Advertisement

ಕುಮಾರ ಸಂಗಕ್ಕರ ಕೌಂಟಿಯೇ ಕೊನೆಯ ಮೆಟ್ಟಿಲು

11:57 AM May 24, 2017 | |

ಲಂಡನ್‌: ಶ್ರೀಲಂಕಾದ ಮಾಜಿ ನಾಯಕ, ವಿಶ್ವಶ್ರೇಷ್ಠ ಬ್ಯಾಟ್ಸ್‌ಮನ್‌ ಹಾಗೂ ವಿಕೆಟ್‌ ಕೀಪರ್‌ಗಳಲ್ಲಿ ಒಬ್ಬರಾಗಿರುವ ಕುಮಾರ ಸಂಗಕ್ಕರ ಪ್ರಸಕ್ತ ಸಾಲಿನ ಇಂಗ್ಲಿಷ್‌ ಕೌಂಟಿ ಕ್ರಿಕೆಟ್‌ ಪಂದ್ಯಾವಳಿ ಮುಗಿದೊಡನೆ ಪ್ರಥಮ ದರ್ಜೆ ಕ್ರಿಕೆಟಿನಿಂದ ದೂರ ಸರಿಯುವ ನಿರ್ಧಾರಕ್ಕೆ ಬಂದಿದ್ದಾರೆ. 

Advertisement

ಇದರೊಂದಿಗೆ ಅವರು ಕ್ರಿಕೆಟಿಗೆ ಪರಿಪೂರ್ಣ ವಿದಾಯ ಹೇಳಿದಂತಾಗುತ್ತದೆ. ಕೌಂಟಿ ಕ್ರಿಕೆಟ್‌ನಲ್ಲಿ ಅವರು ಸರ್ರೆ ಕೌಂಟಿಯನ್ನು ಪ್ರತಿನಿಧಿಸುತ್ತಿದ್ದಾರೆ.

“ಅನಿವಾರ್ಯವಾದುದರ ವಿರುದ್ಧ ಸೆಣ ಸಾಡಬೇಕು, ಹಾಗೆಯೇ ಉಚ್ಛಾ†ಯ ಸ್ಥಿತಿಯಲ್ಲಿರುವಾಗಲೇ ವಿದಾಯ ಹೇಳ ಬೇಕು…’ ಎಂದು ಕುಮಾರ ಸಂಗಕ್ಕರ ಬಿಬಿಸಿ ಜತೆ ಮಾತಾಡುತ್ತ ತಮ್ಮ ನಿರ್ಧಾರವನ್ನು ಪ್ರಕಟಿಸಿದರು.”ನಾನಿಲ್ಲಿ ಕೊನೆಯ ಚತುರ್ದಿನ ಪಂದ್ಯ ವನ್ನು ಆಡುತ್ತಿದ್ದೇನೆ. 

ಇನ್ನು ಕೆಲವೇ ದಿನ
ಗಳಲ್ಲಿ ನನಗೆ 40 ತುಂಬುತ್ತದೆ. ಇದು ಕೌಂಟಿ ಹಾಗೂ ಪ್ರಥಮ ದರ್ಜೆ ಕ್ರಿಕೆಟಿ ನಿಂದ ದೂರ ಸರಿಯಲು ಸೂಕ್ತ ಸಮಯ ಎಂದು ನನಗನಿಸುತ್ತದೆ. ಕ್ರಿಕೆಟಿಗರಿಗೆ, ಕ್ರೀಡಾಪಟುಗಳಿಗೆಲ್ಲರಿಗೂ ಚಲಾವಣೆ ಕಳೆದುಕೊಳ್ಳುವ ಸಮಯವೊಂದು ಎದು ರಾಗುತ್ತದೆ. ಆಗ ನಾವು ಹೊರನಡೆಯಲೇ ಬೇಕು..’ ಎಂದು ಸಂಗಕ್ಕರ ಹೇಳಿದರು.

ಕುಮಾರ ಸಂಗಕ್ಕರ 2015ರಲ್ಲಿ ಟೆಸ್ಟ್‌ ಹಾಗೂ ಏಕದಿನ ಕ್ರಿಕೆಟಿಗೆ ವಿದಾಯ ಹೇಳಿದ್ದರು. ಇದರ ಹಿಂದಿನ ವರ್ಷ ಕೊನೆಯ ಟಿ-20 ಅಂತಾರಾಷ್ಟ್ರೀಯ ಪಂದ್ಯ ವಾಡಿದ್ದರು. ಆದರೆ 2018ರ ತನಕ ಟಿ-20 ಒಪ್ಪಂದಗಳು ಇರುವುದರಿಂದ ಚುಟುಕು ಕ್ರಿಕೆಟ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. 

Advertisement

“ಇಷ್ಟೊಂದು ಸುದೀರ್ಘ‌ ಕಾಲದ ತನಕ ಕ್ರಿಕೆಟ್‌ ಆಡುವ, ದೇಶವನ್ನು ಪ್ರತಿನಿಧಿಸುವ ಅವಕಾಶ ಲಭಿಸಿದ್ದೇ ನನ್ನ ಪಾಲಿನ ಹೆಮ್ಮೆ. ಆದರೆ ಕ್ರಿಕೆಟಿಗೆ ಹೊರತಾದ ಸುದೀರ್ಘ‌ ಜೀವನಾವಧಿ ನನಗಾಗಿ ಕಾದಿದೆ. ಇದ ರಲ್ಲಿನ್ನು ತೊಡಗಿಸಿಕೊಳ್ಳಬೇಕು…’ ಎಂದು ಬಿಬಿಸಿ ಸಂದರ್ಶನದಲ್ಲಿ ಸಂಗಕ್ಕರ ಹೇಳಿದರು.

2015ರಲ್ಲಿ ಸರ್ರೆ ಪರ ಆಡತೊಡಗಿದ ಕುಮಾರ ಸಂಗಕ್ಕರ ಕಳೆದ ವರ್ಷ ಒಂದು ಸಾವಿರ ರನ್‌ ಪೇರಿಸಿದ್ದರು. ಕಳೆದ ವಾರಾಂತ್ಯದಲ್ಲಿ ಮಿಡ್ಲ್ಸೆಕ್ಸ್‌ ವಿರುದ್ಧ 2 ಶತಕ ಬಾರಿಸಿದ ಹೆಗ್ಗಳಿಕೆಯೂ ಇವರ ಪಾಲಿಗಿದೆ. ಹೀಗೆ ಉತ್ತಮ ಫಾರ್ಮ್ನಲ್ಲಿರುವಾಗಲೇ ಸಂಗಕ್ಕರ ಕ್ರಿಕೆಟಿಗೆ ಗುಡ್‌ಬೈ ಹೇಳುತ್ತಿದ್ದಾರೆ. ಸೆಪ್ಟಂಬರ್‌ನಲ್ಲಿ 2017ರ ಕೌಂಟಿ ಋತು ಮುಗಿಯಲಿದೆ.134 ಟೆಸ್ಟ್‌ ಪಂದ್ಯಗಳಿಂದ 12,400 ರನ್‌ ಪೇರಿಸಿರುವ ಸಂಗಕ್ಕರ ಅವರಿಗೆ ಈ ಯಾದಿಯಲ್ಲಿ 5ನೇ ಸ್ಥಾನ. 404 ಏಕದಿನ ಪಂದ್ಯಗಳಲ್ಲಿ ಆಡಿದ್ದು, 14,234 ರನ್‌ ಗಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next