Advertisement

18 ವರ್ಷಗಳ ಬಳಿಕ ಅಂ.ರಾ.ಕೋರ್ಟಲ್ಲಿ ಭಾರತ-ಪಾಕ್‌ ಮುಖಾಮುಖಿ

09:45 AM May 15, 2017 | Karthik A |

ಹೊಸದಿಲ್ಲಿ: ಬರೋಬ್ಬರಿ 18 ವರ್ಷಗಳ ಬಳಿಕ ಅಂತಾರಾಷ್ಟ್ರೀಯ ನ್ಯಾಯಾಲಯ (ಐಸಿಜೆ)ಯಲ್ಲಿ ಭಾರತ -ಪಾಕಿಸ್ಥಾನ ಸೋಮವಾರ ಮುಖಾಮುಖೀಯಾಗಲಿವೆ. ಗೂಢಚಾರಿಕೆ ಆರೋಪದ ಮೇಲೆ ಜಾಧವ್‌ ಅವರಿಗೆ ಪಾಕ್‌ ಸೇನಾ ಕೋರ್ಟು ಗಲ್ಲುಶಿಕ್ಷೆ ವಿಧಿಸಿದ್ದು, ಈ ವಿರುದ್ಧ ಭಾರತ ಮಧ್ಯಪ್ರವೇಶಿಸುವಂತೆ ಕೋರ್ಟ್‌ ಮೆಟ್ಟಿಲೇರಿತ್ತು. ಪರಿಣಾಮ ಪಾಕ್‌ ಯತ್ನಕ್ಕೆ ತಡೆಯಾಜ್ಞೆ ನೀಡಲಾಗಿತ್ತು.

Advertisement

18 ವರ್ಷಗಳ ಹಿಂದೆ ಪಾಕ್‌, ತನ್ನ ನೌಕಾ ಪಡೆ ಯುದ್ಧವಿಮಾನವನ್ನು ಭಾರತ ಹೊಡೆದುರುಳಿಸಿದ್ದರ ವಿರುದ್ಧ ಇದೇ ಕೋರ್ಟ್‌ಗೆ ದೂರು ಕೊಂಡೊಯ್ದಿತ್ತು. ಆದರೆ ಆ ಯತ್ನದಲ್ಲಿ ಭಾರತ ವಿರುದ್ಧ ತೀರ್ಪು ಬಂದಿತ್ತು. ನೆದರ್ಲೆಂಡ್‌ನ‌ ಹೇಗ್‌ನಲ್ಲಿ ಐಸಿಜೆ ನ್ಯಾಯಾಲಯವಿದ್ದು, ಅಲ್ಲಿ ಮುಕ್ತ ವಿಚಾರಣೆ ನಡೆಸಲಿದೆ. ಎರಡೂ ರಾಷ್ಟ್ರಗಳ ನ್ಯಾಯವಾದಿಗಳು ಹಾಜರಿರುವಂತೆ ಹೇಳಲಾಗಿದೆ. ಭಾರತದ ಪರ ಹಿರಿಯ ವಕೀಲ ಹರೀಶ್‌ ಸಾಳ್ವೆ ವಾದ ಮಂಡನೆ ಮಾಡಲಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next