Advertisement

ಕುಮಾರಸ್ವಾಮಿ ಪೆನ್‌ಡ್ರೈವ್‌ ನಡೆ ಹೊಸದೇನಲ್ಲ: ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ

09:47 PM Jul 08, 2023 | Team Udayavani |

ಚಿಕ್ಕಮಗಳೂರು: ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಪೆನ್‌ಡ್ರೈವ್‌ ನಡೆ ಹೊಸದೇನಲ್ಲ. ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾ, ಉದಾಸೀನ ಮಾಡಬೇಕಾ? ಕೌಂಟರ್‌ ನೀಡಬೇಕಾ ಎಂಬ ಗೊಂದಲದಲ್ಲಿ ನಾವಿದ್ದೇವೆ ಎಂದು ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ಹೇಳಿದರು.

Advertisement

ಶೃಂಗೇರಿ ತಾಲೂಕು ಋಷ್ಯಶೃಂಗೇಶ್ವರ ದೇವಸ್ಥಾನಕ್ಕೆ ಶನಿವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರ ಜತೆ ಅವರು ಮಾತನಾಡಿದರು. ಯಾರು ಪೆನ್‌ಡ್ರೈವ್‌ ಇದೆ ಅಂತಾರೋ ಅವರೇ ಅದರೊಳಗೆ ಏನಿದೆ ಎಲ್ಲವನ್ನೂ ಹೇಳಬೇಕಲ್ವಾ? ಪೆನ್‌ಡ್ರೈವ್‌ ಇದೆಯೇ? ಇದ್ದರೆ ಏಕೆ ಇಟ್ಟುಕೊಂಡಿದ್ದಾರೆ ಎನ್ನುವುದು ಅವರಿಗೆ ಬಿಟ್ಟಿದ್ದು ಎಂದರು.

ಅವರನ್ನು ನಾವು ಹತ್ತಾರು ವರ್ಷಗಳಿಂದ ನೋಡಿದ್ದೇವೆ. ಎಲ್ಲರನ್ನೂ ಬೆದರಿಸೋದು, ಹುಷಾರ್‌ ಅನ್ನೋದು ಸಹಜ. ಅಧಿವೇಶನದಲ್ಲಿ ಸೋಮವಾರ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಇದೆ. ಆಗ ಬೇಕಾದರೂ ಪೆನ್‌ಡ್ರೈವ್‌ನಲ್ಲಿ ಏನಿದೆ ಎಂದು ಹೇಳಲಿ ಅಥವಾ ಬಜೆಟ್‌ ಮೇಲಿನ ಭಾಷಣದಲ್ಲಾದರೂ ಹೇಳಲಿ. ಅವರಿಗೆ ಬಿಟ್ಟಿದ್ದು ಎಂದರು.

ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಚಂದ್ರೇಗೌಡ ಎಂಬುವವರನ್ನು ಏಳು ಬಾರಿ ವರ್ಗಾವಣೆ ಮಾಡಿದ್ದರು. ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಕಮಿಷನರ್‌ ನಾಗರಾಜ್‌ ಎಂಬುವವರ ತಪ್ಪಿಲ್ಲದಿದ್ದರೂ ಅಮಾನತು ಮಾಡಿದ್ದರು. ಇಬ್ಬರೂ ಮಂಡ್ಯದ ಒಕ್ಕಲಿಗ ಸಮುದಾಯದವರು ಎಂದರು.

ಕುಮಾರಸ್ವಾಮಿಯವರಿಗೆ ಒಕ್ಕಲಿಗರಿಗೆ ಹೆಚ್ಚು ಅವಕಾಶ ಸಿಗಬಾರದು ಅನ್ನೋದು ಇದೆ ಅನ್ನಿಸುತ್ತಿದೆ ಎಂದ ಅವರು, ಒಕ್ಕಲಿಗ ಅನ್ನೋ ಕಾರಣಕ್ಕೆ ಚಲುವರಾಯಸ್ವಾಮಿ ವಿರುದ್ಧ ನಿಂತಿರೋದು. ನನಗೆ ಬೇಸರವಿಲ್ಲ. ಅವರು ಇನ್ನೂ 10 ಬಾರಿ ಮುಖ್ಯಮಂತ್ರಿಯಾದರೂ ಸ್ವಾಗತಿಸುತ್ತೇನೆ ಎಂದರು.

Advertisement

ಕುಮಾರಸ್ವಾಮಿ ಕುಟುಂಬದ ಬಗ್ಗೆ ಯಾವತ್ತೂ ಹಗುರವಾಗಿ ಮಾತನಾಡಿಲ್ಲ. ಕೆಟ್ಟದಾಗಿ ನಡೆದುಕೊಂಡಿಲ್ಲ. ಅವರಿಗೆ ನಮ್ಮನ್ನು ಸಹಿಸುವ ಶಕ್ತಿ ಇಲ್ಲ. ದೇವರು ಎಲ್ಲವನ್ನೂ ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಪೆನ್‌ಡ್ರೈವ್‌ ನಡೆ ಹೊಸದಲ್ಲ. ಎಲ್ಲರೂ ನೋಡಿದ್ದಾರೆ ಎಂದು ಟೀಕಿಸಿದರು.

ವಿಧಾನಸಭೆ ಅಧಿವೇಶನದಲ್ಲಿ ಯಾರ ಬಗ್ಗೂ ಗೊತ್ತಿಲ್ಲ ಎಂದು ಹೇಳಿದ್ದಾರೆ. ಒಮ್ಮೆ ಎಲ್ಲರ ಬಗ್ಗೆಯೂ ಗೊತ್ತು ಎನ್ನುತ್ತಾರೆ. ಮಾತನಾಡಿದರೆ ಎಲ್ಲರ ರಾಜೀನಾಮೆ ಕೇಳುತ್ತಾರೆ. ಜರ್ನಾರ್ದನ ರೆಡ್ಡಿ 150 ಹಗರಣದಲ್ಲಿ ಸಿಕ್ಕಿಬಿದ್ದಾಗ ಅವರೇ ಮುಖ್ಯಮಂತ್ರಿಯಾಗಿದ್ದರು. ರಾಜೀನಾಮೆ ನೀಡಿ ಹೊರಬಂದು ತನಿಖೆ ಮಾಡಿಸಿದ್ದಾರೆಯೇ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next