Advertisement
ಈ ಬಗ್ಗೆ ಪ್ರಕಟಣೆಯಲ್ಲಿ ಮಾಹಿತಿ ನೀಡಿದ ಸಂಸ್ಥೆ, ಕುಮಾರ್ ಮಂಗಳಂ ಬಿರ್ಲಾ ತಮ್ಮ ಕಾರ್ಯ ನಿರ್ವಹಣಾಧಿಕಾರಿ ಹುದ್ದೆಯಿಂದ ಕೆಳಗಿಳಿದಿದ್ದು, ಈಗ ಆದಿತ್ಯ ಬಿರ್ಲಾ ಸಮೂಹದ ನಾಮನಿರ್ದೇಶಿತರಾದ ಹಿಮಾಂಶು ಕಪಾನಿಯಾ ಅವರನ್ನು ಕಾರ್ಯನಿರ್ವಾಹಣಾಧಿಕಾರಿಯನ್ನಾಗಿ ನೇಮಿಸಿಕೊಳ್ಳಲಾಗಿದೆ ಎಂದು ವೊಡಾಫೋನ್ ಐಡಿಯಾ ಲಿಮಿಟೆಡ್ (ವಿಐಎಲ್) ಮಾಹಿತಿ ನೀಡಿದೆ.
Related Articles
Advertisement
ಈ ಹಿನ್ನೆಲೆಯಲ್ಲಿ ಮಂಡಳಿಯು “ನಾನ್-ಎಕ್ಸಿಕ್ಯುಟಿವ್ ಡೈರೆಕ್ಟರ್” ಆಗಿರುವ ಹಿಮಾಂಶು ಕಪಾನಿಯಾ ಅವರನ್ನು “ಅವಿರೋಧವಾಗಿ ಆಯ್ಕೆ ಮಾಡಿದೆ” ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಕಪಾನಿಯಾ ಕಳೆದ 25 ವರ್ಷಗಳ ಕಾಲ ಟೆಲಿಕಾಂ ಉದ್ಯಮದಲ್ಲಿ ಅನುಭವ ಹೊಂದಿದ್ದು, ಕೆಲವು ಟೆಲಿಕಾಂ ಕಂಪನಿಗಳಲ್ಲಿ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಿ ಅನುಭವ ಹೊಂದಿದ್ದಾರೆ.
ಇನ್ನು ಎರಡು ವರ್ಷಗಳ ಕಾಲ ಗ್ಲೋಬಲ್ ಜಿಎಸ್ ಎಮ್ ಎ ಬೋರ್ಡ್ ನಲ್ಲಿ ಸೇವೆ ಸಲ್ಲಿಸಿದ್ದಾರೆ. ಸೆಲ್ಯುಲಾರ್ ಆಪರೇಟರ್ಸ್ ಅಸೋಸಿಯೇಶನ್ ಆಫ್ ಇಂಡಿಯಾ (COAI) ಅಧ್ಯಕ್ಷರಾಗಿ ಕೂಡ ಕಾರ್ಯನಿರ್ವಹಿಸಿದ್ದಾರೆ.
ಮಾತ್ರವಲ್ಲದೇ, ನಾಮನಿರ್ದೇಶನ ಮತ್ತು ಸಂಭಾವನೆ ಸಮಿತಿಯ ಶಿಫಾರಸಿನ ಆಧಾರದ ಮೇಲೆ, ಮಂಡಳಿಯು ಆದಿತ್ಯ ಬಿರ್ಲಾ ಸಮೂಹದ ನಾಮನಿರ್ದೇಶಿತ ಸುಶೀಲ್ ಅಗರ್ವಾಲ್ ಅವರನ್ನು ಹೆಚ್ಚುವರಿ ನಿರ್ದೇಶಕರಾಗಿ ನೇಮಿಸಿದೆ ಎಂದು ಕೂಡು ಸಂಸ‍್ಥೆ ತಿಳಿಸಿದೆ.
ಇದನ್ನೂ ಓದಿ : ಜಮೀರ್ ಅಹಮದ್, ರೋಷನ್ ಬೇಗ್ ಮನೆ ಮೇಲೆ ಇಡಿ ದಾಳಿ: ಐಎಂಎ ನಂಟು?