ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಆಟಗಾರ ಕುಲದೀಪ್ ಯಾದವ್ ಅವರು ಭಾರತಕ್ಕೆ ಮರಳಿದ್ದಾರೆ. ಗಾಯಗೊಂಡಿರುವ ಕಾರಣದಿಂದ ಕೂಟದ ನಡುವೆಯೇ ಯುಎಇ ತೊರೆದಿರುವ ಕುಲದೀಪ್ ಯಾದವ್ ಅವರು ಭಾರತದ ವಿಮಾನ ಏರಿದ್ದಾರೆ.
ಕೆಕೆಆರ್ ನ ಎಡಗೈ ಚೈನಮನ್ ಸ್ಪಿನ್ನರ್ ಕುಲದೀಪ್ ಯಾದವ್ ಅವರು ಅಭ್ಯಾಸ ನಡೆಸುವ ವೇಳೆ ಗಾಯಗೊಂಡಿದ್ದಾರೆ. ಫಿಲ್ಡಿಂಗ್ ಅಭ್ಯಾಸ ಮಾಡುತ್ತಿದ್ದ ಕುಲದೀಪ್ ರ ಮೊಣಗಂಟು ತಿರುಚಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿದೆ.
ಕುಲದೀಪ್ ಯಾದವ್ ಸದ್ಯ ಗುಣಮುಖರಾಗುವ ಯಾವುದೇ ಸಾಧ್ಯತೆಯಿಲ್ಲ. ಹೀಗಾಗಿ ಅವರು ಭಾರತಕ್ಕೆ ಮರಳಿದ್ದಾರೆ. ಅವರು ಮುಂಬೈನಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಪಡಲಿದ್ದು, ಅವರಿಗೆ ಕನಿಷ್ಠ ನಾಲ್ಕು ತಿಂಗಳ ವಿಶ್ರಾಂತಿಯ ಅಗತ್ಯವಿದೆ. ಹೀಗಾಗಿ ಮುಂದಿನ ರಣಜಿ ಟ್ರೋಫಿಯಲ್ಲೂ ಕುಲದೀಪ್ ಕಣಕ್ಕಿಳಿಯುವುದು ಅನುಮಾನ ಎಂದು ವರದಿಯಾಗಿದೆ.
ಇದನ್ನೂ ಓದಿ:ಯುಜಿ ಚಾಹಲ್ ನನ್ನು ವಿಶ್ವಕಪ್ ತಂಡದಿಂದ ಕೈಬಿಟ್ಟಿದ್ಯಾಕೆ: ಸೆಹವಾಗ್ ಅಚ್ಚರಿ
ಈ ಹಿಂದೆ ಕೆಕೆಆರ್ ತಂಡದ ಪ್ರಮುಖ ಸ್ಪಿನ್ನರ್ ಆಗಿದ್ದ ಕುಲದೀಪ್ ಯಾದವ್ ಈ ಐಪಿಎಲ್ ಸೀಸನ್ ನಲ್ಲಿ ಒಂದೇ ಒಂದು ಪಂದ್ಯವಾಡಿಲ್ಲ. ಕೆಕೆಆರ್ ತಂಡದಲ್ಲಿ ವರುಣ್ ಚಕ್ರವರ್ತಿ ಮತ್ತು ಸುನೀಲ್ ನರೈನ್ ಪ್ರಮುಖ ಸ್ಪಿನ್ನರ್ ಗಳಾಗಿ ಆಡುತ್ತಿದ್ದಾರೆ.