Advertisement

ಕುಳವೂರು -ಕದ್ರಡಿ ಧೂಮಾವತಿ ರಸ್ತೆಗೆ ತಡೆ: ಗ್ರಾಮಸ್ಥರಿಂದ ದೂರು

03:45 AM Jul 05, 2017 | Harsha Rao |

ಮುತ್ತೂರು: ಮುತ್ತೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕುಳವೂರು ಗ್ರಾಮದ ತೇರೆಜಾಲು -ಗೆಂದಡು³ ಮತ್ತು ಕುಳವೂರು ಕದ್ರಡಿ ಧೂಮಾವತಿ ರಸ್ತೆಗೆ ಯಾರೋ ಕೆಲವರು ಕೆಂಪುಕಲ್ಲುಗಳನಿಟ್ಟು ತಡೆ ಮಾಡಿದ್ದಾರೆ, ಕದ್ರಡಿ ಧೂಮಾವತಿ ರಸ್ತೆಯಲ್ಲಿ ಜೆಸಿಬಿಯಿಂದ 15 ಅಡಿ ಉದ್ದ, 10 ಅಡಿ ಅಗಲ ಹಾಗೂ 5 ಅಡಿ ಆಳದ ಗುಂಡಿ ತೆಗೆಸಿ ಸಾರ್ವಜನಿಕರು ಸಂಚರಿಸದಂತೆ ಮಾಡಿದ್ದಾರೆ ಎಂದು ಗ್ರಾಮಸ್ಥರು ಪಂಚಾಯತ್‌ಗೆ ದೂರು ನೀಡಿದ್ದಾರೆ.

Advertisement

ಒಟ್ಟು 3,000 ಜನಸಂಖ್ಯೆಯಿರುವ ಈ ಭಾಗದ ಜನರ ಅನುಕೂಲಕ್ಕಾಗಿ ರಸ್ತೆ ನಿರ್ಮಿಸಲು ಸಾರ್ವಜನಿಕರು ಒಟ್ಟಾಗಿ ತಮ್ಮ ವರ್ಗಸ್ಥಳವನ್ನು ನೀಡಿದ್ದು, ರಸ್ತೆಗೆ ಸರಕಾರ ಹಾಗೂ ಪಂಚಾಯತ್‌ನ ಅನುದಾನ ಒದಗಿಸಲಾಗಿದ್ದರೂ ಈಗ ಅವೆಲ್ಲವೂ ಪ್ರಯೋಜನಕ್ಕೆ ಸಿಗದಂತಾಗಿದೆ. ಈ ರಸ್ತೆಗಳು ಕ್ರಮವಾಗಿ ಇಪ್ಪತ್ತೆರಡು ಹಾಗೂ ಹನ್ನೆರಡು ವರ್ಷಗಳಿಂದ ಸಾರ್ವಜನಿಕರ ಬಳಕೆಯಲ್ಲಿವೆ. ಸರಕಾರದ ವತಿಯಿಂದ ಸುಮಾರು 50 ಲಕ್ಷ ರೂಪಾಯಿಯವರೆಗೆ ಅನುದಾನದ ಮೂಲಕ ಡಾಮರು ಮತ್ತು ಕಾಂಕ್ರೀ ಟ್‌ ಕಾಮಗಾರಿ ನಡೆದಿದೆ.

ರಸ್ತೆಗೆ ತಡೆಯೊಡ್ಡಿದವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು ಮತ್ತು ತಡೆಯನ್ನು ತೆರವುಗೊಳಿಸಬೇಕು ಎಂದು ಸ್ಥಳೀಯರು ದೂರಿನಲ್ಲಿ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next