Advertisement

2023 ಕ್ಕೆ ಕುಮಾರಣ್ಣ ಕರ್ನಾಟಕದ ಮುಖ್ಯಮಂತ್ರಿ : ಪಿ.ಆರ್.ಸುಧಾಕರಲಾಲ್

06:56 PM Dec 16, 2022 | Team Udayavani |

ಕೊರಟಗೆರೆ: 2023 ಕ್ಕೆ ಕುಮಾರಣ್ಣ ಕರ್ನಾಟಕದ ಮುಖ್ಯಮಂತ್ರಿ ಆಗೋದು ಖಚಿತ.. ಕರ್ನಾಟಕ ರಾಜ್ಯದಲ್ಲಿ ಪಂಚರತ್ನ ರಥಯಾತ್ರೆಗೆ ಉತ್ತಮ ಜನಸ್ಪಂದನೆ ಸಿಗುತ್ತಿದೆ. ನಮ್ಮ ಕೊರಟಗೆರೆ ಕ್ಷೇತ್ರದಲ್ಲಿಯೂ ಪಂಚರತ್ನ ರಥಯಾತ್ರೆಯು ಯಶಸ್ಸು ಕಂಡಿದೆ ಎಂದು ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ತಿಳಿಸಿದರು.

Advertisement

ಕೊರಟಗೆರೆ ಪಟ್ಟಣದ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹುಟ್ಟುಹಬ್ಬದ ಪ್ರಯುಕ್ತ ಜಾತ್ಯಾತೀತ ಯುವ ಜನತಾದಳ ಮತ್ತು ಅಲ್ಪಸಂಖ್ಯಾಕರ ಘಟಕದಿಂದ ಶುಕ್ರವಾರ ಏರ್ಪಡಿಸಲಾಗಿದ್ದ ಹೆಚ್‌ಡಿಕೆ ಕಪ್ ಅಂತರ್ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.

ಕರ್ನಾಟಕ ಅಭಿವೃದ್ದಿಯ ಪಂಚರತ್ನ ಎಂದರೇ ವಸತಿ ಸೌಲಭ್ಯ, ಆರೋಗ್ಯಭಾಗ್ಯ, ಹೈಟೆಕ್‌ ಶಾಲೆ, ರೈತ ಚೈತನ್ಯ, ಮಹಿಳೆಯರ ಸಬಲೀಕರಣ ಮತ್ತು ಯುವಕರಿಗೆ ಉದ್ಯೋಗ ಕಲ್ಪಿಸುವುದು ಆಗಿದೆ. ರೈತಪರ ಮತ್ತು ಜನಪರ ಕಾಳಜಿಯುಳ್ಳ ಕುಮಾರಣ್ಣನಿಗೆ ಆರೋಗ್ಯ ಭಾಗ್ಯವನ್ನು ದೇವರು ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ ಎಂದರು.

ಕಾರ್ಯಕ್ರಮದಲ್ಲಿ ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಾಲಿಂಗಪ್ಪ, ಕೊರಟಗೆರೆ ಕಾರ್ಯಧ್ಯಕ್ಷ ನರಸಿಂಹರಾಜು, ಕಾರ್ಯದರ್ಶಿ ಲಕ್ಷ್ಮಣ್, ಜೆಡಿಎಸ್ ನಗರ ಯುವ ಅಧ್ಯಕ್ಷ ಫಾರುಕ್, ಅಲ್ಪಸಂಖ್ಯಾತರ ಘಟಕದ ಯುವಾಧ್ಯಕ್ಷ ಅಜ್ಜು, ಉಪಾಧ್ಯಕ್ಷ ಜಭೀವುಲ್ಲಾ, ರಾಜೀಕ್ ಅಹಮ್ಮದ್, ಮುಖಂಡರಾದ ರಮೇಶ್, ಅಮರ್, ಕೌಶಿಕ್ ಸೇರಿದಂತೆ ಇತರರು ಇದ್ದರು.

ಶ್ರೀಕಟ್ಟೆಗಣಪತಿಗೆ ವಿಶೇಷ ಪೂಜೆ
ಮಾಜಿ ಸಿಎಂ ಕುಮಾರಣ್ಣ64 ನೇ ಹುಟ್ಟುಹಬ್ಬದ ಪ್ರಯುಕ್ತ ಕೊರಟಗೆರೆ ಪಟ್ಟಣದ ಶ್ರೀಕಟ್ಟೆಗಣಪತಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ನಂತರ ಸಾರ್ವಜನಿಕ ಆಸ್ಪತ್ರಗೆ ನೂರಾರು ಒಳರೋಗಿಗಳಿಗೆ ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ನೇತೃತ್ವದಲ್ಲಿ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಹಾಲು-ಬ್ರೇಡ್ ವಿತರಣೆ ಮಾಡಿದರು. ಕೊರಟಗೆರೆ ಕ್ಷೇತ್ರದ ವಿವಿಧ ಕಡೆಗಳಲ್ಲಿ ಹೆಚ್‌ಡಿಕೆ ಹುಟ್ಟಹಬ್ಬ ಆಚರಣೆ ಮಾಡಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next