Advertisement

Politics: ಕುಮಾರಸ್ವಾಮಿಗೆ ದೇಶದ ಆಸ್ತಿ ಬಗ್ಗೆ ಅರಿವಿಲ್ಲ: ಡಿ.ಕೆ.ಶಿವಕುಮಾರ್‌

10:13 PM Oct 21, 2023 | Team Udayavani |

ಬೆಂಗಳೂರು: ಎಚ್‌.ಡಿ.ಕುಮಾರಸ್ವಾಮಿಗೆ ದೇಶದ ಆಸ್ತಿ ಏನು ಎಂಬುದರ ಬಗ್ಗೆ ಅರಿವಿಲ್ಲ. ಪಾಪ ಅವರಿಗೆ ಕ್ರೀಡೆಯ ಬಗ್ಗೆ ರುಚಿ ಗೊತ್ತಿಲ್ಲದೆ ಇರಬಹುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿರುಗೇಟು ನೀಡಿದ್ದಾರೆ.

Advertisement

ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳಿದ್ದರೂ ಸಿಎಂ ಹಾಗೂ ಡಿಸಿಎಂ ಕ್ರಿಕೆಟ್‌ ನೋಡಲು ಹೋಗಿದ್ದಾರೆ ಎಂಬ ಕುಮಾರಸ್ವಾಮಿ ಟೀಕೆ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿಗೆ ದೇಶದ ಆಸ್ತಿ ಏನು ಎಂಬುದರ ಬಗ್ಗೆ ಅರಿವಿಲ್ಲ. ಈ ದೇಶದ ಆಸ್ತಿ ಜನರ ಬದುಕು, ನಮ್ಮ ಸಂಸ್ಕೃತಿ. ಸಂಸ್ಕೃತಿಯಲ್ಲಿ ದೇವಾಲಯ, ಚರ್ಚ್‌, ಮಸೀದಿಗಳಿವೆ. ಕ್ರೀಡೆ, ಚಿತ್ರಕಲೆ ಇದೆ. ಅವರು ತಯಾರು ಮಾಡುವಂತಹ ಸಿನೆಮಾ ಇದೆ. ಮಗ ನಟಿಸುವ ಸಿನಿಮಾ ಇದೆ. ಇದಕ್ಕೆಲ್ಲ ನಾವು ಪ್ರೋತ್ಸಾಹ ಕೊಡಬೇಕಲ್ವ? ಜನರಿಗೆ ಬದುಕು ಮುಖ್ಯ. ಕೆಲವರಿಗೆ ಭಾವನೆ, ಬದುಕು ಬೇಕು. ಕೆಲವರಿಗೆ ರಾಜಕಾರಣ ಬೇಕು. ರಾಜಕಾರಣ ಬಿಟ್ಟರೆ ಬೇರೇ ಯಾವುದೂ ಇಲ್ಲ. ನಮಗೆ ಬದುಕು ಬೇಕು. ಇಡೀ ಪ್ರಪಂಚ ಕ್ರೀಡೆಗೋಸ್ಕರ ಎಷ್ಟು ಹೋರಾಟ ಮಾಡುತ್ತಿದೆ. ಪಾಪ ಅವರಿಗೆ ಅದರ ಬಗ್ಗೆ ರುಚಿ ಗೊತ್ತಿಲ್ಲದೇ ಇರಬಹುದು ಎಂದು ತಿರುಗೇಟು ನೀಡಿದರು.

ಎಷ್ಟೋ ಮುಖ್ಯಮಂತ್ರಿಗಳು ಕೆಲವು ಸಂಘಟನೆಗಳ ಅಧ್ಯಕ್ಷರಾಗಿದ್ದರು. ನನಗೂ ಕರ್ನಾಟಕ ಒಲಿಂಪಿಕ್‌ ಅಸೋಸಿಯೇಶನ್‌ ಅಧ್ಯಕ್ಷನಾಗುವ ಆಹ್ವಾನ ಬಂದಿತ್ತು. ನನಗೆ ಸಮಯವಿಲ್ಲವೆಂಬ ಕಾರಣಕ್ಕೆ ಇದಕ್ಕೆ ಒಪ್ಪಿಕೊಂಡಿರಲಿಲ್ಲ. ಇವೆಲ್ಲ ರಾಜ್ಯದ, ದೇಶದ ಇತಿಹಾಸ. ಇದನೆಲ್ಲ ಬಿಟ್ಟು ಮಾಡುವ ಕೆಲಸ ಮಾಡಲಿ. ರಾಜಕಾರಣ ಮಾಡಲಿ, ಅವರಿಗೆ ಒಳ್ಳೆಯದಾಗಲಿ. ನಮಗೆ ಬರಗಾಲದಲ್ಲಿ ಏನು ಕೆಲಸ ಮಾಡಬೇಕೆಂದು ಗೊತ್ತು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next