Advertisement
ಬಿಡದಿ ಬಳಿಯ ರೆಸಾರ್ಟ್‌ನಲ್ಲಿ ಶನಿವಾರ ನಡೆದ ಕಾರ್ಯಕಾರಿಣಿಯಲ್ಲಿ, ಸಮಾವೇಶಗಳ ಜತೆಗೆ ಸಾಮಾಜಿಕ ಜಾಲತಾಣ ಸಮರ್ಪಕವಾಗಿ ಬಳಕೆ ಮಾಡಿಕೊಂಡು ಮತದಾರರ ಮನಗೆಲ್ಲಲು ಕಾರ್ಯಕ್ರಮ ರೂಪಿಸಲು ತೀರ್ಮಾನಿಸಲಾಯಿತು.
.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ 20 ತಿಂಗಳು ಮಾಡಿದ ಸಾಧನೆ ಜನರಿಗೆ ಮನವರಿಕೆ ಮಾಡಿಕೊಟ್ಟರೆ ನಾವು ಅಧಿಕಾರಕ್ಕೆ ಬರುವುದು ಕಷ್ಟವೇನಲ್ಲ. ನಮ್ಮಲ್ಲಿ ಎಲ್ಲರೂ ನಾಯಕರೇ, ಕಾರ್ಯಕರ್ತರಾಗಿ ಬೀದಿಗಿಳಿದು ಕೆಲಸ ಮಾಡಲು ಯಾರೂ ಸಿದಟಛಿರಿಲ್ಲ. ಎಲ್ಲರೂ ಸೇರಿ ಹೋರಾಟ ಮಾಡಿದರೆ ಪಕ್ಷ ಅಧಿಕಾರಕ್ಕೆ ತರಲು ಸಾಧ್ಯ ಎಂದು ಹೇಳಿದರು.
Related Articles
Advertisement
ಕೆಲ್ಸ ಮಾಡದಿದ್ರೆ ತೆಗೆದು ಹಾಕಿ: ಜಿಲ್ಲಾ ಮತ್ತು ತಾಲೂಕು ಹಾಗೂ ನಗರದ ಯುವ ಘಟಕದಲ್ಲಿ ಯಾರು ಸರಿಯಾಗಿ ಕೆಲಸಮಾಡುವುದಿಲ್ಲವೋ ಅಂತವರನ್ನು ತಕ್ಷಣ ಬದಲಾವಣೆ ಮಾಡಲು ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ
ಅವರಿಗೆ ವೇದಿಕೆಯಲ್ಲೇ ದೇವೇಗೌಡರು ಸೂಚಿಸಿದರು. ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ರಾಷ್ಟ್ರಾಧ್ಯಕ್ಷನಾಗಿ ನಾನು ತೆಗೆದುಕೊಳ್ಳುವ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರಬೇಕು. ರಾಜ್ಯದ ಹಿತ ದೃಷ್ಟಿಯಿಂದ ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ತರಲು ಯುವಕರು ಪಕ್ಷ ಸಂಘಟನೆಗೆ ಎಷ್ಟೋತ್ತಿಗಾದರೂ ಸರಿ ಎಲ್ಲಿಗಾದರೂ ಸರಿ ಕರೆದರೆ ಬರಲು ನಾನು ಸಿದಟಛಿ ಎಂದು ತಿಳಿಸಿದರು. ಸೂಚನೆ: ಯುವ ಜೆಡಿಎಸ್ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಮಾತನಾಡಿ, ಡಿಸೆಂಬರ್‌ನಲ್ಲಿ ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಯುವ ಜೆಡಿಎಸ್ ಪದಾಧಿಕಾರಿಗಳ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು. ಮುಂಬರುವ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷದ ಸಂಘಟನೆಗೆ ಯುವ ಕಾರ್ಯಕರ್ತರು ಹೆಚ್ಚಾಗಿ ತೊಡಗಿಸಿ
ಕೊಳ್ಳಬೇಕಾಗಿದೆ. ಯಾವ್ಯಾವ ಜಿಲ್ಲೆಯಲ್ಲಿ ಯಾವ ದಿನಾಂಕದಂದು ಯುವ ಕಾರ್ಯಕರ್ತರ ಸಮಾವೇಶ ನಡೆಯಬೇಕು ಎಂಬುದರ ಬಗ್ಗೆ ಮಾಹಿತಿ ಕೊಡುವಂತೆ ಅವರು ಜಿಲ್ಲಾ ಯುವ ಘಟಕಗಳ ಎಲ್ಲಾ ಅಧ್ಯಕ್ಷರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ವಿಧಾನ ಪರಿಷತ್ ಸದಸ್ಯರಾದ ರಮೇಶ್ ಬಾಬು, ಕಾಂತರಾಜು, ಯುವ ಜೆಡಿಎಸ್‌ನ ಚಂದ್ರಶೇಖರ್, ರಾಮನಗರ ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ವಿ.ನರಸಿಂಹಮೂರ್ತಿ, ಯಾದಗಿರಿಯ ಶರಣ್ ಗೌಡ ಮತ್ತಿತರರು ಇದ್ದರು. ಹೊರಗೆ ಹಾಕೋದೂ ಗೊತ್ತು ಎಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಅವರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿರುವ ಎಚ್.ಡಿ.ದೇವೇಗೌಡ, “ಚೇಷ್ಟೆ ಹೆಚ್ಚಾದರೆ ಪಕ್ಷದಿಂದ ಹೊರ ಹಾಕಬೇಕಾಗುತ್ತದೆ. ನನಗೆ ಬೆಳೆಸೋದು ಗೊತ್ತು, ಹೊರಗೆ ಹಾಕೋದೂ ಗೊತ್ತು’ ಎಂದು ಹೇಳಿದರು. ಪ್ರಜ್ವಲ್ ರೇವಣ್ಣರ ಹೇಳಿಕೆಗಳು ಪಕ್ಷಕ್ಕೆ ಮುಜುಗರ ತರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಕೆಲವರು ಪ್ರಜ್ವಲ್ ರೇವಣ್ಣನ ಹೇಳಿಕೆಗಳು ಮನರಂಜನೆ ಎಂದು ಭಾವಿಸಿದ್ದಾರೆ. ಇದಕ್ಕೆ ತಾವು ಅವಕಾಶ ಕೊಡೋಲ್ಲ, ತೀರಾ ಚೇಷ್ಟೆ ಮಾಡಿದರೆ ಹೊರಗಾಕೋದು ಗೊತ್ತು’ ಎಂದು ತಿಳಿಸಿದರು. ನಿಖೀಲ್ ತನಗೆ ಅಧಿಕಾರ ಬೇಡ ಎಂದು ಹೇಳಿದ್ದಾನೆ, ಆದರೆ ಚುನಾವಣೆ ಸಮಯದಲ್ಲಿ ಪಕ್ಷಕ್ಕಾಗಿ ದುಡಿಯುವುದಾಗಿಯೂ ಹೇಳಿದ್ದಾನೆ. ಪ್ರಜ್ವಲ್ ರೇವಣ್ಣ ರಾಜಕೀಯದಲ್ಲಿ ಬೆಳೆಯಬೇಕಾದವನು. ಆತನ ಬೆಳೆವಣಿಗೆ ತಡೆಯೋಕೆ ಆಗೊಲ್ಲ. ಅವರ ಹಣೆ ಬರಹ
ಏನಿದಿಯೋ ತಪ್ಪಿಸೋಕೆ ಆಗೋಲ್ಲ. ಆದರೆ, ಸಹನೆ-ತಾಳ್ಮೆ ಮುಖ್ಯ ಎಂದರು. ಯೋಗೇಶ್ವರ್‌ರನ್ನು
ಪಕ್ಷಕ್ಕೆ ಕರೆದಿಲ್ಲ
ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್ ಅವರನ್ನು ತಾವು ಪಕ್ಷಕ್ಕೆ ಕರೆದಿಲ್ಲ. ಬಿಜೆಪಿ ಸೇರುವುದಾಗಿ ಹೇಳಿಕೊಂಡಿದ್ದಾರೆ. ಅನಿತಾ ಕುಮಾರಸ್ವಾಮಿ ಚನ್ನಪಟ್ಟಣದಿಂದ ಕಳೆದ ಬಾರಿ ಕಡಿಮೆ ಅಂತರದಿಂದ ಸೋತಿದ್ದಾರೆ. ಸ್ಥಳೀಯ ಮುಖಂಡರು ಅವರ ಮೇಲೆ ಈ ಬಾರಿ ಸ್ಪರ್ಧಿಸಲು ಒತ್ತಡ ಹೇರುತ್ತಿರಬಹುದು.ಅವರೆಲ್ಲಾ ಸಮಾಧಾನವಾಗಿರಬೇಕು.ಚನ್ನಪಟ್ಟಣದಲ್ಲಿ ಕಾರ್ಯಕರ್ತರಿಗೆ ಟಿಕೆಟ್ ಕೊಡ್ತೀವಿ ಎಂದು ಹೇಳುವ ಮೂಲಕ ಅನಿತಾ ಕುಮಾರಸ್ವಾಮಿ ಸ್ಪರ್ಧೆ ಇನ್ನೂ ಅಂತಿಮಗೊಂಡಿಲ್ಲ ಎಂಬ ಸಂದೇಶವನ್ನು ದೇವೇಗೌಡರು ರವಾನಿಸಿದರು. 120 ಕ್ಷೇತ್ರ ಗೆಲ್ಲುವ ಹಠ
ಮುಂದಿನ ಚುನಾವಣೆಯಲ್ಲಿ ಕನಿಷ್ಠ 120 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಗುರಿ ನಮ್ಮದು. ಹೀಗಾಗಿ, ಬಂದವರಿಗೆಲ್ಲ ಟಿಕೆಟ್
ಕೊಡುವುದಿಲ್ಲ. ಗೆಲುವೇ ಮಾನದಂಡ. ಕ್ಷೇತ್ರ ಬಿಟ್ಟು ಬೆಂಗಳೂರಿನಲ್ಲಿ ಕಾಲ ಕಳೆದರೆ ಟಿಕೆಟ್ ಸಿಗುತ್ತದೆ ಎಂಬುದು ಭ್ರಮೆಯಷ್ಟೇ. ಟಿಕೆಟ್ ಯಾರಿಗೆ ಕೊಡಬೇಕೆಂದು ಇಲ್ಲಿ ಅಪ್ಪ-ಮಕ್ಕಳು ತೀರ್ಮಾನಿಸುವುದಿಲ್ಲ. ಅದಕ್ಕೆ ಅಂತಾನೆ ಟಿಕೆಟ್ ಹಂಚಿಕೆ ಸಮಿತಿ ಇದೆ. ಅದರಲ್ಲಿ ಬಸವರಾಜ ಹೊರಟ್ಟಿ, ಎಚ್.ವಿಶ್ವನಾಥ್, ಎಚ್.ಸಿ.ನೀರಾವರಿ ಅಂತಹ ಹಿರಿಯ ನಾಯಕರಿದ್ದಾರೆ. ಪ್ರತಿಯೊಂದು ಕ್ಷೇತ್ರದಲ್ಲೂ ಗೆಲ್ಲುವ ಉದ್ದೇಶ ಇಟ್ಟುಕೊಂಡೇ ಅಭ್ಯರ್ಥಿಗಳ ಆಯ್ಕೆ ನಡೆಯಲಿದ್ದು ಸಾಮೂಹಿಕ ಚರ್ಚೆಯ ನಂತರವೇ ಟಿಕೆಟ್ ನಿರ್ಧಾರವಾಗಲಿದೆ.
– ಎಚ್.ಡಿ.ದೇವೇಗೌಡ