿಗಳು ಯಡಿಯೂರಪ್ಪ ಅವರಿಗೆ ಬೆದರಿಕೆ ಒಡ್ಡುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಯಡಿಯೂರಪ್ಪ ವಿರುದಟಛಿದ ಪ್ರಕರಣಗಳು ಈಗಾಗಲೇ ನ್ಯಾಯಾಲಯದಲ್ಲಿ ತೀರ್ಮಾನವಾಗಿದ್ದು, ನಿರಪರಾಧಿ ಎಂದು ತಿಳಿಸಿದೆ. 

ಕುಮಾರಸ್ವಾಮಿಯವರ ಒಂದೊಂದೇ ಹಗರಣಗಳು ಬಯಲಿಗೆ ಬರುತ್ತಿವೆ ಎಂದು ಹೇಳಿದರು.ಸರ್ಕಾರಿ ಭೂಕಬಳಿಕೆಯಲ್ಲಿ ಎಚ್‌.ಡಿ.ದೇವೇಗೌಡ ಮತ್ತು ಮಕ್ಕಳಿಗೆ ಪಿಎಚ್‌ಡಿ ನೀಡಬೇಕು.ಹಾಸನದ ಪಡುವಲಹಳ್ಳಿ, ಹೊಳೆನರಸೀಪುರದಲ್ಲಿ 82 ಎಕರೆ ಗೋಮಾಳ ಜಾಗವನ್ನು ಕಬಳಿಸಿದ್ದಾರೆ.ಮತ್ತೂಂದು ಪ್ರಕರಣದಲ್ಲಿ ದೇವೇಗೌಡರು ಹಾಗೂ ಅವರ ಪತ್ನಿ ಚೆನ್ನಮ್ಮ ಭೂರಹಿತರೆಂದು ಹೇಳಿಕೊಂಡು ತಲಾ 10 ಎಕರೆ ಭೂಮಿ ಪಡೆದು ಬಳಿಕ ಅದನ್ನು ಮೊಮ್ಮಗ ಪ್ರಜ್ವಲ್‌ ರೇವಣ್ಣ ಹೆಸರಿಗೆ ನೋಂದಣಿ ಮಾಡಿಸಿದ್ದಾರೆ. ಈ ಬಗ್ಗೆ ವಿಭಾಗಾಧಿಕಾರಿಯಾಗಿದ್ದ ಶಾಂತಕುಮಾರಿ ಎಂಬುವರು ತನಿಖೆ ನಡೆಸಿ ಹಗಲು ದರೋಡೆ ನಡೆದಿದೆ ಎಂಬುದಾಗಿ ವರದಿ ನೀಡಿದ್ದಾರೆಂದು ಹೇಳಿದರು.

ಚಿತ್ರದುರ್ಗದ ಹೊಳಲ್ಕೆರೆ ತಾಲೂಕು ತಂಗೇನಳ್ಳಿ, ಹಿರೇಕೆಂಡವಾಡಿ ಗ್ರಾಮದಲ್ಲಿ 80.94 ಹೆಕ್ಟೇರ್‌ ಪ್ರದೇಶದಲ್ಲಿ ಗಣಿ ಪರವಾನಗಿ ಜಂತಕಲ್‌ ಮೈನಿಂಗ್‌ ಸಂಸ್ಥೆಗೆ ಮಾಡಿಕೊಟ್ಟಿರುವ ಪ್ರಕರಣ ಇಂದಿಗೂ ಸುಪ್ರೀಂಕೋರ್ಟ್‌ನಲ್ಲಿ ಇದೆ ಎಂಬುದು ನೆನಪಿರಲಿ. ಪ್ರಕರಣದಲ್ಲಿ ಬೇಲ್‌ ಸಿಗದಿದ್ದರೆ ಕುಮಾರಸ್ವಾಮಿ ಜೈಲಿನಲ್ಲಿರಬೇಕಿತ್ತು. 1985ರಲ್ಲಿ ಗಣಿ ಪರವಾನಗಿ ರದ್ದಾಗಿತ್ತು. ನಕಲಿ ದಾಖಲೆ ಎಂಬ ಕಾರಣಕ್ಕೆ ಧರ್ಮಸಿಂಗ್‌ ಸೇರಿ ಇತರೆ ಮುಖ್ಯ ಮಂತ್ರಿಗಳು ಪರವಾನಗಿ ನವೀಕರಿಸಿರಲಿಲ್ಲ. ಆದರೆ ಕುಮಾರಸ್ವಾಮಿ 1985ರಲ್ಲಿ ಪರವಾನಗಿ ರದ್ದಾಗಿ ದ್ದರೂ 1985ರಿಂದ ಪೂರ್ವಾನ್ವಯವಾಗುವಂತೆ 2025ರವರೆಗೆ ಪರವಾನಗಿ ನವೀಕರಿಸಿ ಅನುಮೋದಿಸಿದ್ದರು. ಐಎಎಸ್‌ ಅಧಿಕಾರಿ ಗಂಗಾರಾಮ್‌ ಬಡೇರಿಯಾ ಅವರ ಮೇಲೆ ಒತ್ತಡ ಹೇರಿ ಗಣಿ ಪರವಾನಗಿ ನವೀಕರಿಸಿದ್ದಾರೆ ಎಂದು ಆರೋಪಿಸಿದರು.

ಮಾಜಿ ಡಿಸಿಎಂ ಆರ್‌.ಅಶೋಕ್‌ ಮಾತನಾಡಿ, ಜನ ದಂಗೆ ಏಳುವಂತೆ ಕರೆ ನೀಡಬೇಕಾಗುತ್ತದೆ ಎಂಬುದಾಗಿ ಮುಖ್ಯಮಂತ್ರಿಗಳು ಹೇಳಿಕೆ ನೀಡಿರುವುದು ಐಪಿಸಿ ಸೆಕ್ಷನ್‌ 124 (ಎ) ಅನ್ವಯ ರಾಜದ್ರೋಹದ ಅಪರಾಧ. ನಕ್ಸಲರು ಮಾತ್ರ ರಾಜ್ಯ, ದೇಶದ ವಿರುದಟಛಿ ದಂಗೆ ಏಳುವಂತೆ ಕರೆ ನೀಡುತ್ತಾರೆ. ಕರ್ನಾಟಕ ಜಂಗಲ್‌ ರಾಜ್ಯವಾಗುತ್ತಿದ್ದು, ಜನರ ಅರಣ್ಯ ರೋಧನ ಕೇಳುವವರಿಲ್ಲದಂತಾಗಿದೆ ಎಂದು ಹೇಳಿದರು.

Advertisement

ವಿಧಾನಸಭೆ ಪ್ರತಿಪಕ್ಷ ಉಪನಾಯಕ ಗೋವಿಂದ ಕಾರಜೋಳ ಮಾತನಾಡಿ, ಮುಖ್ಯಮಂತ್ರಿಯಾದವರು ತಮ್ಮ ಸ್ಥಾನದ ಘನತೆ, ಗೌರವಕ್ಕೆ ಧಕ್ಕೆ ಯಾಗದಂತೆ ಮಾತನಾಡಬೇಕೆ ಹೊರತು ಗೂಂಡಾಗಳಂತೆ ಮಾತನಾಡಬಾರದು. ಆ ಹೇಳಿಕೆ ಅವರ ಸ್ಥಾನಕ್ಕೆ ಘನತೆ ತರುವುದೇ ಎಂಬುದನ್ನು ಆತ್ಮಾವ ಲೋಕನ ಮಾಡಿಕೊಳ್ಳಬೇಕೆಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ಮಾತನಾಡಿ, 1962ರಲ್ಲಿ ಎಚ್‌.ಡಿ.ದೇವೇಗೌಡರ ಬಳಿ ಇದ್ದುದು 2.38 ಎಕರೆ ಭೂಮಿ ಮಾತ್ರ.ನಂತರ ದೇವೇಗೌಡರು, ಎಚ್‌.ಡಿ.ಕುಮಾರಸ್ವಾಮಿ ಹಾಗೂ ಎಚ್‌.ಡಿ.ರೇವಣ್ಣನವರು ಕೆಲವೇ ದಶಕಗಳಲ್ಲಿ ಭಾರಿ ಶ್ರೀಮಂತರಾಗಿದ್ದು, ಕರ್ನಾಟಕದ ಒಡೆಯರಾಗಿದ್ದಾರೆ. ಇಷ್ಟು ಸಂಪತ್ತು ಹೇಗೆಗಳಿಸಲಾಗಿದೆ ಎಂಬುದನ್ನು ರೈತರಿಗೆ ತಿಳಿಸಿದರೂ ಸಂಕಷ್ಟದಿಂದ ಹೊರಬರಬಹುದು ಎಂದರು.

ಕಾಂಗ್ರೆಸ್‌ ಕಾರ್ಯಕರ್ತರು ಯಡಿಯೂರಪ್ಪ ನಿವಾಸದ ಮುಂದೆ ಪ್ರತಿಭಟನೆ ನಡೆಸಲು ಸಿಎಂ ಕುಮಾರಸ್ವಾಮಿಯವರೇ ಕಾರಣ. ದಂಗೆ ಏಳಿ ಅಂದಾಕ್ಷಣ ಕಾಂಗ್ರೆಸ್‌ ಕಾರ್ಯಕರ್ತರು ಯಡಿಯೂರಪ್ಪ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಪ್ರತಿಪಕ್ಷ ನಾಯಕರ ಮನೆಗೆ ಭದ್ರತೆ ಇಲ್ಲ ಎಂದರೆ ರಾಜ್ಯದ ಕಾನೂನು ಸುವ್ಯವಸ್ಥೆ ಗತಿ ಏನು?
– ಶೋಭಾ ಕರಂದ್ಲಾಜೆ, ಸಂಸದೆ

Advertisement

Udayavani is now on Telegram. Click here to join our channel and stay updated with the latest news.

Next