Advertisement

23ರಂದು ಕುಮಾರ ಪಥ-2018

12:50 PM Jul 18, 2017 | Team Udayavani |

ಹುಬ್ಬಳ್ಳಿ: ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಕುರಿತು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಈ ಭಾಗದ ಜನರ ಜೊತೆ ಸಂವಾದ ನಡೆಸುವ “ಕುಮಾರ ಪಥ-2018 ಚಿಂತನ-ಮಂಥನ’ ಕಾರ್ಯಕ್ರಮವನ್ನು ಜು. 23ರಂದು ಬೆಳಗ್ಗೆ 9 ಗಂಟೆಗೆ ಧಾರವಾಡದ ವಿದ್ಯಾಗಿರಿಯ ಜೆಎಸ್‌ಎಸ್‌ ಕಾಲೇಜು ಆವರಣದ ಸನ್ನಿಧಿ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದೆ ಎಂದು ಜೆಡಿಎಸ್‌ ಮುಖಂಡ ರಾಮನಾಥ ಶೆಣೈ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. 

Advertisement

ಕುಮಾರಸ್ವಾಮಿ ಅಭಿಮಾನಿ ಬಳಗದ ಸಾಮಾಜಿಕ ಜಾಲತಾಣಗಳ ಕಾರ್ಯಕರ್ತರ ವೇದಿಕೆ ಚಿಂತನ-ಮಂಥನ ಸಂವಾದ ಹಮ್ಮಿಕೊಂಡಿದ್ದು, ಕುಮಾರಸ್ವಾಮಿ ಪಾಲ್ಗೊಳ್ಳಲಿದ್ದಾರೆ. ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳಾದ ಮಹದಾಯಿ, ಕಳಸಾ-ಬಂಡೂರಿ, ರೈತರ, ಶೈಕ್ಷಣಿಕ, ಉದ್ಯೋಗ, ಕೈಗಾರಿಕೆ ಸಮಸ್ಯೆಗಳ ಕುರಿತು ಚರ್ಚಿಸಲಿದ್ದಾರೆ. ಆಸಕ್ತರು https://goo.gl/forms/ MdFPUibipuLmowOE2 ಆನ್‌ಲೈನ್‌ ಲಿಂಕ್‌ ಮೂಲಕ ನೋಂದಣಿ ಮಾಡಿಸಬೇಕು.

ಈವರೆಗೆ 2200 ಜನ ನೋಂದಣಿ ಮಾಡಿಸಿದ್ದು, 4000 ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಒಂದು ದಿನ ಮುಂಚಿತವಾಗಿ ನೋಂದಣಿ ಸ್ಥಗಿತಗೊಳ್ಳಲಿದೆ. ಮುಂದಿನ ದಿನಗಳಲ್ಲಿ ರಾಯಚೂರು, ಕಲಬುರಗಿ ಮುಂತಾದೆಡೆ ಸಂವಾದ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು. ನಾಗನಗೌಡ ಪಾಟೀಲ, ಮೋಹನ ಅರ್ಕಸಾಲಿ, ರೋಷನ್‌ ಬಾವಜಿ, ನವೀನ ಮುನಿಯಪ್ಪನವರ, ಶ್ರೀಧರ ಬಿಡಕಣ್ಣವರ, ಅಶಕ ಮುಲ್ಲಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next